ವೀರಶೈವ ಸಮಾಜ ಅಧ್ಯಕ್ಷರಾಗಿ ಕೋರಿ ಮಂಜುನಾಥ್​

ತುಮಕೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಧನುರ್ಮಾಸದ ಇಷ್ಟಲಿಂಗ ಪೂಜೆಯನ್ನು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಜಗದ್ಗುರುಗಳು ನೆರವೇರಿಸಿದರು.
ತುಮಕೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಧನುರ್ಮಾಸದ ಇಷ್ಟಲಿಂಗ ಪೂಜೆಯನ್ನು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಜಗದ್ಗುರುಗಳು ನೆರವೇರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಧರ್ಮ ಜಾಗೃತಿ ಸಮಾರಂಭ
  • ರಂಭಾಪುರಿ ಶ್ರೀಗಳಿಂದ ಧನುರ್ಮಾಸ ಪೂಜೆ
  • ಗೌರವಾಧ್ಯಕ್ಷರಾಗಿ ಚಂದ್ರಮೌಳಿ
ತುಮಕೂರು: ಅನಾರೋಗ್ಯಕ್ಕೀಡಾಗಿರುವ ಎಸ್​.ಜಿ.ಚಂದ್ರಮೌಳಿ ಅವರಿಗೆ ಸೇವಾ ಕಾರ್ಯ ಸಾಧ್ಯವಾಗದ ಹಿನ್ನೆಲೆ ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷರನ್ನಾಗಿ ಕೋರಿ ಮಂಜುನಾಥ್​ರನ್ನು ನಿಯೋಜಿಸಿರುವುದಾಗಿ ಸಿದ್ದರಬೆಟ್ಟ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಘೋಷಿಸಿದರು.
ನಗರದ ಜೆ.ಸಿ.ರಸ್ತೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸಂಜೆ ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧರ್ಮ ಜಾಗೃತಿ ಸಮಾರಂಭ ನಡೆಯಿತು. ಸಭೆ ಆರಂಭದಲ್ಲಿ ವೀರಶೈವ ಸಮಾಜ ಸೇವಾ ಸಮಿತಿಯ ತೀರ್ಮಾನವನ್ನು ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಪ್ರಕಟಿಸಿದರು. ನೂತನ ಅಧ್ಯಕ್ಷ ಕೋರಿ ಮಂಜುನಾಥ್​ ಅವರನ್ನು ರಂಭಾಪುರಿ ಶ್ರೀಗಳು ಆಶೀರ್ವದಿಸಿದರು.
ಇಷ್ಟಲಿಂಗ ಪೂಜೆ: ಧನುಮಾರ್ಸದ ಇಷ್ಟಲಿಂಗ ಮಹಾಪೂಜೆ ಹಾಗೂ ಸಾಮೂಹಿಕ ಶಿವ ಪೂಜೆ ಮುಂಜಾನೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನೆರವೇರಿತು. ಸಿದ್ಧರಬೆಟ್ಟ ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ನೇತೃತ್ವವಹಿಸಿದ್ದರು. ನಗರ ವೀರಶೈವ ಸಮಾಜ ಸೇವಾ ಸಮಿತಿಯು ಈ ಪೂಜಾ ಕಾರ್ಯಕ್ರಮ ಆಯೋಜಿಸಿತ್ತು.
ವೀರಶೈವ ಸಮಾಜದ ಉಪಾಧ್ಯಕ್ಷ ಟಿ.ಬಿ. ಹರೀಶ್​, ಕಾರ್ಯದರ್ಶಿ ಡಿ.ಜೆ. ಶಶಿಧರನ್​, ಖಜಾಂಚಿ ಜಿ.ಕೆ.ಸ್ವಾಮಿ, ಮುಖಂಡರಾದ ಕೋರಿ ಮಂಜುನಾಥ್​, ಬಾವಿಕಟ್ಟೆ ಬಿ.ಎಸ್​. ಮಂಜುನಾಥ್​, ಸಿದ್ಧಲಿಂಗಪ್ಪ ಸೇರಿದಂತೆ ಸಮಿತಿ ನಿರ್ದೇಶಕರು, ಸಮಾಜದ ಹಲವು ಮುಖಂಡರು, ಹೆಚ್ಚಿನ ಸಂಖ್ಯೆಯ ಭಕ್ತರು ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಹಾಗೂ ಸಾಮೂಹಿಕ ಶಿವಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net