ಒಳ ಮೀಸಲಾತಿ ಸಂಪೂರ್ಣ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ಒಳ ಮೀಸಲಾತಿಗೆ ಆಗ್ರಹಿಸಿ ನಡೆದ ಪ್ರತಿಭಟನಾ ಮೆರವಣಿಗೆ
ಒಳ ಮೀಸಲಾತಿಗೆ ಆಗ್ರಹಿಸಿ ನಡೆದ ಪ್ರತಿಭಟನಾ ಮೆರವಣಿಗೆ
Published on

ಪ್ರಮುಖ ಮುಖ್ಯಾಂಶಗಳು

  • ನೇರ ನೇಮಕಾತಿ, ಪದೋನ್ನತಿ ಹಾಗೂ ಬ್ಯಾಕ್​ಲಾಗ್​ ಸೇರಿ ಎಲ್ಲಾ ರಂಗಗಳಲ್ಲಿ ಒಳಮೀಸಲಾತಿ ಜಾರಿ
  • ಎಸ್​ಸಿಪಿ, ಟಿಎಸ್​ಪಿ ಅನುದಾನ 6:6:5ರ ಅನುಪಾತದಲ್ಲಿ ಹಂಚಿಕೆ
  • ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಶೇ.1 ಮೀಸಲಾತಿ, ಪ್ರತ್ಯೇಕ ನಿಗಮ ಹಾಗೂ ಪ್ಯಾಕೇಜ್​
  • ಶಾಶ್ವತ ಆಯೋಗ ನೇಮಕ ಹಾಗೂ ಮೀಸಲಾತಿ ಹೆಚ್ಚಳಕ್ಕೆ ಕಾನೂನು ಕ್ರಮ
  • ಒಳಮೀಸಲಾತಿ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಬೇಕು
ತುಮಕೂರು: ಮುಂಬರುವ ಬಜೆಟ್​ಅಧಿವೇಶನದಲ್ಲಿ ನೇರ ನೇಮಕಾತಿ, ಪದೊನ್ನತ್ತಿ, ಬ್ಯಾಕ್​ಲಾಗ್​, ಕೆಐಎಡಿಬಿ, ಬಿಡಿಎ ಹಾಗೂ ಗುತ್ತಿಗೆ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಸಂಪೂರ್ಣ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ವತಿಯಿಂದ ಬೃಹತ್​ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಬಿಜಿಎಸ್ ವೃತ್ತದಲ್ಲಿ ಸಮಾವೇಶಗೊಂಡ ಸಾವಿರಾರು ಒಳಮೀಸಲಾತಿ ಹೋರಾಟ ಸಮಿತಿಯ ಸದಸ್ಯರುಗಳು, ಅಶೋಕ ರಸ್ತೆಯ ಮೂಲಕ ಚರ್ಚ್​ ಸರ್ಕಲ್​, ಕೋಡಿ ಸರ್ಕಲ್​ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದರು.
ಜಿಲ್ಲಾ ಒಳಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ, ಮಾದಿಗ ಸಮುದಾಯ ಕಳೆದ 35 ವರ್ಷಗಳ ನಿರಂತರ ಹೋರಾಟದ ಫಲವಾಗಿ ಸುಪ್ರಿಂಕೋರ್ಟಿನ 7 ನ್ಯಾಯಾಧೀಶರ ಪೀಠದ ತೀರ್ಪಿನಂತೆ, ರಾಜ್ಯ ಸರ್ಕಾರ ನ್ಯಾ.ನಾಗಮೋಹನ್​ದಾಸ್​ಅವರ ಸಮಿತಿ ವರದಿ ಆಧರಿಸಿ ಒಳಮೀಸಲಾತಿ ಘೋಷಣೆ ಮಾಡಿದೆ. ನಾವು ಯಾರ ಪಾಲನ್ನು ಕೇಳುತ್ತಿಲ್ಲ.ನಮ್ಮ ಪಾಲಿನ ಹಕ್ಕನ್ನುಎಲ್ಲಾರಂಗದಲ್ಲಿಯೂ ನೀಡಿ ಎಂದು ಕೇಳುತಿದ್ದೇವೆ ಎಂದರು.
ಇದು ನಮ್ಮ ನ್ಯಾಯ ಸಮ್ಮತ ಬೇಡಿಕೆಯಾಗಿದೆ.ಮಾದಿಗರು ಮತ್ತು ಹೊಲೆಯರ ಮೇಲೆ ರಾಜ್ಯ ಸರ್ಪಕಾರ ಪರಸ್ವರ ದೋಷಾರೋಪಣೆ ಮಾಡುವುದರನ್ನು ಬಿಟ್ಟು, ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಎಲ್ಲಾ 101 ಜಾತಿಗಳಿಗೂ ಅನ್ಯಾಯವಾಗದ ರೀತಿ, ಸಾಮಾಜಿಕ ನ್ಯಾಯಕಲ್ಪಿಸುವ ನಿಟ್ಟಿನಲ್ಲಿ ಈ ಬಜೆಟ್​ಅಧಿವೇಶನದಲ್ಲಿ ಸಂಪೂರ್ಣ ಒಳಮೀಸಲಾತಿಗೆ ಜಾರಿ ಘೋಷಿಸಬೇಕು. ನಮ್ಮ ತಾಳ್ಮೆ ಪರೀಕ್ಷೆ ಮಾಡಲು ಸರಕಾರ ಹೋಗಬಾರದು ಎಂಬ ಎಚ್ಚರಿಕೆಯನ್ನು ನೀಡಿದರು.
ಕರ್ನಾಟಕ ಮಾದಾರ ಮಹಾಸಭಾದ ಜಿಲ್ಲಾಧ್ಯಕ್ಷ ವೈ.ಹೆಚ್​.ಹುಚ್ಚಯ್ಯ ಮಾತನಾಡಿ ,ಕಳೆದ 35 ವರ್ಷಗಳ ಹಿಂದೆ ಪ್ರೊ,.ಬಿ.ಕೃಷ್ಣಪ್ಪನವರದಲಿತ ಸಂಘರ್ಷ ಸಮಿತಿ, ಮಾದಿಗದಂಡೋರ ಹಾಗೂ ಇನ್ನಿತರ ಸಂಘಟನೆಗಳ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಾ ಬಂದ ಪರಿಣಾಮ,ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಪ್ರಾಣಾಳಿಕೆಯಲ್ಲಿ ಈ ವಿಷಯ ಸೇರಿಸಿ, ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿವೆ ಎಂದರು.
ರಾಜ್ಯದಲ್ಲಿ ನ್ಯಾ.ನಾಗಮೋಹನ್​ದಾಸ್​ ಸಮಿತಿ ಮಾಡಿ, ವರದಿ ಪಡೆದು, 6@6@5 ವರ್ಗಿಕರಿಸಿ ಜಾರಿಗೆತರಲು ಮುಂದಾಗಿದೆ. ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಒಳಮೀಸಲಾತಿ ನಿಗಧಿಯಾಗಿರುವುದು ಜನಸಂಖ್ಯೆಯ ಜೊತೆಗೆ, ಅವರ ಸಾಮಾಜಿಕ, ಶೈಕ್ಷಣಿಕ, ಅರ್ಥಿಕ ಹಿಂದುಳಿದಿರುವ ಆಧಾರದಲ್ಲಿ,ಆದರೆ ಕೆಲವರುತಪ್ಪು ಮಾಹಿತಿ ನೀಡಿ, ಇಷ್ಟು ದಿನದ ಹೋರಾಟವನ್ನು ಮಣ್ಣು ಪಾಲು ಮಾಡಲು ಹೊರಟಿದ್ದಾರೆ. ಇದಕ್ಕೆ ನಾವು ಎಂದಿಗೂ ಆಸ್ಪದ ನೀಡುವುದಿಲ್ಲ.ಇಲ್ಲಿ ಪಕ್ಷ ಮುಖ್ಯವಲ್ಲ,ಸಮುದಾಯ ಮುಖ್ಯ.ಹಾಗಾಗಿ ಯಾರ ವಿರುದ್ದ ಹೋರಾಟಕ್ಕೂ ನಾವು ಸಿದ್ದರಿದ್ದೇವೆ ಎಂಬುದನ್ನು ಸರಕಾರದ ಗಮನಕ್ಕೆ ತರಬಯಸುತ್ತೇನೆ ಎಂದರು.
ಜಿಪಂ ಮಾಜಿ ಸದಸ್ಯ ಕೆಂಚಮಾರಯ್ಯ ಮಾತನಾಡಿ, ಕರ್ನಾಟಕದಲ್ಲಿರುವ ಕಾಂಗ್ರೆಸ್​ ಸರಕಾರ ಮಾದಿಗ ಸಮುದಾಯಕ್ಕೆ ಅನ್ಯಾಯಮಾಡುತ್ತಿದೆ. ಸಿದ್ದರಾಮಯ್ಯ ಅವರ ಮೇಲಿನ ನಂಬಿಕೆಯನ್ನುಇಡೀ ಮಾದಿಗ ಸಮುದಾಯ ಕಳೆದುಕೊಂಡಿದೆ. ಒಂದು ಸಮುದಾಯದ ಮಂತ್ರಿಗಳ ಕೈಗೊಂಬೆಯಾಗಿ ನಮಗೆ ಅನ್ಯಾಯ ಮಾಡುತ್ತಿದೆ ಎಂದರು.
. ನ್ಯಾ.ಸದಾಶಿವ ಆಯೋಗದ ವರದಿಯನ್ನು ವಿರೋಧಿಸಿದ ಸಮುದಾಯವೇ,ನ್ಯಾ.ನಾಗಮೋಹನ್​ದಾಸ್​ ಸಮಿತಿಯ ಒಳಮೀಸಲಾತಿಯ ಸಂಪೂರ್ಣಜಾರಿಗೆ ಅಡ್ಡಿ ಪಡಿಸುತ್ತಿದೆ. ಹಾಗಾಗಿ, ಮಾದಿಗ ಸಮುದಾಯದ ಪ್ರತಿಯೊಬ್ಬರು ಈ ಹೋರಾಟದಲ್ಲಿ ಕೈಜೋಡಿಸಿ, ಹೋರಾಟಕ್ಕೆತಮ್ಮತನು, ಮನ, ಧನದ ಸಹಾಯದ ಮೂಲಕ ಹೋರಾಟವನ್ನುಉಗ್ರ ಸ್ಪರೂಪಕ್ಕೆತೆಗೆದುಕೊಂಡು ಹೋಗಲು ಸಹಕಾರ ನೀಡಬೇಕಾಗಿದೆ ಎಂದರು.
ಮಾಜಿ ಶಾಸಕ ಗಂಗಹನುಮಯ್ಯ, ಡಾ.ಅರುಂಧತಿ, ದೊಡ್ಡೇರಿ ಕಣಿಮಯ್ಯ, ಪಾವಗಡ ಶ್ರೀರಾಮ ಸೇರಿದಂತೆ ಹಲವರು ಮಾತನಾಡಿದರು. ಪ್ರತಿಭಟನೆಯಲ್ಲಿ ಹನುಮಂತರಾಯಪ್ಪ, ಡಾ.ಕೊಟ್ಟಶಂಕರ್​, ರಂಗಸ್ವಾಮಯ್ಯ ಸಿದ್ದಾಪುರ, ನರಸೀಯಪ್ಪ, ಕೊಡಿಯಾಲ ಮಹದೇವ್​,ಉದ್ಯಮಿ ಡಿ.ಟಿ.ವೆಂಕಟೇಶ್​,ಹೊಳಕಲ್ಲು ಅಂಜನಪ್ಪ,ಸಿ.ಗಂಗರಾಜು,ಡಾ.ಲಕ್ಷ್ಮಿಕಾಂತ್​ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net