ನಾಲ್ಕು ತಿಂಗಳಿನಿಂದಲೂ ಸಾಮಾಜಿಕ ಪಿಂಚಣಿಗೆ ಗ್ರಹಣ

ತುಮಕೂರು ಜಿಲ್ಲಾಧಿಕಾರಿ ಕಚೇರಿ
ತುಮಕೂರು ಜಿಲ್ಲಾಧಿಕಾರಿ ಕಚೇರಿ
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯ 1.18 ಲಕ್ಷ ಲಾನುಭವಿ ಬದುಕು ಬೀದಿಗೆ
  • ದಾಖಲಾತಿ ಪರಿಶೀಲನೆಗೆ ಕಂದಾಯ ಇಲಾಖೆ ರ್ನಿಲರ್ಕ್ಷ್ಯ

ತುಮಕೂರು: ವಿವಿಧ ಸಾಮಾಜಿಕ ಯೋಜನೆಗಳಲ್ಲಿ ಪಿಂಚಣಿ ಪಡೆಯುತ್ತಿರುವ ಜಿಲ್ಲೆಯ 1.18 ಲಕ್ಷ ಲಾನುಭವಿಗಳಿಗೆ ಕಳೆದ ನಾಲ್ಕು ತಿಂಗಳಿನಿಂದಲೂ ಪಿಂಚಣಿ ತಡೆಹಿಡಿಯಲಾಗಿದೆ. ಸಂದೇಹಾಸ್ಪದ ಪ್ರಕರಣಗಳೆಂದು ಪರಿಗಣಿಸಿ ತಾತ್ಕಾಲಿಕವಾಗಿ ಪಿಂಚಣಿ ಇಲ್ಲದ ಹಿನ್ನೆಲೆಯಲ್ಲಿ ಅಂಕವಿಕಲರು, ವೃದ್ಧರು, ವಿದುವೆಯರು ಜೀವನ ನಿರ್ವಹಣೆಗೂ ಕಷ್ಟಪಡುವಂತಾಗಿದೆ.

ಅರ್ಹತಾ ಮಾನದಂಡ ಹೊಂದದೆ ಪಿಂಚಣಿ ಪಡೆಯುತ್ತಿರುವ ಬಗ್ಗೆ ದೂರು ಸಲ್ಲಿಕೆಯಾಗಿದೆ ಎಂಬ ನೆಪದಲ್ಲಿ ಕುಟುಂಬ ದತ್ತಾಂಶದಿಂದ ಮಾಹಿತಿ ಪಡೆದು ವಯಸ್ಸು, ಆದಾಯ ಮಿತಿ, ಎಚ್​ಆರ್​ಎಂಎಸ್​, ಆದಾಯ ತೆರಿಗೆ, ಎಪಿಎಲ್​ ಕಾರ್ಡ್​ ಹೊಂದಿರುವವರನ್ನು ಸಂದೇಹಾಸ್ಪದ ಲಾನುಭವಿಗಳೆಂದು ಗುರುತಿಸಿ ಭೌತಿಕ ಪರಿಶೀಲನೆಗೆ ಸಂಯೋಜನೆ ತಂತ್ರಾಂಶ ಕೂಡ ಸಿದ್ಧಪಡಿಸಲಾಗಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳ ರ್ನಿಲಕ್ಷ$್ಯದಿಂದ ಸಾವಿರಾರು ಅರ್ಹ ಲಾನುಭವಿಗಳಿಗೂ ತೊಂದರೆಯಾಗಿದೆ.
ರಾಜ್ಯದಲ್ಲಿಯೂ ಬರೋಬ್ಬರಿ 23.14 ಲಕ್ಷ ಫಲಾನುಭವಿಗಳು ಸಂದೇಹಾಸ್ಪದ ಎಂದು ಕಂಡು ಬಂದಿದ್ದು, ಪರಿಶೀಲನೆ ಸಮಯದಲ್ಲಿ ದಾಖಲಾತಿ ಹಾಜರುಪಡಿಸದ, ನೀಡಿದ ವಿಳಾಸದಲ್ಲಿ ವಾಸವಿಲ್ಲದಿದ್ದ ಮತ್ತು ಆದಾಯ ದೃಢೀಕರಣ ಪತ್ರ ಹಾಜರುಪಡಿಸದಿದ್ದ 18.06 ಲಕ್ಷ ಪಿಂಚಣಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜತೆಗೆ 51720 ರದ್ದುಪಡಿಸಲಾಗಿದೆ.
ಕುಟುಂಬ ದತ್ತಾಂಶದಿಂದ ಪಡೆದ ಮಾಹಿತಿಯಾನುಸಾರ ಸಂದೇಹಾಸ್ಪದವಾಗಿ ಪಿಂಚಣಿ ಪಡೆಯುತ್ತಿದ್ದ ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಗ್ರಾಮ ಅಧಿಕಾರಿಯವರು ಸಂಯೋಜನೆ ಮೊಬೈಲ್​ ಆಪ್​ ಮೂಲಕ ಪರಿಶೀಲಿಸಿ ಶಿಫಾರಸ್ಸು ಮಾಡಿರುವ ಪ್ರಕರಣಗಳನ್ನು ಸಂಬಂಧಪಟ್ಟ ತಹಸೀಲ್ದಾರ್​ ಪರಿಶೀಲಿಸಿ ಅರ್ಹರಿಗೆ ಪಿಂಚಣಿ ಮುಂದುವರಿಸಬೇಕಿದೆ.
ರಾಜ್ಯದಲ್ಲಿ ವೃದ್ಧಾಪ್ಯ ವೇತನದ 6.89 ಲಕ್ಷ ಲಾನುಭವಿಗಳು, ಮನಸ್ವಿನಿ 22315, ಮೈತ್ರಿ 396, ಅಂಕವಿಕಲ ವೇತನ 2.40 ಲಕ್ಷ, ಸಂಧ್ಯ ಸುರಾ 10.28ಲಕ್ಷ ಹಾಗೂ ವಿದುವಾ ವೇತನ ಪಡೆಯುತ್ತಿರುವ 3.33 ಲಕ್ಷ ನಾನುಭವಿಗಳು ಕಳೆದ ನಾಲ್ಕು ತಿಂಗಳಿನಿಂದಲೂ ಪಿಂಚಣಿ ಇಲ್ಲದೆ ಪರದಾಡುವಂತಾಗಿದ್ದು ಜೀವನ ನಿರ್ವಹಣೆಯೂ ಕಷ್ಟವಾಗಿದೆ.
ಜವಬ್ಧಾರಿ ಮರೆತ ವಿಎಒ, ತಹಸೀಲ್ದಾರ್​ಗಳು?
ಸಂದೇಹಾಸ್ಪದ ಪ್ರಕರಣಗಳೆಂದು ಪರಿಗಣಿಸಿ ತಾತ್ಕಾಲಿಕವಾಗಿ ಪಿಂಚಣಿ ಕಳೆದುಕೊಂಡಿರುವ ಲಾನುಭವಿಗಳ ಬಳಿ ತೆರಳಿ ದಾಖಲಾತಿಗಳನ್ನು ಪರಿಶೀಲಿಸುವ ಹೊಣೆಯಲ್ಲಿ ಆಯಾ ಗ್ರಾಮ ಆಡಳಿತಾಧಿಕಾರಿ ಕುಟುಂಬ ದತ್ತಾಂಶದಿಂದ ಪಡೆದ ಮಾಹಿತಿಯಾನುಸಾರ ಪರಿಶೀಲಿಸಿ ಸರಿಪಡಿಸುವ ಹೊಣೆಗಾರಿಕೆ ಹೊಂದಿದ್ದರೂ ಕಳೆದ ನಾಲ್ಕು ತಿಂಗಳಿನಿಂದಲೂ ಕೆಲಸವಾಗಿಲ್ಲ.
ವಾಸಸ್ಥಳದಲ್ಲಿ ಬದಲಾವಣೆಯಾದ, ದಾಖಲಾತಿ ನೀಡದವರಿಗೆ ತಿಳುವಳಿಕೆ ಜಾರಿ ಮಾಡಿದೆ ಮತ್ತು ಮೊಬೈಲ್​ ಸಂಖ್ಯೆಗೆ ಸಂದೇಶ ಕಳುಹಿಸಿ, 30 ದಿನಗಳೊಳಗೆ ದಾಖಲಾತಿಯನ್ನು ಸಂಬಂಧಿತ ತಾಲ್ಲೂಕು ತಹಸೀಲ್ದಾರ್​ಗೆ ಸಲ್ಲಿಸಲು ಸೂಚಿಸಲಾಗಿದೆ. ಸಲ್ಲಿಸಿದ ದಾಖಲಾತಿ ಪರಿಶೀಲಿಸಿ, ಅರ್ಹರಿಗೆ ಪಿಂಚಣಿ ಸಿಗುವಂತೆ ಮಾಡುವ ಹೊಣೆಗಾರಿಕೆ ಕಂದಾಯ ಇಲಾಖೆ ಮೇಲಿದೆ.
ಭೌತಿಕ ಪರಿಶೀಲನೆಯಲ್ಲಿ ದಾಖಲೆಗಳ ಕೊರತೆ, ವಿಳಾಸ ಬದಲಾವಣೆ ಹಾಗೂ ಕಾಲಮಿತಿಯಲ್ಲಿ ಆದಾಯ ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂಬ ತಾಂತ್ರಿಕ ಕಾರಣಗಳಿಂದ ಪಿಂಚಣಿಯಿಂದ ವಂಚಿತರಾಗಿರುವ ನಿಜವಾದ ಅರ್ಹ ವ್ಯದ್ಯರು, ವಿಧವೆಯರು ಮತ್ತು ವಿಕಲಚೇತನರಿಗೆ ನೆರವಾಗಲು ಸರ್ಕಾರ ಸಂಬಂಧಪಟ್ಟವರಿಗೆ ಸೂಚಿಸಬೇಕಿದೆ.
ತಾಲೂಕು ತಹಸೀಲ್ದಾರ್​ ನಿಯಮಾನುಸಾರ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮುಂದುವರೆಸಲು ಕ್ರಮ ವಹಿಸಲಾಗಿದೆ. ತಹಸೀಲ್ದಾರ್​ ಅನುಮೋದನೆ ಪಡೆದ ಪ್ರಕರಣಗಳಿಗೆ ಬಾಕಿ ಪಿಂಚಣಿ ಸಹಿತವಾಗಿ ನಿಯಮಿತಿವಾಗಿ ಪಾವತಿಸಲಾಗುವುದು. ಬಿಎಂಎಸ್​ ತಂತ್ರಾಂಶದ ಲಾಗಿನ್​ ಮೂಲಕ ಅವಕಾಶ ಕಲ್ಪಿಸಿ ಅರ್ಹ ಫಲಾನುಭವಿಗಳ ಪಿಂಚಣಿ ನೀಡಲಾಗುವುದು.
ಡಾ.ಜಿ.ಪರಮೇಶ್ವರ
ಡಿಸಿಎಂ
ರಾಜ್ಯದಲ್ಲಿ ಸಂದೇಹಪಟ್ಟು ಸ್ಥಗಿತವಾಗಿರುವ ಪ್ರಕರಣಗಳು
ಜಿಲ್ಲೆ ಸಂದೇಹಾಸ್ಪದ ಪ್ರಕರಣ
ತುಮಕೂರು 118217
ಬಾಗಲಕೋಟೆ 31670
ಬಳ್ಳಾರಿ 34494
ಬೆಂಗಳೂರು ಗ್ರಾ. 182759
ಬೆಂಗಳೂರು ದ 52343
ಬೆಂಗಳೂರು ನಗರ 136669
ಬೀದರ್​ 118082
ಚಾಮರಾಜನಗರ 62283
ಚಿಕ್ಕಬಳ್ಳಾಪುರ 53319
ಚಿಕ್ಕಮಗಳೂರು 69061
ಚಿತ್ರದುರ್ಗ 77834
ದಾವಣಗೆರೆ 104805
ದಾರವಾಡ 49700
ಗದಗ 19131
ಹಾಸನ 98850
ಹಾವೇರಿ 64710
ಕಲಬುರುಗಿ 118387
ಕೊಡಗು 19388
ಕೋಲಾರ 94714
ಕೊಪ್ಪಳ 46094
ಮಂಡ್ಯ 81117
ಮೈಸೂರು 133831
ರಾಯಚೂರು 101272
ಶಿವಮೊಗ್ಗ 59857
ಉಡುಪಿ 47502
ಉತ್ತರ ಕನ್ನಡ 37414
ವಿಜಯಪುರ 90346
ಯಾದಗಿರಿ 59581
ಒಟ್ಟು 23,14,544
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net