ತುಮಕೂರು: ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಗುದ್ದಲಿಪೂಜೆಯನ್ನು ಸಂಪುಟ ವಿಸ್ತರಣೆ ಸಮಯದಲ್ಲಿ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಸಿಎಂ ಡಿಕೆಶಿ ನಡುವೆ ಅಸಮಾಧಾನವಿದ್ದು ಸಚಿವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಅದನ್ನು ಬಹಿರಂಗವಾಗಿದೆ. ಸಿದ್ದರಾಮಯ್ಯ ಸಿಎಂ ಅಗಿದ್ದಾಗ ಡಿ.ಕೆ.ಶಿವಕುಮಾರ್ ತೊಂದರೆ ನೀಡಿದ್ದರು ಈಗ ಸಿಎಂ ಡಿ.ಕೆ.ಶಿವಕುಮಾರ್ ಇಳಿಸಲು ಸಿದ್ದರಾಮಯ್ಯ ಗುದ್ದಲಿಪೂಜೆ ಮಾಡಿದ್ದಾರೆ ಎಂದರು.
ಸಿಎಂ ಡಿಕೆಶಿ ಅವರಿಗೆ ಸಿದ್ದರಾಮಯ್ಯ ಹಾಗೂ ಹಿಂದುಳಿದ ವರ್ಗದವರ ಮೇಲೆ ಎಷ್ಟು ಧ್ವೇಷ ಹಾಗೂ ಸಿಟ್ಟಿದೆ ಎಂಬುದು ಬಯಲಾಗಿದೆ, ಹಿಂದುಳಿದ ವರ್ಗಗಳನ್ನು ತುಳಿಯುತ್ತಿರುವ ಅನುಮಾನ ಮೂಡಿಸಿದೆ. ಇದೇ ಕಾರಣದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಸಿಎಂ ಡಿ.ಕೆ.ಶಿವಕುಮಾರ್ ಜನರ ಹಿತಾಸಕ್ತಿ ಮರೆತು ಕೇವಲ ರಿಯಲ್ ಎಸ್ಟೇಟ್ ಬಗ್ಗೆ ತಲೆ ಕಡೆಸಿಕೊಂಡಿದ್ದಾರೆ ಎಂದು ದೂರಿದರು.
ರಾಜಭವನದಲ್ಲಿ ನಡೆದ ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಬರದೇ ಇರುವುದು ರಾಜ್ಯ ಸರ್ಕಾರದಲ್ಲಿರುವ ಅಸಮಧಾನದ ಮುನ್ಸೂಚನೆಯಾಗಿದ್ದು ಇವರಿಬ್ಬರ ನಡುವಿನ ಒಳಜಗಳ ರಾಜ್ಯದಲ್ಲಿ ಅಭಿವೃದ್ಧಿಯನ್ನು ಬಲಿ ತೆಗೆದುಕೊಳ್ಳುತ್ತಿದೆ. ಪ್ರಸ್ತುತ ರಾಜ್ಯದಲ್ಲಿ
ಅಧಿಕಾರ ಹೇಗೆ ಉಳಿಸಿಕೊಳ್ಳಬೇಕು ಹೇಗೆ ಹಂಚಿಕೊಳ್ಳಬೇಕು ಅನ್ನೋ ಯೋಚನೆ ಇದೆ ಹೊರತು, ರಾಜ್ಯದ ಜನತೆ ಬಗ್ಗೆ ಯೋಚನೆ ಇಲ್ಲ ಎಂದರು.
ಪ್ರಸ್ತುತ ರಾಜ್ಯ ಸರ್ಕಾರ ಸಮಗ್ರ ಕರ್ನಾಟಕದ ಹಿತದಿಂದ ಕ್ಯಾಬಿನೆಟ್ ವಿಸ್ತರಣೆ ಮಾಡಿಲ್ಲ, ಏಳೆಂಟು ಜಿಲ್ಲೆಗಳಿಗೆ ಕ್ಯಾಬಿನೆಟ್ನಲ್ಲಿ ಪ್ರತಿನಿಧ್ಯವಿಲ್ಲ, ಉತ್ತರ ಕರ್ನಾಟಕದ ಮಂಕಳ್ ವೈದ್ಯ ಮೊಗವೀರ ಸಮುದಾಯಕ್ಕೆ ಸೇರಿದವರು, ಅತ್ಯಂತ ಹಿಂದುಳಿದ ವರ್ಗದ ಶಾಸಕರ ಹೆಸರು ದೆಹಲಿಯಿಂದ ಬಂದ ಪಟ್ಟಿಯಲ್ಲಿತ್ತು ಆದರೆ, ಡಿಕೆಶಿ ಅದನ್ನು ತೆಗೆದು ಹಾಕಿ ಆ ಸಣ್ಣ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಚಿಕ್ಕಮಗಳೂರಿನ ಹಾಲುಮತಸ್ಥ ಸಮಯದಾಯಕ್ಕೆ ಸೇರಿದ ಗಾಯಿತ್ರಿಗೌಡಗೆ ವಂಚನೆ ಮಾಡಿದ್ದಾರೆ ಎಂದರು.
ಕಾಂಗ್ರೆಸ್ನಲ್ಲಿ ಅಸಮಾಧಾನ ಬುಗಿಲೆದ್ದಿರುವ ಲಾಭ ಪಡೆಯುವ ಅವಸರ ಬಿಜೆಪಿಗಿಲ್ಲ, ನಾವು ತಾಳ್ಮೆಯಿಂದ ಎರಡು ವರ್ಷ ಕಾಯುತ್ತೇವೆ. ರಾಜ್ಯದ ಜನ ನಮ್ಮನ್ನ ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ, ನಾವು ತಾಳ್ಮೆಯಿಂದ ಇನ್ನೂ 2 ವರ್ಷ ಕಾಯುತ್ತೇವೆ ಎಂದರು.
ಸಿವಿಲ್ ಪೊಲೀಸ್ ಪರೀಕ್ಷಾ ಪತ್ರಿಕೆ ಲೀಕ್ ವಿಚಾರದಲ್ಲಿ ಲಾಠಿ ಚಾರ್ಜ್ ಆದ ಬಳಿಕ ಪ್ರಧಾನ್ ರಾಜೀನಾಮೆ ಕೊಟ್ಟಿದ್ದರು, ಹಾಗೇ ನಾನೂ ಲಾಠಿ ಚಾರ್ಜ್ ಆದ ಬಳಿಕ ರಾಜೀನಾಮೆ ಕೊಡೋ ಬಗ್ಗೆ ಯೋಚನೆ ಮಾಡ್ತಿನಿ ಎಂದು ಗೃಹ ಸಚಿವ ಪ್ರಿಯಾಂಕ್ರ್ಖಗೆ ನೀಡಿರುವ ಹೇಳಿಕೆ ಅಧಿಕಾರದ ಮದ. ಅಧಿಕಾರ ಅನ್ನೋದು ಶಾಶ್ವತ ಅಲ್ಲಾ ಅನ್ನೋದನ್ನ ಪ್ರೀಯಾಂಕ ತಿಳಿದುಕೊಳ್ಳಬೇಕು, ಅರ್ಥ ಮಾಡಿಕೊಳ್ಳಬೇಕು ಎಂದು ಹರಿಹಾಯ್ದರು.
ರಾಜ್ಯದ ಗೃಹ ಸಚಿವರು ಯಾಕಿಷ್ಟು ದುರಹಃಕಾರದಿಂದ ಮಾತನಾಡುತ್ತಿದ್ದಾರೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ, ಅವರು ಪರ್ಮನೆಂಟ್ ಆಗಿ ಶಾಸಕರಾಗಿ ಮಂತ್ರಿಯಾಗಿರುತ್ತಾರಾ? ಶಾಸಕರಾಗಿ ಆಯ್ಕೆಯಾದ ಅವರು ಅಧಿಕಾರ ಸದ್ಬಳಕೆ ಮಾಡಿಕೊಂಡು ಜನರ ಪರ ಕೆಲಸ ಮಾಡಲಿ, ಯುವ ಜನತೆಗೆ ಅನುಕೂಲ ಆಗುವ ರೀತಿ ಕೆಲಸ ಮಾಡಲಿ ಅದು ಬಿಟ್ಟು ಯುವಕರ ಮನಸ್ಸಿಗೆ ನೋವು ತರುವಂತಹ ಕೆಲಸ ಅವರು ಮಾಡಬಾರದು ಎಂದು ಸಲಹೆ ನೀಡಿದರು.