ಡಿಸೆಂಬರ್​ನಲ್ಲಿ ಪುನೀತ್​ ರಾಜ್​ ಕಪ್​ ಕ್ರಿಕೆಟ್​ ಟೂರ್ನಿ

ತುಮಕೂರಿನ ಡಾ. ರಾಜ್​ ಸಾಂಸ್ಕತಿಕ ಹಾಗೂ ಕ್ರೀಡಾ ಸಂಘ ಹಾಗೂ ಚಕ್ರವರ್ತಿ ಸ್ಪೋರ್ಟ್ಸ್​ ಕ್ಲಬ್​ ವತಿಯಿಂದ ಆಯೋಜಿಸಿರುವ ರಾಜ್ಯ ಮಟ್ಟದ ಹೊನಲು ಬೆಳಕಿನ ಡಾ. ಪುನೀತ್​ ರಾಜ್​ ಕಪ್​ ಕ್ರಿಕೆಟ್​ ಪೋಸ್ಟರ್​ ಅನ್ನು ಜಿ.ಬಿ.ಜ್ಯೋತಿಗಣೇಶ್​ ಬಿಡುಗಡೆಗೊಳಿಸಿದರು. ಎಚ್​.ಎನ್​.ದೀಪಕ್​, ಪಿ.ಎನ್​.ಕೃಷ್ಣಮೂರ್ತಿ, ಪ್ರಕಾಶ್​ ಚಕ್ರವರ್ತಿ, ಶಂಕರ್​, ಅರವಿಂದ್​ ಮತ್ತಿತರರು ಇದ್ದರು.
ತುಮಕೂರಿನ ಡಾ. ರಾಜ್​ ಸಾಂಸ್ಕತಿಕ ಹಾಗೂ ಕ್ರೀಡಾ ಸಂಘ ಹಾಗೂ ಚಕ್ರವರ್ತಿ ಸ್ಪೋರ್ಟ್ಸ್​ ಕ್ಲಬ್​ ವತಿಯಿಂದ ಆಯೋಜಿಸಿರುವ ರಾಜ್ಯ ಮಟ್ಟದ ಹೊನಲು ಬೆಳಕಿನ ಡಾ. ಪುನೀತ್​ ರಾಜ್​ ಕಪ್​ ಕ್ರಿಕೆಟ್​ ಪೋಸ್ಟರ್​ ಅನ್ನು ಜಿ.ಬಿ.ಜ್ಯೋತಿಗಣೇಶ್​ ಬಿಡುಗಡೆಗೊಳಿಸಿದರು. ಎಚ್​.ಎನ್​.ದೀಪಕ್​, ಪಿ.ಎನ್​.ಕೃಷ್ಣಮೂರ್ತಿ, ಪ್ರಕಾಶ್​ ಚಕ್ರವರ್ತಿ, ಶಂಕರ್​, ಅರವಿಂದ್​ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ರಾಜ್​ ಸಾಂಸ್ಕತಿಕ ಹಾಗೂ ಕ್ರೀಡಾ ಸಂಘ ಹಾಗೂ ಚಕ್ರವರ್ತಿ ಸ್ಪೋರ್ಟ್ಸ್​ ಕ್ಲಬ್​
  • ಡಿ.25 ರಿಂದ 28ರವರೆಗೆ ತುಮಕೂರಿನ ಸರ್ಕಾರಿ ಜೂನಿಯರ್​ ಕಾಲೇಜು ಮೈದಾನದಲ್ಲಿ ಟೂರ್ನಿ
  • ಪೋಸ್ಟರ್​ ಬಿಡುಗಡೆ ಮಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್​
ತುಮಕೂರು: ದಿ. ಡಾ. ಜಯರಾಮ್​ ಅವರ ಸ್ಮರಣಾರ್ಥ ಡಾ. ರಾಜ್​ ಸಾಂಸ್ಕತಿಕ ಹಾಗೂ ಕ್ರೀಡಾ ಸಂಘ ಹಾಗೂ ಚಕ್ರವರ್ತಿ ಸ್ಪೋರ್ಟ್ಸ್​ ಕ್ಲಬ್​ ವತಿಯಿಂದ ರಾಜ್ಯ ಮಟ್ಟದ ಹೊನಲು ಬೆಳಕಿನ ಡಾ. ಪುನೀತ್​ ರಾಜ್​ ಕಪ್​ ಕ್ರಿಕೆಟ್​ ಟೂರ್ನಿಯನ್ನು ಡಿ.25ರಿಂದ 28ರವರೆಗೆ ನಗರದ ಸರ್ಕಾರಿ ಜೂನಿಯರ್​ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.
ನಗರದ ಗಣಪತಿ ದೇವಾಲಯಲ್ಲಿ ಡಾ. ಪುನೀತ್​ ರಾಜ್​ ಕುಮಾರ್​ ಕಪ್​ ಟೂರ್ನಿಯ ಪೋಸ್ಟರ್​ ಅನ್ನು ಗುರುವಾರ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್​, ವರನಟ ಡಾ.ರಾಜ್​ ಕುಟುಂಬದ ಪುನೀತ್​ ರಾಜ್​ಕುಮಾರ್​ ಕಪ್​ ಟೂರ್ನಿಯನ್ನು ದಿ. ಡಾ. ಜಯರಾಮ್​ ಅವರ ಸ್ಮರಣಾರ್ಥವಾಗಿ ಆಯೋಜಿಸುತ್ತಿರುವುದು ವಿಶೇಷವೆನಿಸಿದೆ. ಜಯರಾಮ್​ ಅವರು ಕ್ರೀಡಾ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ಕೊಟ್ಟಿದ್ದಾರೆ ಎಂದರು
ವಿಜಯ ಸೇನೆ ಅಧ್ಯಕ್ಷ ಎಚ್​.ಎನ್​.ದೀಪಕ್​ ಮಾತನಾಡಿ, ಪ್ರತಿವರ್ಷ ನಾವು ಯಾವುದಾದರೂ ಒಂದು ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬರುತ್ತಿದ್ದೇವೆ. ಈ ಟೂರ್ನಿ ವೇಳೆ ಸಾಧಕ ಹಳೆ ಕ್ರೀಡಾಪಟುಗಳಿಗೆ ಸನ್ಮಾನ ಮಾಡುತ್ತೇವೆ. ಎಲ್ಲರೂ ಜೊತೆಗೂಡಿ ಹಬ್ಬದ ರೀತಿಯಲ್ಲಿ ಮಾಡುತ್ತಿದ್ದೇವೆ. ಮೊದಲ ಬಹುಮಾನ 5 ಲಕ್ಷ, ದ್ವೀತಿಯ ಬಹುಮಾನ ಎರಡೂವರೆ ಲಕ್ಷ, ಮೂರು ಮತ್ತು ನಾಲ್ಕು ಬಹುಮಾನ ತಲಾ 50 ಸಾವಿರ ನಗದು ಬಹುಮಾನ ನಿಗದಿ ಮಾಡಲಾಗಿದೆ ಎಂದರು.
ಕಾಂಗ್ರೆಸ್​ ಮುಖಂಡ ಪಿ.ಎನ್​.ಕೃಷ್ಣಮೂರ್ತಿ, ಚಕ್ರವರ್ತಿ ಸ್ಪೋರ್ಟ್ಸ್​ ಕ್ಲಬ್​ ನ ಪ್ರಕಾಶ್​ ಚಕ್ರವರ್ತಿ, ಶಂಕರ್​, ರಂಜನ್​, ಅರವಿಂದ್​ , ಚೇತನ್,​ ಹರೀಶ್​, ಚಂದನ್​, ಅಖಿಲೇಷ್​, ಅರುಣ್​ ಕೃಷ್ಣಯ್ಯ, ಅರವಿಂದ್​ ಬಾಳಾರಾಧ್ಯ ಸೇರಿದಂತೆ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net