ಸೋಮನಹಳ್ಳಿ ವೃದ್ಧೆಗೆ ಸಿಕ್ಕಿದ ಪಡಿತರ ಚೀಟಿ, ಗೃಹಲಕ್ಷ್ಮೀ

ಹುಳಿಯಾರು ಹೋಬಳಿ ಸೋಮನಹಳ್ಳಿ ಕರಿಯಮ್ಮ ಮನೆಗೆ ಭೇಟಿ ನೀಡಿದ ತಹಸೀಲ್ದಾರ್​ ಎಂ.ಮಮತಾ ಹೊಸ ಪಡಿತರ ಚೀಟಿಯನ್ನು ಹಸ್ತಾಂತರಿಸಿದರು.
ಹುಳಿಯಾರು ಹೋಬಳಿ ಸೋಮನಹಳ್ಳಿ ಕರಿಯಮ್ಮ ಮನೆಗೆ ಭೇಟಿ ನೀಡಿದ ತಹಸೀಲ್ದಾರ್​ ಎಂ.ಮಮತಾ ಹೊಸ ಪಡಿತರ ಚೀಟಿಯನ್ನು ಹಸ್ತಾಂತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಜಯವಾಣಿ ವರದಿಗೆ ಸಿಎಂ ಕಚೇರಿ ಸ್ಪಂದನೆ
  • ಕಷ್ಟಪರಿಹರಿಸಿ ಅನುಪಾಲನಾ ವರದಿ ಸಲ್ಲಿಸಿದ ಡಿಸಿ
  • ಡಾ.ಕೆ.ವೈಷ್ಣವಿ ಸೂಚನೆಗೆ ಜಿಲ್ಲಾಡಳಿತ ಸತ್ಕಾರ್ಯ
ತುಮಕೂರು: ಪತಿ ಕಳೆದುಕೊಂಡು 30 ವರ್ಷವಾದರೂ ಸರ್ಕಾರದಿಂದ ಬರಬೇಕಾದ ಸೌಲಭ್ಯವನ್ನು ಪಡೆಯಲಾಗದೆ ಕಂಗಾಲಾಗಿದ್ದ ಹುಳಿಯಾರು ಹೋಬಳಿ ಸೋಮನಹಳ್ಳಿಯ 70 ವರ್ಷದ ವೃದ್ಧೆ ಕರಿಯಮ್ಮ ಅವರ ಕಷ್ಟಕ್ಕೆ ಸಿಎಂ ಕಚೇರಿ ಸ್ಪಂದಿಸಿದೆ.
2025ರ ವರೆಗೂ ಸಮಾಜಿಕ ಭದ್ರತಾ ಯೋಜನೆಯಲ್ಲಿ ಪಿಂಚಣಿ ಕೂಡ ಪಡೆಯಲಾಗದೆ ಸಂಕಷ್ಟ ಅನುಭವಿಸಿದ್ದ ಕರಿಯಮ್ಮಗೆ ಪಡಿತರ ಚೀಟಿ ಸಿಗದೆ ಊಟಕ್ಕೂ ತೊಂದರೆಯಾಗಿದ್ದ ಬಗ್ಗೆ ವಿಜಯವಾಣಿ ಏ.7ರಂದು "ಪತಿ ಸತ್ತು 30 ವರ್ಷವಾದರೂ ಸಿಕ್ಕಿಲ್ಲ ಸೌಲಭ್ಯ' ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.
ವಿಜಯವಾಣಿ ವರದಿಯನ್ನು ಗಮನಿಸಿದ್ದ ಸಿಎಂ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ತುಮಕೂರು ಜಿಲ್ಲಾಧಿಕಾರಿಗೆ ಪತ್ರ ಬರೆದು ಕೂಡಲೇ ಸಮಸ್ಯೆ ಭಗೆಹರಿಸಿ ಅನುಪಾಲನಾ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದರು. ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್​ ತತ್​ಕ್ಷಣವೇ ಕ್ರಮಕೈಗೊಂಡು ವೃದ್ಧೆಯ ಸಮಸ್ಯೆ ಭಗೆಹರಿಸಿ ಸಿಎಂ ಕಚೇರಿಗೆ ಮೇ.11ರಂದು ಅನುಪಾಲನಾ ವರದಿ ಸಲ್ಲಿಸಿದ್ದಾರೆ.
ಮೇ.14ರಂದು ಚಿಕ್ಕನಾಯಕನಹಳ್ಳಿ ತಹಸೀಲ್ದಾರ್​ ಎಂ.ಮಮತಾ ಅಧಿಕಾರಿಗಳೊಂದಿಗೆ ಖುದ್ದು ಸೋಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪಡಿತರ ಚೀಟಿಯನ್ನು ಕರಿಯಮ್ಮ ಅವರಿಗೆ ಕೊಟ್ಟು, ಗೃಹ ಲಕ್ಷಿ$್ಮ ಹಣ ಕೂಡ ಮುಂದಿನ ತಿಂಗಳಿನಿಂದಲೇ ಖಾತೆಗೆ ಬರಲಿದೆ ಎಂದು ತಿಳಿಸಿದ್ದಾರೆ. ಜೆತೆಗೆ ಶ್ರೀದಲ್ಲಿಯೇ ವಸತಿ ಯೋಜನೆಯಲ್ಲಿ ಮನೆ ನೀಡುವ ಭರವಸೆ ನೀಡಿದ್ದಾರೆ.
ಕರಿಯಮ್ಮ ಅವರಿಗೆ ಇದ್ದ ಪಡಿತರ ಚೀಟಿಯನ್ನು ಸಕಾರಣವಿಲ್ಲದೆ ಏಕಾಏಕಿ ಆಹಾರ ಇಲಾಖೆ ರದ್ದುಪಡಿಸಿತ್ತು. ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ತಂತ್ರಾಂಶದಲ್ಲಿ ಅವಕಾಶವಾಗದೆ ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಈ ಬಗ್ಗೆ ವಿಜಯವಾಣಿ ವರದಿ ಪ್ರಕಟಟವಾದ ಕೂಡಲೇ ಸಾಮಾನ್ಯ ಪ್ರಕರಣದಲ್ಲಿ(ವೈದ್ಯಕಿಯ ಪ್ರಕರಣೇತರ) ಆನ್​ಲೈನ್​ ಮೂಲಕ ಡಪಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಪಡೆದು ಅನುಕೂಲ ಮಾಡಿಕೊಡಲಾಗಿದೆ.
ಪಡಿತರ ಚೀಟಿ ಅಕರಿಯಮ್ಮಗೆ ಅತ್ಯಗತ್ಯವಾಗಿರುವ ವಸತಿ ಕಲ್ಪಿಸಲು ತಾಪಂ ಇಒ ವರದಿ ನೀಡಿದ್ದು ಯೋಜನೆ ಬಂದಾಗ ಮನೆ ನೀಡುವ ಭರವಸೆ ನೀಡಲಾಗಿದೆ.
ವಿಜಯವಾಣಿ ಪತ್ರಿಕೆಯಲ್ಲಿ ವಿಷಯ ಬಂದಮೇಲೆ ಅಧಿಕಾರಿಗಳು ಮನೆಗೆ ಬಂದು ರೇಷನ್​ಕಾರ್ಡ್​ ಮಾಡಿಕೊಟ್ಟಿದ್ದಾರೆ, ಸಿದ್ದರಾಮಯ್ಯ ನೀಡುವ ಎರಡು ಸಾವಿರ ರೂಪಾಯಿ ಕೂಡ ಬರಲಿದೆ ಎಂದು ಹೇಳಿದ್ದಾರೆ.
ಕರಿಯಮ್ಮ
ಸೋಮನಹಳ್ಳಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net