ಕ್ವಿಟ್ ಇಂಡಿಯಾ ಚಳವಳಿ 84ನೇ ವರ್ಷದ ಸವಿನೆನಪಿನ ಅಂಗವಾಗಿ ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿನ ಮಹಾತ್ಮಗಾಂಧಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಜಿ.ಚಂದ್ರಶೇಖರಗೌಡ, ಆರ್.ರಾಮಕೃಷ್ಣ, ಮುರಳೀಧರಹಾಲಪ್ಪ, ಷಣ್ಮುಖಪ್ಪ, ಟಿ.ಎಚ್.ತರುಣೇಶ್, ಸುರೇಶ್, ಇಾರ್ನ್ ಅಹ್ಮದ್, ಸೌಭಾಗ್ಯ, ಸುಜಾತ ಮತ್ತಿತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಂತ್ರಿಗಿರಿಗಾಗಿ ಪಕ್ಷವನ್ನು ಹೀಯಾಳಿಸುವ ಮಂದಿ
ಕ್ವಿಟ್ ಇಂಡಿಯಾ ಚಳವಳಿ ಸವಿನೆನಪು
ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಚರಣೆ
ತುಮಕೂರು: ಮಂತ್ರಿಗಿರಿಗಾಗಿ ಪಕ್ಷವನ್ನೇ ಹಿಯಾಳಿಸುವ ನಾಯಕರಿಗೆ ಗಾಂಧೀಜಿ ಅವರ ಬದುಕು ಆದರ್ಶವಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಹೇಳಿದರು.
ಕ್ವಿಟ್ ಇಂಡಿಯಾ ಚಳವಳಿ 84ನೇ ವರ್ಷದ ಸವಿನೆನಪಿಗಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿರುವ ರಾಷ್ಟ್ರಪಿತಿ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರಿಗೆ ಸ್ವಾತಂತ್ರ$್ಯ ನಂತರ ಈ ದೇಶದ ಮೊದಲ ಪ್ರಧಾನಿಯಾಗುವ ಅವಕಾಶ ಇದ್ದರು ಅದನ್ನು ತಿರಸ್ಕರಿಸಿ ಜವಹರಲಾಲ್ ನೆಹರುಗೆ ಜವಾಬ್ದಾರಿ ವಹಿಸಿಕೊಟ್ಟರು. ಇದರ ಹಿಂದಿನ ಘನ ಉದ್ದೇಶವನ್ನು ನಾವೆಲ್ಲರು ಅರ್ಥ ಮಾಡಿಕೊಳ್ಳಬೇಕಾಗಿದೆ. ಅಧಿಕಾರ ತ್ಯಾಗ ಮಾಡಿದ್ದ ಗಾಂಧಿಜೀಯವರ ಬದುಕು ಒಂದು ಸಂದೇಶ ಎಂಬುದನ್ನು ನಾವೆಲ್ಲರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣ ಮಾತನಾಡಿ, ಮಹಾತ್ಮಗಾಂಧಿ ಅವರು ಕಾಂಗ್ರೆಸ್ನ ಅಧ್ಯಕ್ಷರಾದ ನಂತರ ದೇಶದ ಸ್ವಾತಂತ್ರಕ್ಕಾಗಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ ಸೇರಿದಂತೆ ಹಲವಾರು ಶಾಂತಿ ಮತ್ತು ಆಹಿಂಸಾ ಮಾರ್ಗಗಳ ಮೂಲಕ ಹೋರಾಟ ರೂಪಿಸಿ, ಅಂತಿಮವಾಗಿ ದೇಶಕ್ಕೆ ಸ್ವಾತಂತ್ರ$್ಯ ತಂದುಕೊಡುವಲ್ಲಿ ಯಶಸ್ವಿಯಾದರು.1942 ಆಗಸ್ಟ್ 9 ರಂದು ಆರಂಭವಾದ ಕ್ವಿಟ್ ಇಂಡಿಯಾ ಚಳವಳಿ ಭಾರತೀಯರ ಪಾಲಿಗೆ ಮಾಡು ಇಲ್ಲವೇ ಮಡಿ ಹೋರಾಟವಾಗಿತ್ತು ಎಂದು ಸ್ಮರಿಸಿದರು.
ಜಿಲ್ಲಾ ಕಾಂಗ್ರೆಸ್ ವಕೀಲ ವಿಭಾಗದ ಅಧ್ಯಕ್ಷ ಸುರೇಶ್ ಮಾತನಾಡಿ, ಗಾಂಧಿ, ನೆಹರು, ಮೌಲಾನ ಅಬ್ದುಲ್ ಅಜಾದ್, ಬಾಲಗಂಗಾಧರ ತಿಲಕ್, ವಲ್ಲಭಬಾಯಿ ಪಟೇಲ್ ಅಂತಹವರ ಹೋರಾಟ ಲವಾಗಿ ನಾವು ಸ್ವಾತಂತ್ರ$್ಯ ಪಡೆದಿದ್ದೇವೆ. ಆದರೆ ಗಾಂಧಿ ಮತ್ತು ನೆಹರು ಅವರನ್ನು ದೇಶದ ಶತ್ರುಗಳು ಎಂಬಂತೆ ಬಿಂಬಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಾಗಾಗಿ ಇಂದಿನ ಯುವಜನರಿಗೆ ಸತ್ಯ ತಿಳಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಿದೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರಹಾಲಪ್ಪ, ಹಿರಿಯ ಮುಖಂಡ ಷಣ್ಮುಖಪ್ಪ, ಕಾಂಗ್ರೆಸ್ ಅಲ್ಲಸಂಖ್ಯಾತರ ವಿಭಾಗದ ಅಧ್ಯಕ್ಷ ಇಾರ್ನ್ ಅಹ್ಮದ್, ಗ್ರಾಮಾಂತರ ಕ್ಷೇತ್ರ ಕೆಂಪಣ್ಣ, ಪ್ರಚಾರ ಸಮಿತಿ ಕಾರ್ಯದರ್ಶಿ ಶಿವಾಚಿ, ಮಂಜುನಾಥ್, ಟಿ.ಎಚ್.ತರುಣೇಶ್, ಕೆಂಪರಾಜು, ನ್ಯಾತೇಗೌಡ, ಸೌಭಾಗ್ಯ, ಕುಮಾರಸ್ವಾಮಿ, ಕೈದಾಳ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.