ಶಿಕ್ಷಕರ ಮೇಲಿನ ಒತ್ತಡ ಕಡಿಮೆ ಮಾಡಿ

ಶಾಲಾ -ಶಿಕ್ಷಕರ ಮೇಲಿನ ಒತ್ತಡ ಕಡಿಮೆ ಮಾಡುವಂತೆ ಒತ್ತಾಯಿಸಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಗ್ರೇಡ್​&2 ತಹಸೀಲ್ದಾರ್​ ಪಿಎಸ್​ಆರ್​ ಪ್ರಸಾದ್​ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ವಸಂತ್​ ಕುಮಾರ್​, ಖಜಾಂಚಿ ಟಿ.ಸೋಮಶೇಖರ್​, ಉಪಾಧ್ಯಕ್ಷರಾದ ಸರೋಜಾದೇವಿ, ಸುಧಾಮಣಿ. ಸಂಘಟನಾ ಕಾರ್ಯದರ್ಶಿ. ಹನುಮಂತರಾಯ, ನಿರ್ದೇಶಕರಾದ ನಾಗೇಂದ್ರ, ರಿಜ್ವಾನ್​ ಬಾಷಾ ಇತರರು ಇದ್ದರು.
ಶಾಲಾ -ಶಿಕ್ಷಕರ ಮೇಲಿನ ಒತ್ತಡ ಕಡಿಮೆ ಮಾಡುವಂತೆ ಒತ್ತಾಯಿಸಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಗ್ರೇಡ್​&2 ತಹಸೀಲ್ದಾರ್​ ಪಿಎಸ್​ಆರ್​ ಪ್ರಸಾದ್​ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ವಸಂತ್​ ಕುಮಾರ್​, ಖಜಾಂಚಿ ಟಿ.ಸೋಮಶೇಖರ್​, ಉಪಾಧ್ಯಕ್ಷರಾದ ಸರೋಜಾದೇವಿ, ಸುಧಾಮಣಿ. ಸಂಘಟನಾ ಕಾರ್ಯದರ್ಶಿ. ಹನುಮಂತರಾಯ, ನಿರ್ದೇಶಕರಾದ ನಾಗೇಂದ್ರ, ರಿಜ್ವಾನ್​ ಬಾಷಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕರ ಮೇಲಿನ ಒತ್ತಡ ಕಡಿಮೆ ಮಾಡಿ
ಶಿಕ್ಷಕರ ಮೇಲಿನ ಒತ್ತಡ ಕಡಿಮೆ ಮಾಡಿ
ಪಾವಗಡ: ಶಾಲಾ -ಶಿಕ್ಷಕರ ಮೇಲಿನ ಒತ್ತಡ ಕಡಿಮೆ ಮಾಡುವಂತೆ ಒತ್ತಾಯಿಸಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮೌನ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ಗುರುಭವನದಿಂದ ಹೊರಟ ಶಿಕ್ಷಕರ ಪ್ರತಿಭಟನಾ ಮೆರವಣಿಗೆ ತಾಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಾರ್ಗವಾಗಿ ತಾಲೂಕು ಆಡಳಿತ ಭವನದ ಬಳಿ ಸಮಾವೇಶಗೊಂಡಿತು.
ಪಾವಗಡ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲಿಂಗಣ್ಣ ಮಾತನಾಡಿ, ಶಾಲಾ ಶಿಕ್ಷಕರನ್ನು ವಿವಿಧ ಸರ್ಕಾರದ ಕಾರ್ಯಕ್ರಮಗಳಿಗೆ ನಿಯೋಜನೆಗೊಳಿಸಿರುವುದರಿಂದ ಮಕ್ಕಳ ಪಾಠ ಪ್ರವಚನಕ್ಕೆ ತೊಂದರೆಯಾಗುತ್ತಿದೆ. ಶಿಕ್ಷಕರಿಗೆ ಬಿಸಿ ಊಟದ ಜವಾಬ್ದಾರಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರ್ಕಾರ ನೀಡುತ್ತಿರುವ ಮೊಟ್ಟೆಯ ಹಣಕ್ಕೂ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಮೊಟ್ಟೆ ದರಕ್ಕೂ ಬಹಳ ವ್ಯತ್ಯಾಸವಿದೆ. ಶಿಕ್ಷಕರು ತಮ್ಮ ಸ್ವಂತ ಹಣ ಭರಿಸುತ್ತಿರುವುದು ನ್ಯಾಯಸಮ್ಮತವಲ್ಲ. ಹಾಗಾಗಿ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ತಕ್ಷಣವೇ ಅನುದಾನ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಶಿಕ್ಷಕರ ಮೇಲೆ ಎಸ್​ಐಆರ್​ ಹಾಗೂ ಬಿಎಲ್​ಒ ಮತ್ತು ನಿರಂತರ (ಕೆಎಎಎಂಎಸ್​) ತಂತ್ರಾಂಶ ಸುಧಾರಣೆಮಾಡಿ ತಾಂತ್ರಿಕ ತೊಂದರೆಗಳಿಂದ ಶಿಕ್ಷಕರಿಗೆ ವಿವಿಧ ಕೆಲಸದ ಒತ್ತಡ ನೀಡಲಾಗುತ್ತಿದೆ. ಇದರಿಂದ ಶಿಕ್ಷಕರು ಮಾನಸಿಕ ಒತ್ತಡಕ್ಕೆ ಒಳಗಾಗಿ ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ಶಿಕ್ಷಕರಿಗೆ ಹೆಚ್ಚುವರಿ ಜವಾಬ್ದಾರಿ ನೀಡದೆ ಶಿಕ್ಷಕರ ಮತ್ತು ಮಕ್ಕಳ ಸ್ನೇಹಿ ವ್ಯವಸ್ಥೆ ರೂಪಿಸಿ, ಮಕ್ಕಳ ಜತೆ ಪಾಠ ಪ್ರವಚನ ಮಾಡಲು ಮಾತ್ರ ನಿಯೋಜಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾನಿರತರ ಆಗ್ರಹ: ಪ್ರಸ್ತುತ ಶಾಲೆಗಳಲ್ಲಿ ಶಿಕ್ಷಕರು ಬೋಧನಾ ಕಾರ್ಯಕ್ಕಿಂತ ಹೆಚ್ಚಾಗಿ ಆಡಳಿತಾತ್ಮಕ ಮತ್ತು ತಾಂತ್ರಿಕ ಕೆಲಸಗಳ ಒತ್ತಡಕ್ಕೆ ಸಿಲುಕಿದ್ದಾರೆ.ಸ್ಯಾಟ್ಸ್​, ಯುಡಿಐಎಸ್​ಇ, ಎಂಡಿಎಂ, ನಿರಂತರ ಹಾಗೂ ಇನ್​ಸ್ಪೆ$ರ್​ ಅವಾರ್ಡ್​ ಮುಂತಾದ ಆನ್​ಲೈನ್​ ಕೆಲಸಗಳ ಅತಿಯಾದ ಒತ್ತಡದಿಂದ ಶಿಕ್ಷಕರನ್ನು ಮುಕ್ತಗೊಳಿಸಬೇಕು. ಪ್ರತಿ ಶಾಲೆಗೆ ತಕ್ಷಣವೇ ಒಬ್ಬರು ಡಾಟಾ ಎಂಟ್ರಿ ಆಪರೇಟರ್​ಗಳನ್ನು ನೇಮಿಸಬೇಕು. ಬಿಸಿಯೂಟ ಯೋಜನೆ ಜವಾಬ್ದಾರಿಯನ್ನು ಬಾಹ್ಯ ಏಜೆನ್ಸಿಗಳಿಗೆ ವಹಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಪ್ರಭಟನಾನಿರತ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ಬಳಿಕ ಪ್ರತಿಭಟನಾನಿರತ ಶಿಕ್ಷಕರು ತಾಪಂ ಎಡಿ ಮಾರುತಿ ಪ್ರಸಾದ್​, ಬಿಇಒ ರೇಣುಕಮ್ಮ ಹಾಗೂ ಗ್ರೇಡ್​ 2 ತಹಸೀಲ್ದಾರ್​ ಪಿಎಸ್​ಅರ್​ ಪ್ರಸಾದ್​ ಅವರಿಗೆ ಮನವಿ ಸಲ್ಲಿಸಿದರು.
ಸರ್ಕಾರಿ ನೌಕರ ಸಂಘದ ಕಾರ್ಯದರ್ಶಿ ಮಾರುತೇಶ್​, ಉಪಾಧ್ಯಕ್ಷರಾದ ಗಂಗಾಧರ್​, ರಾಮಾಂಜಿ,ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಚೌಡಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ನಾಗವೀಣಾ ಇದ್ದರು.
18 ಪಿವಿಜಿ 1
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net