ದ್ವೀತಿಯ ಪಿಯುಸಿ ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ 3ನೇ ಟಾಪರ್ ಶ್ರೇಯ ಪಡೆದಿರುವ ಎಸ್.ಹರ್ಷಿತಾ, ಎಂ.ರೋಹನ್ರನ್ನು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದಿಪ್ ಕುಮಾರ್ ಅಭಿನಂದಿಸಿದರು. ಸಿದ್ದೇಶ್ವರಸ್ವಾಮಿ ಮತ್ತಿತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ದ್ವಿತೀಯ ಪಿಯುಸಿ ಫಲಿತಾಂಶ
ಎಸ್.ಹರ್ಷಿತಾ, ರೋಹನ್ ರಾಜ್ಯಕ್ಕೆ 3ನೇ ಟಾಪರ್ ಶ್ರೇಯ
ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿಗಳು
ತುಮಕೂರು: ದ್ವಿತೀಯ ಪಿಯುಸಿ ಮರು ಮೌಲ್ಯಮಾಪನದಲ್ಲಿ ವಿದ್ಯಾನಿಧಿ ಕಾಲೇಜಿನ ಎಸ್.ಹರ್ಷಿತಾ, ಎಂ.ರೋಹನ್ 598 ಅಂಕಗಳನ್ನು ಪಡೆದು ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 3ನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಈ ಹಿಂದೆ ಹರ್ಷಿತಾ 593 ಅಂಕಗಳಿಸಿದ್ದು ಮರು ಮೌಲ್ಯಮಾಪನದಲ್ಲಿ 5 ಅಂಕ ಹೆಚ್ಚು ಗಳಿಸಿದ್ದಾರೆ, ರೋಹನ್ 597 ಅಂಕಗಳಿಸಿದ್ದು ಮರುಮೌಲ್ಯಮಾಪನದಲ್ಲಿ 1 ಅಂಕ ಹೆಚ್ಚು ಅಂಗಳಿಸಿ ಟಾಪರ್ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಎಲ್.ಸಂಜನಾ (597), ನಂದಶ್ರೀ 597, ಶ್ರೇಯಾ 595 ಅಂಕ, ಸೃಷ್ಟಿ ಪಿ.ಕುಂದಗೋಳ, ಎಸ್.ದೀಪ್ತಿ 594 ಅಂಕಗಳಿಸಿ ಮರಮೌಲ್ಯಮಾಪನದಲ್ಲಿ ಅಂಕ ಹೆಚ್ಚಿಸಿಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಡಿ.ಕೆ.ಶಶಾಂಕ್, ನಿಹಾರಿಕಾ 592 ಅಂಕಗಳೊಂದಿಗೆ ಸ್ಥಾನ ಉತ್ತಮ ಪಡಿಸಿಕೊಂಡಿದ್ದಾರೆ.
ಶ್ರೀಲಕ್ಷ್ಮಿರಾಜ್ 4ನೇ ಟಾಪರ್: ವಿದ್ಯಾವಾಹಿನಿ ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ಶ್ರೀಲಕ್ಷ್ಮಿರಾಜ್ 597 ಅಂಕಗಳನ್ನು ವಾಣಿಜ್ಯ ವಿಭಾಗದಲ್ಲಿ ಗಳಿಸಿ ರಾಜ್ಯಮಟ್ಟದ 4ನೇ ಟಾಪರ್ ಶ್ರೇಯಗಳಿಸಿದ್ದಾರೆ. ಮೊದಲ ಫಲಿತಾಂಶದಲ್ಲಿ 595 ಅಂಕಗಳಿಸಿದ್ದ ಶ್ರೀಲಕ್ಷ್ಮಿರಾಜ್ ಮರುಮೌಲ್ಯಮಾಪನದಲ್ಲಿ ಇಂಗ್ಲಿಷ್ ವಿಷಯದಲ್ಲಿ 3 ಅಂಕಗಳು ಹೆಚ್ಚಿಗೆ ಪಡೆದು 597 ಅಂಕಗಳಿಸಿದ್ದಾರೆ.
ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಬಿ.ಜಿ.ಚಂದನ ಮೊದಲ ಫಲಿತಾಂಶದಲ್ಲಿ 585 ಅಂಕಗಳನ್ನು ಗಳಿಸಿದ್ದು, ಮರುಮೌಲ್ಯಮಾಪನದಲ್ಲಿ ಕನ್ನಡದಲ್ಲಿ 2, ಇಂಗ್ಲಿಷ್ ವಿಷಯದಲ್ಲಿ 2 ಅಂಕಗಳು ಹೆಚ್ಚಿಗೆ ಪಡೆದು 589 ಅಂಕಗಳಿಸಿದ್ದಾರೆ.
ನಮ್ಮ ವಿದ್ಯಾರ್ಥಿಗಳಿಗೆ ಪಿಯುಸಿ ಮೊದಲ ಲಿತಾಂಶದಲ್ಲಿ ಸಣ್ಣಮಟ್ಟಿನ ಭ್ರಮನಿರಸನವಾಗಿತ್ತು. ಮರುಮೌಲ್ಯಮಾಪನದಲ್ಲಿ ಅವರ ಶ್ರಮಕ್ಕೆ ಪ್ರತಿಲಸಿಕ್ಕಿದೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದಿಪ್ ಕುಮಾರ್ ಅಭಿನಂದಿಸಿದರು.