ಮಳೆ ಅಭಾವದ ಕಾರಣ ಜನ, ಜಾನುವಾರು, ಪ್ರಾಣಿಪಕ್ಷಿಗಳಿಗೂ ಕುಡಿಯುವ ನೀರಿನ ಸಮಸ್ಯೆಯಾಗಿದೆ. ತುಮಕೂರು ಶಾಖಾ ನಾಲೆ ಮುಖಾಂತರ ತುರ್ತಾಗಿ ಹೇಮಾವತಿ ನೀರು ಹರಿಸಿ ಪರಿಸ್ಥಿತಿ ನಿಯಂತ್ರಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ಜಿಲ್ಲೆಗೆ 25.03 ಟಿಎಂಸಿ ಹೇಮೆ ನೀರು ಹಂಚಿಕೆಯಾಗಿದ್ದು ಈವರೆಗೆ ಕಳೆದ 18 ವರ್ಷಗಳಲ್ಲಿ ಒಮ್ಮೆಯು ಜಿಲ್ಲೆಯ ಪಾಲಿನ ಸಂಪೂರ್ಣ ನೀರು ಪಡೆಯಲಾಗಿಲ್ಲ. ಅಲ್ಲದೆ, ತುಮಕೂರು ನಾಲಾವಲಯದ ಒಂದೇಒಂದು ಎಕರೆ ಜಮೀನನ್ನು ಅಚ್ಚುಕಟ್ಟು ಪ್ರದೇಶವೆಂದು ಘೋಷಿಸಿಲ್ಲ, ಅಲ್ಲದೆ ಈ ಬಗ್ಗೆ ಗೆಜೆಟ್ನಲ್ಲೂ ನೋಟಿಫಿಕೇಶನ್ ಆಗಿಲ್ಲ ಎಂದು ಸೊಗಡು ಶಿವಣ್ಣ ಹೇಳಿದರು.