ಸಿದ್ಧಿ ಬಯೋನ ಹೊಸ ಉತ್ಪನ್ನ ವೆಕ್ಟೋಶಿಲ್ಡ್​ ಲೋಕಾರ್ಪಣೆ

 ಸಿದ್ದಗಂಗಾ ಆಯಿಲ್​ ಅಂಡ್​ ಬಯೋ ಇಂಡ್​ಸ್ಟ್ರೀಸ್​ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಸಾವಯವ ದ್ರಾವಣ ನೂತನ ಉತ್ಪನ್ನ ವೆಕ್ಟೋಶಿಲ್ಡ್​ ಅನ್ನು ಸಿದ್ದಗಂಗಾ ಮಠದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಲೋಕಾರ್ಪಣೆ ಮಾಡಿದರು. ಶ್ರೀ ಸಿದ್ದಲಿಂಗ ಸ್ವಾಮೀಜಿ, ಜಿ.ಬಿ.ಜ್ಯೋತಿಗಣೇಶ್​, ಬಿ.ಸುರೇಶ್​ಗೌಡ, ಶುಭಕಲ್ಯಾಣ್​, ಕೆ.ವಿ.ಅಶೋಕ್​, ಎನ್​.ಜೆ.ರುದ್ರಪ್ರಕಾಶ್​, ಎನ್​,ಆರ್​,ಆದರ್ಶ್​, ಎನ್​.ಆರ್​.ಅಕ್ಷಯ್​ ಇದ್ದರು.
ಸಿದ್ದಗಂಗಾ ಆಯಿಲ್​ ಅಂಡ್​ ಬಯೋ ಇಂಡ್​ಸ್ಟ್ರೀಸ್​ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಸಾವಯವ ದ್ರಾವಣ ನೂತನ ಉತ್ಪನ್ನ ವೆಕ್ಟೋಶಿಲ್ಡ್​ ಅನ್ನು ಸಿದ್ದಗಂಗಾ ಮಠದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಲೋಕಾರ್ಪಣೆ ಮಾಡಿದರು. ಶ್ರೀ ಸಿದ್ದಲಿಂಗ ಸ್ವಾಮೀಜಿ, ಜಿ.ಬಿ.ಜ್ಯೋತಿಗಣೇಶ್​, ಬಿ.ಸುರೇಶ್​ಗೌಡ, ಶುಭಕಲ್ಯಾಣ್​, ಕೆ.ವಿ.ಅಶೋಕ್​, ಎನ್​.ಜೆ.ರುದ್ರಪ್ರಕಾಶ್​, ಎನ್​,ಆರ್​,ಆದರ್ಶ್​, ಎನ್​.ಆರ್​.ಅಕ್ಷಯ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿದ್ದಗಂಗಾ ಮಠದಲ್ಲಿ ಸರಳ ಕಾರ್ಯಕ್ರಮ
  • ಕೇಂದ್ರ ಸಚಿವ ವಿ.ಸೋಮಣ್ಣ
  • ಸೊಳ್ಳೆಗಳ ಮೂಲೋತ್ಪಾಟನೆಗೆ ಸ್ಥಳಿಯ ಸಂಸ್ಥೆಗಳ ಮೂಲಕ ಖರೀದಿಗೆ ಸಲಹೆ
ತುಮಕೂರು: ರೋಗಗಳನ್ನು ಹರಡುವ ಸೊಳ್ಳೆಗಳ ಮೂಲೋತ್ಪಾಟನೆಗೆ ಸಿದ್ದಗಂಗಾ ಆಯಿಲ್​ ಅಂಡ್​ ಬಯೋ ಇಂಡ್​ಸ್ಟ್ರೀಸ್​ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಸಾವಯವ ದ್ರಾವಣ ನೂತನ ಉತ್ಪನ್ನ ವೆಕ್ಟೋಶಿಲ್ಡ್​ ಅನ್ನು ಶನಿವಾರ ಸಿದ್ದಗಂಗಾ ಮಠದ ಅಂಗಳದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೊಸ ಉತ್ಪನ್ನ ಬಿಡುಗಡೆಗೊಳಿಸಿ ಮಾತನಾಡಿ, ಮಲೇರಿಯಾ, ಡೆಂ ಅಂತಹ ಮಾರಕ ರೋಗಗಳನ್ನು ಸೊಳ್ಳೆಗಳು ಹರಡಲಿದ್ದು ಸೊಳ್ಳೆ ನಿಮೂರ್ಲನೆಗೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದಲ್ಲದೆ, ಸಂತಾನೋತ್ಪತ್ತಿ ಆಗದಂತೆ ವೆಕ್ಟೋಶಿಲ್ಡ್​ ಬಳಸಿ ನಾಶ ಪಡಿಸಬಹುದಾಗಿದೆ. ಪರಿಸರದ ಮೇಲೆ ಅಡ್ಡ ಪರಿಣಾಮಬೀರದ ಇಂತಹ ಸಾವಯವ ದ್ರಾವಣವನ್ನು ಬಳಸೋಣ ಎಂದರು.
ಸಿದ್ಧಿ ಬಯೋ ಸಂಸ್ಥೆಯ ಸಾವಯವ ದ್ರಾವಣವನ್ನು ಅಭಿವೃದ್ಧಿಪಡಿಸಿರುವ ವೆಕ್ಟೋ ಶೀಲ್ಡ್​ ನ್ಯಾಷನಲ್​ ರೀಸರ್ಚ್​ ಡೆವಲಪ್​ಮೆಂಟ್​ ಕಾರ್ಪೊರೇಷನ್​ನಿಂದ ಪ್ರಮಾಣಿತವಾಗಿದೆ. 5 ವರ್ಷಗಳ ಬಳಿಕ ವೆಕ್ಟೋ ಶೀಲ್ಡ್​ ಔಷಧ ಸಿಂಪರಣೆಯಿಂದ ಸೊಳ್ಳೆಗಳನ್ನು ಲಾರ್ವಾ ಹಂತದಲ್ಲೇ ನಾಶ ಮಾಡಬಹುದು. ಬಹುತೇಕ ರೋಗಗಳು ಸೊಳ್ಳೆಗಳಿಂದ ಹರಡಲಿದ್ದು ಈ ರೋಗಗಳನ್ನು ತಡೆಗಟ್ಟಲು ಮಹಾನಗರಪಾಲಿಕೆ, ಪುರಸಭೆ, ಗ್ರಾಮ ಪಂಚಾಯಿತಿಗಳಿಗೆ ವೆಕ್ಟೊ ಶೀಲ್ಡ್​ ದ್ರಾವಣವನ್ನು ಖರೀದಿಸಲು ಶಿಫಾರಸು ಮಾಡುವಂತೆ ಕಾರ್ಯಕ್ರಮದಲ್ಲಿ ಹಾಜರಿದ್ದ ಜಿಲ್ಲಾಧಿಕಾರಿ ಶುಭಕಲ್ಯಾಣ್​ಗೆ ಸೋಮಣ್ಣ ಸಲಹೆ ನೀಡಿದರು.
ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಶಾಸಕರಾದ ಜಿ.ಬಿ.ಜ್ಯೋತಿಗಣೇಶ್​, ಬಿ.ಸುರೇಶ್​ಗೌಡ, ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ಸಿದ್ಧಿ ಬಯೋ ವ್ಯವಸ್ಥಾಪಕ ನಿರ್ದೇಶಕ ಎನ್​.ಜೆ.ರುದ್ರಪ್ರಕಾಶ್​, ಸಂಸ್ಥೆಯ ಶಾರದಾರುದ್ರಪ್ರಕಾಶ್​, ಎನ್​.ಆರ್​.ಆದರ್ಶ್​, ಎನ್​.ಆರ್​.ಅಕ್ಷಯ್​ ಮತ್ತಿತರರು ಉಪಸ್ಥಿತರಿದ್ದರು.
ಮೇಕ್​ ಇನ್​ ಇಂಡಿಯಾ
ಪ್ರಧಾನಿ ನರೇಂದ್ರ ಮೋದಿ ಆಯುಷ್ಮಾನ್​ಭವ ಯೋಜನೆ ಮೂಲಕ ಜನಸಾಮಾನ್ಯರ ಆರೋಗ್ಯಕ್ಕೆ ಒತ್ತು ನೀಡಿದ್ದಾರೆ. ಹಾಗೆಯೇ, ಮೇಕ್​ ಇನ್​ ಇಂಡಿಯಾದಲ್ಲಿ ಸ್ಥಳಿಯ ಉದ್ದಿಮೆ, ಉತ್ಪನ್ನಗಳನ್ನು ಪ್ರೋತ್ಸಾಹಿಸಿ ನಮ್ಮ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಿಕೊಟ್ಟಿದ್ದಾರೆ. ಗುಣಮಟ್ಟ ಕಾಪಾಡಿಕೊಂಡು ಉದ್ದಿಮೆದಾರರು ಬುದ್ಧಿ ಕೌಶಲ ಪ್ರದರ್ಶಿಸಬೇಕು. ನಮ್ಮವರೇ ಅಭಿವೃದ್ಧಿಪಡಿಸಿದ ಉತ್ಪನ್ನಗಳ ಬಗ್ಗೆ ಅಸಡ್ಡೆ ತೋರದೆ ಅವುಗಳನ್ನು ಬಳಸಿ ಸೂಕ್ತ ಮಾರುಕಟ್ಟೆ ನಿರ್ಮಿಸಬೇಕು. ಈ ಹಿಂದೆ ಸೊಳ್ಳೆ ನಾಶಕ್ಕಾಗಿ ಡಿಡಿಟಿ ಪೌಡರ್​ ಸಿಂಪರಣೆ ಮಾಡುತ್ತಿದ್ದು ಈಗ ಅದನ್ನು ನಿಷೇಧಿಸಲಾಗಿದೆ. ಈಗ ತಂತ್ರಜ್ಞಾನ ಬದಲಾಗಿ ಪರಿಣಾಮಕಾರಿ ಸಾವಯವ ದ್ರಾವಣವಾಗಿ ವೆಕ್ಟೋ ಶೀಲ್ಡ್​ ಸೊಳ್ಳೆಗಳ ಮೂಲೋತ್ಪಾಟನೆಗೆ ನೆರವಾಗಲಿದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.
ಸೊಳ್ಳೆಗಳಿಂದ ವಿವಿಧ ರೋಗಗಳು ಹರಡುತ್ತವೆ. ಸೊಳ್ಳೆ ಉತ್ಪತ್ತಿ ಆಗದಂತೆ ತಡೆಯಬೇಕು. ಸ್ವಚ್ಛತೆಯಿಂದ ಸಾರ್ವಜನಿಕ ಆರೋಗ್ಯ ಕಾಪಾಡಲು ಸೊಳ್ಳೆಗಳ ನಿಮೂರ್ಲನೆ ಆಗಬೇಕು. ವೆಕ್ಟೋ ಶೀಲ್ಡ್​ ದ್ರಾವಣವನ್ನು ಕೊಳಚೆ ಪ್ರದೇಶ, ಚರಂಡಿಗಳಿಗೆ ಸಿಂಪರಣೆ ಮಾಡಿ ಲಾರ್ವಾಗಳನ್ನು ನಾಶ ಮಾಡಿ ಆರೋಗ್ಯಕರ ಪರಿಸರ ನಿಮಾರ್ಣ ಮಾಡಬಹುದು. ಇಂತಹ ಹೊಸ ಉತ್ಪನ್ನವನ್ನು ಸಿದ್ದಿ ಬಯೋ ಅಭಿವೃದ್ಧಿ ಪಡಿಸಿದ್ದು ಗುಣಮಟ್ಟವನ್ನು ಕಾಪಾಡಿಕೊಳ್ಳುವುದರ ಜತೆಗೆ ಮಾರುಕಟ್ಟೆ ರೂಪಿಸಿಕೊಳ್ಳಿ.
ಶ್ರೀ ಸಿದ್ದಲಿಂಗ ಸ್ವಾಮೀಜಿ
ಮಠಾಧ್ಯಕ್ಷರು, ಸಿದ್ದಗಂಗಾಮಠ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net