ಆಲ್​ ದಿ ಬೆಸ್ಟ್​ ಹೇಳಿದ ಡಿಸಿ ಶುಭಕಲ್ಯಾಣ್​

  ದ್ವೀತಿಯ ಪರೀಕ್ಷೆ ಸಿದ್ಧತೆ ಹಿನ್ನೆಲೆ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಡಾ.ಎನ್​.ತಿಪ್ಪೇಸ್ವಾಮಿ, ಡಾ.ಬಾಲಗುರುಮೂರ್ತಿ, ಪುರುಷೋತ್ತಮ್​ ಮತ್ತಿತರರು ಇದ್ದರು.
ದ್ವೀತಿಯ ಪರೀಕ್ಷೆ ಸಿದ್ಧತೆ ಹಿನ್ನೆಲೆ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಡಾ.ಎನ್​.ತಿಪ್ಪೇಸ್ವಾಮಿ, ಡಾ.ಬಾಲಗುರುಮೂರ್ತಿ, ಪುರುಷೋತ್ತಮ್​ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 41 ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆ
  • ಪಿಯು 'ಎಥಿಕಲ್​' ಪರೀಕ್ಷೆಗೆ ಜಿಲ್ಲಾಡಳಿತ ಸನ್ನದ್ಧ
  • ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ
ತುಮಕೂರು: ದ್ವೀತಿಯ ಪಿಯು ಪರೀಕ್ಷೆಗೆ ಕ್ಷಣಗಣನೆ ಆರಂಭವಾಗಿದ್ದು ಯಾವುದೇ ಪರೀಕ್ಷಾ ಅಕ್ರಮಗಳಿಗೆ ಅವಕಾಶ ನೀಡದೆ ನೈತಿಕವಾಗಿ ಪರೀಕ್ಷೆ ನಡೆಸಲು ಜಿಲ್ಲಾಡಳಿತ ಸಿದ್ಧತೆಮಾಡಿಕೊಂಡಿದೆ. ಫೆ.28 ರಿಂದ ಮಾ.17ರವರೆಗೆ ನಡೆಯಲಿರುವ ಪರೀಕ್ಷೆಯನ್ನು "ಆತ್ಮವಿಶ್ವಾಸ'ದಿಂದ ಮಕ್ಕಳು ಎದುರಿಸಲು ಸೂಕ್ತ ವಾತಾವರಣ ನಿರ್ಮಿಸಲು ಸಂಕಲ್ಪ ತೊಡಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಸೋಮವಾರ ದ್ವೀತಿಯ ಪಿಯುಸಿ ಪರೀಕ್ಷೆ ಸಿದ್ಧತೆ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್​, ಪ್ರಸಕ್ತ ಸಾಲಿನಲ್ಲಿ 24753 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಣಿ ಮಾಡಿಸಿಕೊಂಡಿದ್ದು ಜಿಲ್ಲೆಯ 41 ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಲೋಪಗಳಿಗೆ ಅನುವು ಮಾಡಿಕೊಡದಂತೆ ಪಾರದರ್ಶಕವಾಗಿ ನಡೆಸಲು ಎಲ್ಲಾ ತಯಾರಿಯನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಉತ್ತಮ ವಾತಾವರಣ: ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಗೊಂದಲ ಮೂಡದಂತೆ ವಿದ್ಯಾರ್ಥಿಗಳು ರ್ನಿಭಿಡೆಯಿಂದ ಪರೀಕ್ಷೆ ಬರೆಯಲು ಗಾಳಿ, ಬೆಳಕು ಸೇರಿ ಉತ್ತಮ ವಾತಾವರಣ ನಿರ್ಮಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಆರೋಗ್ಯ ಸಿಬ್ಬಂದಿ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಯಾವುದೇ ಗಾಬರಿಗೆ ಅನುವು ಮಾಡಿಕೊಡದಂತೆ ಮುಕ್ತ, ನಿರ್ಬೀತಿಯ ವ್ಯವಸ್ಥೆಯಲ್ಲಿ ಮಕ್ಕಳು ಪರೀಕ್ಷೆ ಬರೆಯುವಂತೆ ಅವರಲ್ಲಿ ವಿಶ್ವಾಸ ಮೂಡಿಸಲಾಗುವುದು ಎಂದು ಶುಭಕಲ್ಯಾಣ್​ ಹೇಳಿದರು.
ಪ್ರಶ್ನೆ ಪತ್ರಿಕೆಗಳನ್ನು ಸೂಕ್ತ ಭದ್ರತೆಯಲ್ಲಿ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ಇನ್ನೂ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಟಿವಿ ಅಳವಡಿಸಲಾಗಿದ್ದು ನಿರಂತರ ವಿದ್ಯುತ್​ ಪೂರೈಕೆಗೆ ಯುಪಿಎಸ್​ ಇರಲಿದೆ. ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಪಂಚಾಯತ್​ ಕಚೇರಿಗಳಲ್ಲಿ ವಾರ್​ ರೂಂಗಳನ್ನು ತೆರೆಯಲಾಗಿದೆ. ಜಿಲ್ಲೆಯ ಎಲ್ಲಾ 41 ಪರೀಕ್ಷಾ ಕೇಂದ್ರಗಳ ವೆಬ್​ ಕ್ಯಾಸ್ಟಿಂಗ್​ ಮೂಲಕ ವೀಕ್ಷಣೆಯನ್ನು ಮಾಡಬಹುದಾಗಿದೆ. ಇದಕ್ಕಾಗಿ ಪರೀಕ್ಷಾ ಕೇಂದ್ರಗಳಿಗೆ ನಿರಂತರ ವಿದ್ಯುತ್​ ಸಂಪರ್ಕಕ್ಕೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ವಿದ್ಯಾರ್ಥಿಗಳು ತಮ್ಮ ಊರುಗಳಿಂದ ಸಕಾಲಕ್ಕೆ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಸುಗಮ ಸಾರಿಗೆ ಬಸ್​ ವ್ಯವಸ್ಥೆ ಮಾಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಸಂದರ್ಭದಲ್ಲಿ ಕೇಂದ್ರ ಸ್ಥಾನದಲ್ಲೇ ಇರುವಂತೆ ಸೂಚನೆ ನೀಡಿದರು.
ತುಮಕೂರು ಜಿಲ್ಲೆಯ 2 ಶೈಕ್ಷಣಿಕ ಜಿಲ್ಲೆಗಳ ಪೈಕಿ ತುಮಕೂರಿನ 30 ಕೇಂದ್ರಗಳು ಹಾಗೂ ಮಧುಗಿರಿಯ 11 ಕೇಂದ್ರಗಳು ಸೇರಿ ಒಟ್ಟು 41 ಪರೀಕ್ಷಾ ಕೇಂದ್ರಗಳಲ್ಲಿ ಖಾಸಗಿಯಾಗಿ 285 ವಿದ್ಯಾರ್ಥಿಗಳು, 1606 ಪುನರಾವರ್ತಿತ ವಿದ್ಯಾರ್ಥಿಗಳು, ಹೊಸದಾಗಿ 22851 ವಿದ್ಯಾರ್ಥಿಗಳು, ಹಾಗೂ 11 ಫಲಿತಾಂಶ ಸುಧಾರಣೆ ವಿದ್ಯಾರ್ಥಿಗಳು ಸೇರಿ ಒಟ್ಟು 24753 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದು ಎಲ್ಲರಿಗೂ "ಆಲ್​ ದಿ ಬೆಸ್ಟ್​' ಹೇಳಿದರು.
ಪರೀಕ್ಷಾ ಕೇಂದ್ರದ 200 ಮೀಟರ್​ ಪರಿದಿಯಲ್ಲಿ ಯಾವುದೇ ಜೆರಾಕ್ಸ್​ ಅಂಗಡಿಗಳು ಅಥವಾ ಸೈಬರ್​ ಕೆಫೆಗಳು ಕಾರ್ಯನಿರ್ವಹಿಸದಂತೆ ಹಾಗೂ ಯಾವುದೇ ಅಹಿತಕರ ಘಟನೆಗಳು, ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ನಿಷೇಧಾಜ್ಞೆ ವಿಧಿಸಲಾಗಿರುತ್ತದೆ. ಜಿಲ್ಲಾ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ನಿಗಧಿತ ಸಮಯಕ್ಕೆ ಪರೀಕ್ಷಾ ಕೇಂದ್ರಗಳಿಗೆ ಕೊಂಡೊಯ್ಯಲು ಮಾರ್ಗಾಧಿಕಾರಿಗಳ ತಂಡವನ್ನು ನೇಮಿಸಲಾಗಿದೆ. ಅಲ್ಲದೆ, ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಯಾವುದೇ ಸಮಸ್ಯೆ ಅಥವಾ ಗೊಂದಲಗಳು ಆಗದಂತೆ ಜವಾಬ್ದಾರಿವಹಿಸಲಾಗಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್​. ತಿಪ್ಪೇಸ್ವಾಮಿ, ಎಎಸ್ಪಿ ಪುರುಷೋತ್ತಮ್​, ತುಮಕೂರು ಉಪವಿಭಾಗಾಧಿಕಾರಿ ನಾಹಿದಾ ಜಮ್​ ಜಮ್​, ತಹಸೀಲ್ದಾರ್​ ರಾಜೇಶ್ವರಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ಉಪಸ್ಥಿತರಿದ್ದರು.
ಟಾಪ್​ ಟೆನ್​ನಲ್ಲಿ ಸ್ಥಾನ !
ಪ್ರಸ್ತುತ ತುಮಕೂರು ಜಿಲ್ಲೆ ಪಿಯುಸಿ ಫಲಿತಾಂಶ ಸುಧಾರಣೆಗೆ ಸಾಕಷ್ಟು ಕ್ರಮವಹಿಸಲಾಗಿದೆ. ಈಗಾಗಲೇ ಎರಡು ಪೂರ್ವಭಾವಿ ಪರೀಕ್ಷೆಗಳಲ್ಲಿ ಜಿಲ್ಲೆಯ ಲಿತಾಂಶ ರಾಜ್ಯದಲ್ಲಿಯೇ 4ನೇ ಸ್ಥಾನದಲ್ಲಿದ್ದು, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜತೆಗೆ ಪೂರಕ ಪರೀೆಗಳಲ್ಲಿ ಹೆಚ್ಚಿನ ಅಂಕಗಳಿಸಲು ಅವಕಾಶ ಇದೆ. ಒಟ್ಟಾರೆ ಈ ಬಾರಿ ದ್ವೀತಿಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಜಿಲ್ಲೆ ಒಟ್ಟಾರೆ ಲಿತಾಂಶದಲ್ಲಿ ಟಾಪ್​ ಟೆನ್​ ಒಳಗೆ ಸ್ಥಾನ ಪಡೆಯುವ ವಿಶ್ವಾಸ ಇದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್​ ತಿಳಿಸಿದರು.
ಕೋಟ್​...
ಪರೀಕ್ಷೆ ಅಕ್ರಮಗಳಿಗೆ ಅವಕಾಶ ಕೊಡುವುದಿಲ್ಲ. ವದಂತಿ ಹಬ್ಬಿಸುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ವಹಿಸಲಾಗುವುದು. ವಿದ್ಯಾರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ವರ್ಷವಿಡೀ ಕಷ್ಟಪಟ್ಟು ಓದಿರುವುದನ್ನು ಪುನರ್​ ಮನನ ಮಾಡಿಕೊಂಡು ಕಾನ್ಸಿಡೆನ್ಸ್​ನಿಂದ ಪರೀೆ ಬರೆಯಿರಿ. ಏನಾದರೂ ಪರೀಕ್ಷಾ ಆತಂಕ ಅಥವಾ ಸಮಸ್ಯೆಗಳಿದ್ದಲ್ಲಿ ಕಂಟ್ರೋಲ್​ ರೂಮ್​ ನಂಬರ್​ 1098ಗೆ ಕರೆ ಮಾಡಿ ಮಾತನಾಡಿ. ಪೋಷಕರು ಮಕ್ಕಳ ಮೇಲೆ ಒತ್ತಡ ಹೇರದೆ, ಆತ್ಮವಿಶ್ವಾಸ ತುಂಬಿ. ಪೌಷ್ಠಿಕ ಆಹಾರ ನೀಡಿ.
ಶುಭಕಲ್ಯಾಣ್​
ಜಿಲ್ಲಾಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net