ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿ, ಎಲ್ಲರನ್ನು ಸ್ವಾಗತಿಸಿದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಿ..ವೆಂಕಟೇಗೌಡ, ಡಿಸಿಸಿ ಬ್ಯಾಂಕ್ ಹಿರಿಯ ಸಲಹೆಗಾರ ಜಿ.ಎಸ್.ರಮಣರೆಡ್ಡಿ, ಸಹಕಾರ ಮಹಾಮಂಡಲದ ಎಂ.ಡಿ. ಕೆ.ಎಸ್.ನವೀನ್, ತುಮುಲ್ ನಿರ್ದೇಶಕರಾದ ಎಸ್.ಆರ್.ಗೌಡ, ಸಿ.ವಿ.ಮಹಲಿಂಗಯ್ಯ, ಶಾಂತಲರಾಜಣ್ಣ, ಬಿ.ಜಿ.ಕೃಷ್ಣಪ್ಪ, ಡಿಸಿಸಿ ಸಿಇಒ ಜಂಗಮಪ್ಪ ಮತ್ತಿತರರು ಉಪಸ್ಥಿತರಿದ್ದರು.