ನಿರ್ಮಾಣವಾದ ಕ್ಯಾನ್ಸರ್​ ಆಸ್ಪತ್ರೆಯಲ್ಲಿ ಆರಂಭವಾಗದ ಸೇವೆ

ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗಿ ಆರೋಗ್ಯ ಸೇವೆಯಿಲ್ಲದೆ ನಿರುಪಯುಕ್ತವಾಗಿರುವ ಪೆರಿಫೆರಲ್​ ಕ್ಯಾನ್ಸರ್​ ಕೇಂದ್ರ.
ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗಿ ಆರೋಗ್ಯ ಸೇವೆಯಿಲ್ಲದೆ ನಿರುಪಯುಕ್ತವಾಗಿರುವ ಪೆರಿಫೆರಲ್​ ಕ್ಯಾನ್ಸರ್​ ಕೇಂದ್ರ.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಕೇಂದ್ರದಲ್ಲಿ ಸಿಗದ ಆರೋಗ್ಯ ಸೇವೆ
  • ವೈದ್ಯಕಿಯ ಹಾಗೂ ವೈದ್ಯಕಿಯೇತರ ಹುದ್ದೆ 53
  • ನಿರುಪಯುಕ್ತವಾದ ಪೆರಿಫೆರಲ್​ ಕ್ಯಾನ್ಸರ್​ ಕೇಂದ್ರ
  • ವೈದ್ಯಕಿಯ ಉಪಕರಣ ಖರೀದಿಗೆ 88 ಕೋಟಿ ರೂ.
ತುಮಕೂರು: ಜಿಲ್ಲಾಸ್ಪತ್ರೆ ಆವರಣದಲ್ಲಿ 150ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ನಿರ್ಮಾಣವಾಗಿ ಉದ್ಘಾಟನೆಯೂ ಆಗಿರುವ ಪೆರಿಫೆರಲ್​ ಕ್ಯಾನ್ಸರ್​ ಕೇಂದ್ರ ವರ್ಷಗಳೂ ಕಳೆದರೂ ಇನ್ನೂ ರೋಗಿಗಳಿಗೆ ಸೇವೆ ನೀಡಲು ಮೀನಾಮೇಷ ಎಣಿಸುತ್ತಿದೆ. ವೈದ್ಯಕಿಯ ಹಾಗೂ ವೈದ್ಯಕಿಯೇತರ ಹುದ್ದೆಗಳ ಭರ್ತಿ ಮಾಡಿಕೊಳ್ಳಲಾಗದೆ ಕಟ್ಟಡ ನಿರ್ಮಾಣವಾದರೂ ಸೇವೆ ಇಲ್ಲದಂತಾಗಿದೆ. ಕ್ಯಾನ್ಸರ್​ ರೋಗಿಗಳಿಗೆ ಚಿಕಿತ್ಸೆಗೆ ಅಗತ್ಯವಾಗಿರುವ ವೈದ್ಯಕಿಯ ಉಪಕರಣಗಳಿಲ್ಲದ ಕಟ್ಟಡ ನಿರುಪಯುಕ್ತವಾಗಿದೆ.
ಅಗತ್ಯವಾದ ಮೀಸಲಾತಿ ದೃಢೀಕರಣದ ನೆಪ ಮಾಡಿಕೊಂಡು ನೇಮಕಾತಿ ಪ್ರಕ್ರಿಯೆ ತಡವಾಗಿದ್ದು, ವೈದ್ಯಕಿಯ ಮತ್ತು ವೈದ್ಯಕಿಯೇತರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಹಾಗೂ ವೈದ್ಯಕಿಯ ಉಪಕರಣಗಳ ಖರೀದಿ ಹಾಗೂ ಅಳವಡಿಕೆ ಕಾರ್ಯ ಪೂರ್ಣಗೊಂಡ ನಂತರವಷ್ಟೇ ಜಿಲ್ಲೆಯಲ್ಲಿ ಕ್ಯಾನ್ಸರ್​ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ಸಾಧ್ಯವಿದ್ದು ಜನರು ಚಾಕತ ಪಯಂತೆ ಕಾಯುತ್ತಿದ್ದಾರೆ.
ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕ್ಯಾನ್ಸರ್​ಬ ರೋಗಿಗಳಿದ್ದು ಎಲ್ಲರೂ ಬೆಂಗಳೂರಿನ ಕೆಎಂಐಒ ಸಂಸ್ಥೆಯಲ್ಲಿ ಪಡೆಯುತ್ತಿದ್ದಾರೆ, ಕೀಮೋಥೆರಪಿ ಚಿಕಿತ್ಸೆ ಕೂಡ ಬೆಂಗಳೂರಿನಲ್ಲಿಯೇ ಪಡೆಯುವಂತಾಗಿದ್ದು ಬಡ ಹಾಗೂ ಮಧ್ಯಮ ವರ್ಗದ ರೋಗಿಗಳು ನಿತ್ಯ ಪರದಾಡುವಂತಾಗಿದೆ. ಕಿದ್ವಾಯಿ ಸಂಸ್ಥೆಯ ಮೇಲಿನ ಒತ್ತಡ ಕಡಿಮೆ ಮಾಡಿ ಜಿಲ್ಲಾ ಕೇಂದ್ರದಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ದೊರೆಯುವಂತೆ ಮಾಡುವ ಸರ್ಕಾರದ ಉದ್ದೇಶ ಹಳ್ಳಹಿಡಿದಿದೆ.
100ಹಾಸಿಗೆ ಸಾಮರ್ಥ್ಯದ ಕ್ಯಾನ್ಸರ್​ ಆಸ್ಪತ್ರೆ ತುಮಕೂರು ನಗರದಲ್ಲಿ ನಿರ್ಮಿಸಲು 2021ರಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದರು. 2024ರಲ್ಲಿ ಆಸ್ಪತ್ರೆ ಕಟ್ಟಡ ಕೂಡ ನಿರ್ಮಾಣ ಕಾಮಗಾರಿ ಪೂರ್ಣವಾಗಿದ್ದು ಸಿಎಂ ಸಿದ್ದರಾಮಯ್ಯ ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು. ಉದ್ಘಾಟನೆಯಾಗಿ ಎರಡು ವರ್ಷ ಪೂರ್ಣಗೊಂಡಿದ್ದರೂ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೇವೆ ಸಿಗದೆ ಕಟ್ಟಡ ನಿರುಪಯುಕ್ತವಾದಂತಾಗಿದೆ.
53 ವೈದ್ಯಕಿಯ ಸಿಬ್ಬಂದಿ ನೇಮಕಕ್ಕೆ ಅಸ್ತು:
ತುಮಕೂರು ಹಾಗೂ ಮೈಸೂರು ನಗರಗಳಲ್ಲಿ ಈಗಾಗಲೇ ನಿರ್ಮಾಣವಾಗಿರುವ ಪೆರಿಫೆರಲ್​ ಕ್ಯಾನ್ಸರ್​ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲು ತಲಾ 53 ವೈದ್ಯಕಿಯ ಮತ್ತು ವೈದ್ಯಕಿಯೇತರ ಹುದ್ದೆಗಳ ನೇಮಕಕ್ಕೆ 2026 ಜ.27ರಂದು ಸರ್ಕಾರ ಅನುಮೋದನೆ ನೀಡಿದೆ. ಆದೇಶಗಳಲ್ಲಿರುವ ಖಾಯಂ ಹುದ್ದೆಗಳ ಭರ್ತಿ ಮಾಡಬೇಕಿದ್ದು ಮೀಸಲಾತಿ ರೋಸ್ಟರ್​ ಬಿಂದು ದೃಢೀಕರಣ ತಡವಾಗಿದೆ.
ಆರೋಗ್ಯ ಶಿಕ್ಷಣ ಇಲಾಖೆ ಕಿದ್ವಾಯಿ ಸಂಸ್ಥೆ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರೂ ಈವರೆಗೂ ಹುದ್ದೆಗಳ ನೇಮಕಕ್ಕೆ ಅಗತ್ಯವಾದ ಮೀಸಲಾತಿ ನಿಗದಿ ಸಾಧ್ಯವಾಗದೇ ವರ್ಷಗಳಿಂದಲೂ ಸೇವೆ ಸಿಗದೆ ಕಟ್ಟಡಗಳು ಮೌನವಾಗಿವೆ.
ತುಮಕೂರು ಮತ್ತು ಮೈಸೂರು ಪೆರಿಫೆರಲ್​ ಕ್ಯಾನ್ಸರ್​ ಕೇಂದ್ರ ಇಲ್ಲಿಗೆ ಅಗತ್ಯವಿರುವ ವೈದ್ಯಕಿಯ ಉಪಕರಣಗಳನ್ನು ಖರೀದಿಸಲು ವೈದ್ಯಕಿಯ ನಿರ್ದೇಶನಾಲಯ 88.73ಕೋಟಿ ರೂ. ಲೆಟರ್​ ಆ್​ ಇಂಟೆಂಟ್​(ಎಲ್​ಒಐ) ಕೂಡ ನೀಡಲಾಗಿದೆಯಾದರೂ ಕಾಗದದಲ್ಲಿಯೇ ಉಳಿದಿದೆ.
ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಅನುಮತಿ ನೀಡಿದೆ ಹಾಗೂ ವೈದ್ಯಕಿಯ ಸಲಕರಣೆ ಖರೀದಿಗೂ ಹಣ ನೀಡಿ ಟೆಂಡರ್​ ಪ್ರಕ್ರಿಯೆ ಪೂರ್ಣಗೊಂಡಿದ್ದು ಅಳವಡಿಕೆ ಪೂರ್ಣಗೊಂಡಕೂಡಲೇ ರೋಗಿಗಳಿಗೆ ಚಿಕಿತ್ಸೆ ಒದಗಿಸಲಾಗುವುದು. ರೋಸ್ಟರ್​ ದೃಢೀಕರಣ ತಡವಾಗಿರುವ ಹಿನ್ನೆಲೆಯಲ್ಲಿ ಅಗತ್ಯವಾಗಿರುವ ವೈದ್ಯಕಿಯ ಹಾಗೂ ವೈದ್ಯಕಿಯೇತರ ಸಿಬ್ಬಂದಿ ನೇಮಕ ತಡವಾಗಿದೆ.
ಡಾ.ಶರಣಪ್ರಕಾಶ ಪಾಟೀಲ
ವೈದ್ಯಕಿಯ ಶಿಕ್ಷಣ ಸಚಿವ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net