ತುಮಕೂರಿನ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ 2 ದಿನಗಳ ಸಾಂಸ್ಕತಿಕ ಹಬ್ಬ "ಕಲೋತ್ಸವ 2026'ಉದ್ಘಾಟನಾ ಸಮಾರಂಭದಲ್ಲಿ ಗಾಯಕಿ ಡಾ.ಶ್ರಾವ್ಯ ಅವರನ್ನು ಅಭಿನಂದಿಸಲಾಯಿತು. ನಂಜುಂಡಪ್ಪ, ಡಾ.ವೀರಯ್ಯ, ಡಾ.ಮಹಾಂತೇಶ್ ಎಂ. ನಡಕಟ್ಟಿ, ಡಾ. ಎಸ್.ರೇಣುಕಾ ಲತಾ, ಡಾ.ದಿವ್ಯಪ್ರಭಾ, ಡಾ.ಎನ್.ಪ್ರದಿಪ್, ಡಾ.ರಾಜೇಶ್ ಕಾಮತ್ ಮತ್ತಿತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ
ಸಾಂಸ್ಕತಿಕ ಹಬ್ಬ "ಕಲೋತ್ಸವ 2026'
ಸರಿಗಮಪ ಖ್ಯಾತಿಯ ಗಾಯಕಿ ಡಾ. ಶ್ರಾವ್ಯಗೆ ಅಭಿನಂದನೆ
ತುಮಕೂರು: ಮನುಷ್ಯ ಉತ್ತಮ ಜೀವನವನ್ನು ಕಟ್ಟಿಕೊಳ್ಳಲು ಕಲೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ನಂಜುಂಡಪ್ಪ ಹೇಳಿದರು.
ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ 2 ದಿನಗಳ ಸಾಂಸ್ಕತಿಕ ಹಬ್ಬ "ಕಲೋತ್ಸವ 2026' ಅನ್ನು ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಕಲೆ ನಮ್ಮ ಸಂಸತಿ, ಪರಂಪರೆಯನ್ನು ಪಸರಿಸುವುದರ ಜತೆಗೆ ಮನುಷ್ಯುನನ್ನು ಸದಾ ಚೈತನ್ಯಶಾಲಿಯಾಗುವಂತೆ ಮಾಡುತ್ತೆ. ವಿದ್ಯಾರ್ಥಿಗಳು ತಮ್ಮ ಕ್ರಿಯಾತ್ಮಕತೆ ಪ್ರತಿಭೆಗಳನ್ನು ಹೊರಹಾಕಲು ಸೃಷ್ಟಿಯಾಗಿರುವ ಒಂದು ಉತ್ತಮವಾದ ವೇದಿಕೆ ಕಲೋತ್ಸವ ಎಂದರು.
ನಮ್ಮದೇಶವು ಲಲಿತ ಕಲೆ, ಸಂಸತಿ ಹಾಗೂ ಸಮಗ್ರತೆಯಿಂದ ಕೂಡಿರುವ ದೇಶವಾಗಿದ್ದು . ಮನುಷ್ಯನು ಹುಟ್ಟಿನಿಂದಲೇ ಕಲೆ ಮತ್ತು ಸಂಸತಿಯನ್ನು ಬಳುವಳಿಯಾಗಿ ಪಡೆದುಕೊಂಡಿರುತ್ತಾನೆ. ಆದರೆ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣದ ಜನರು ಉದ್ಯೋಗಕ್ಕೆ ಮೊರೆ ಹೋಗಿ ಕಲೆ ಮತ್ತು ಸಂಸತಿಯನ್ನು ಹಂತ ಹಂತವಾಗಿ ಮರೆತು ಹೋಗುತ್ತಿದ್ದಾರೆ. ಆದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರ ವಿದ್ಯಾರ್ಥಿಗಳಿಂದ ಈ ಕಲೆ ಮತ್ತು ಸಂಸತಿಯನ್ನು ಕಾಣಬಹುದು. ಮುಂದಿನ ದಿನಗಳಲ್ಲಿ ಕಲೆ ಸಂಸತಿಗೆ ವಿದ್ಯಾರ್ಥಿಗಳೇ ರಾಯಭಾರಿಗಳಾಗಬೇಕು ಎಂದು ತಿಳಿಸಿದರು.
ಸರಿಗಮಪ ಖ್ಯಾತಿಯ ಗಾಯಕಿ, ವೈದ್ಯ ಡಾ. ಶ್ರಾವ್ಯ ಮಾತನಾಡಿ, ಪ್ರತಿಭೆ ಎನ್ನುವುದು ಮಾನವನಿಗೆ ದೇವರು ಕೊಟ್ಟಿರುವ ವರವಾಗಿದೆ. ಮಾನವನಲ್ಲಿ ವಿಭಿನ್ನ ರೀತಿಯ ಪ್ರತಿಭೆಗಳು ಅಡಗಿರುತ್ತವೆ, ಅವಕಾಶಗಳು ಸಿಕ್ಕಾಗ ಅಂತರಂಗದಲ್ಲಿರುವ ಪ್ರತಿಭೆಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಹೊರ ಜಗತ್ತಿಗೆ ಪರಿಚಯಿಸುವುದರಿಂದ ಸಮಾಜದಲ್ಲಿ ಬದುಕನ್ನು ಕಟ್ಟಿಕೊಳ್ಳಲು ಒಳ್ಳೆಯ ಮಾರ್ಗವಾಗಿದೆ ಎಂದು ಹೇಳಿದರು.
ಸಕಾರಾತ್ಮಕ ವರ್ತನೆ, ಏಕಾಗ್ರತೆ, ಒಳ್ಳೆಯ ನಡತೆ, ಕಠಿಣ ಪರಿಶ್ರಮ ಇವೆಲ್ಲವೂ ನಮ್ಮ ಜತೆ ಇದ್ದರೆ ಮಾತ್ರ ಗೆಲುವು ನಮ್ಮದಾಗುತ್ತದೆ ಎಂದು ಎಸ್ ಎಸ್ ಐಟಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ವೀರಯ್ಯ ತಿಳಿಸಿದರು.
ಎಸ್ಎಸ್ಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಮಹಾಂತೇಶ್ ಎಂ ನಡಕಟ್ಟಿ ಮಾತನಾಡಿ, ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಸ್ಪರ್ಧೆಗಳನ್ನು ನಾವೀನ್ಯತೆ, ಸೃಜನಾತ್ಮಕತೆ, ಕ್ರಿಯಾತ್ಮಕತೆಯಿಂದ ಆಯೋಜಿಸಿ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರತಿಯೊಂದು ಕ್ಷಣವನ್ನು ಆನಂದಿಸಿರಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಾಹೇ ವಿವಿಯಿಂದ ನೂತನವಾಗಿ ಪಿಎಚ್ಡಿ ಪಡೆದ ಪ್ರಾಧ್ಯಾಪಕರಿಗೆ ಗೌರವಿಸಲಾಯಿತು.
ಅಕಾಡೆಮಿಯ ಡೀನ್ ಡಾ. ಎಸ್.ರೇಣುಕಾ ಲತಾ, ಕಲೋತ್ಸವ 2026ರ ಅಧ್ಯಕ್ಷ ಡಾ.ಎನ್.ಪ್ರದಿಪ್, ಪ್ರಾಧ್ಯಾಪಕರುಗಳಾದ ಡಾ.ದಿವ್ಯಪ್ರಭಾ, ಡಾ. ರಾಜೇಶ್ ಕಾಮತ್ ಡಾ.ಯೋಗಾನಂದ್ ಮತ್ತಿತರರು ಉಪಸ್ಥಿತರಿದ್ದರು.