ಪ್ರಸ್ತಾವಿತ ಕ್ರೀಡಾ ವಿಶ್ವವಿದ್ಯಾಲಯ ಯೋಜನೆಗೆ ಎಳ್ಳುನೀರು!

ತುಮಕೂರಿನಲ್ಲಿ ನಿರ್ಮಿಸಿರುವ ಸುಸಜ್ಜಿತ ಕ್ರೀಡಾಂಗಣ
ತುಮಕೂರಿನಲ್ಲಿ ನಿರ್ಮಿಸಿರುವ ಸುಸಜ್ಜಿತ ಕ್ರೀಡಾಂಗಣ
Published on

ಪ್ರಮುಖ ಮುಖ್ಯಾಂಶಗಳು

  • 2018ರ ಬಜೆಟ್​ನಲ್ಲಿ ಘೋಷಣೆಯಾಗಿದ್ದ ವಿವಿ
  • ಆಸಕ್ತಿ ತೋರದ ಖಾಸಗಿ ಖಾಸಗಿ ಶಿಕ್ಷಣ ಸಂಸ್ಥೆಗಳು
  • ರಾಜ್ಯದಲ್ಲಿ ಸಾಧ್ಯವಾಗದ ಕ್ರೀಡಾಪ್ರೋತ್ಸಾಹ

ತುಮಕೂರು: ಕಾಂಗ್ರೆಸ್​, ಜೆಡಿಎಸ್​ ಸಮ್ಮಿಶ್ರ ಸರ್ಕಾರದಲ್ಲಿ 2018ರ ಬಜೆಟ್​ನಲ್ಲಿ ತುಮಕೂರು ಜಿಲ್ಲೆಗೆ ಘೋಷಣೆಯಾಗಿದ್ದ, ಡಿಸಿಎಂ ಡಾ.ಜಿ.ಪರಮೇಶ್ವರ ಅವರ ಕನಸಿನ "ಕ್ರೀಡಾ ವಿಶ್ವವಿದ್ಯಾಲಯ' ಸ್ಥಾಪನೆಯ ಕನಸಿಗೆ ಸರ್ಕಾರ ಅಧಿಕೃತವಾಗಿಯೇ ಎಳ್ಳುನಿರು ಬಿಟ್ಟಿದೆ.

ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯ, ಸ್ಪೋರ್ಟ್ಸ್​ ಮತ್ತು ಫಿಟ್ನೆನೆಸ್​ ಉಪಕರಣ ಉತ್ಪಾದಕ ಟಕ ಸ್ಥಾಪನೆಗೆ 2 ಸಾವಿರ ಕೋಟಿ ಬಂಪರ್​ ನೀಡುವುದಾಗಿ ಬಜೆಟ್​ನಲ್ಲಿ ಘೋಷಣೆ 8 ವರ್ಷಗಳೇ ಕಳೆದರೂ ನಯಾಪೈಸೆ ಅನುದಾನ ಬಂದಿಲ್ಲ. 2022ರ ವೇಳೆಗೆ 23 ಕ್ರೀಡೆಗಳಿಗೆ ಬೇಕಾದ ವಸ್ತುಗಳನ್ನು ವಿವಿಧ ರೀತಿಯಲ್ಲಿ ಉತ್ಪಾದಿಸುವ ಈ ಟಕಕ್ಕೆ ಆರಂಭಿಸಿ 1 ಲಕ್ಷ ಉದ್ಯೋಗ ಸೃಷ್ಟಿ ಮಾಡಲು ನೀಡಿದ್ದ ಭರವಸೆ ಹುಸಿಯಾಗಿದೆ.
2018ರ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಡಾ.ಜಿ.ಪರಮೇಶ್ವ ಇಂದೂ ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಜತೆಗೆ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಹೊಣೆಯನ್ನು ಹೊತ್ತಿದ್ದಾರೆ. ಆದರೆ, ತುಮಕೂರು ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ವಿಧಾನ ಪರಿಷತ್​ನಲ್ಲಿ ಅಧಿಕೃತವಾಗಿ ಹೇಳಿಕೆ ನೀಡುವ ಮೂಲಕ ಜಿಲ್ಲೆಯ ಕ್ರೀಡಾ ಪ್ರೇಮಿಗಳ ಬಹುದಿನ ಕನಸಿಗೆ ಕೊಳ್ಳಿ ಇಟ್ಟಿದ್ದಾರೆ.
55ಕೋಟಿ ರೂ. ವೆಚ್ಚದಲ್ಲಿ ಮಹತ್ಮಾಗಾಂಧಿ ಕ್ರೀಡಾಂಗಣವನ್ನು ಸುಸಜ್ಜಿತವಾಗಿ ನಿರ್ಮಿಸಿದ್ದು ಕ್ರೀಡಾಪಟುಗಳಿಗೆ ಯಾವುದೇ ಉತ್ತೇಜನವಿಲ್ಲದೆ ಧೂಳು ತಿನ್ನುತ್ತಿದೆ, ಜಿಲ್ಲಾಡಳಿತದ ವತಿಯಿಂದ ಜರುಗುವ ರಾಷ್ಟ್ರೀಯ ದಿನಾಚರಣೆಗೆ ಕ್ರೀಡಾಂಗಣ ಸೀಮಿತವಾಗಿದ್ದು ಕ್ರೀಡಾ ಇಲಾಖೆಯ ಹೊಣೆ ಡಾ.ಜಿ.ಪರಮೇಶ್ವರ ಅವರಲ್ಲಿಯೇ ಇರುವುದರಿಂದ ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ಕ್ರೀಡಾ ವಿಶ್ವವಿದ್ಯಾಲಯ ಆರಂಭವಾಗಬಹುದು ಎಂಬ ಕ್ರೀಡಾಸಕ್ತಿ ಕೊನೆಯ ಆಸೆಯೂ ನಿರಾಸೆ ತಂದಿದೆ.
ರಾಜ್ಯದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ "ಗುರಿ: ಒಲಂಪಿಕ್ಸ್​ ಪದಕ' ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ 60 ಕ್ರೀಡಾಪಟುಗಳನ್ನು ಗುರುತಿಸಿ ಮುಂದಿನ ಒಲಂಪಿಕ್ಸ್​ ತಯಾರಿಗೆ ವಾರ್ಷಿಕ ತಲಾ 10 ಲಕ್ಷ ರೂ. ಸಹಾಯಧನ ಸರ್ಕಾರದ ವತಿಯಿಂದಲೇ ನೀಡಲಾಗುತ್ತಿದೆ. ಆದರೆ, ಕ್ರೀಡಾಪಟುಗಳ ಸೂಕ್ತ ತರಬೇತಿ, ಪೌಷ್ಠಿಕ ಆಹಾರ ಹಾಗೂ ಕ್ರೀಡಾ ವಿಜ್ಞಾನ ಸೇವೆಗೆ ಸಂಶೋಧನಾ ಮಾರ್ಗದರ್ಶನ ನೀಡಲು ಸೂಕ್ತ ವಿಶ್ವವಿದ್ಯಾಲಯ ಸ್ಥಾಪಿಸುವ ಅಗತ್ಯವಿದೆ.
2024ರ ಒಲಂಪಿಕ್ಸ್​ ಕ್ರೀಡಾಕೂಟದಲ್ಲಿ ರಾಜ್ಯದ 9 ಕ್ರೀಡಾಪಟುಗಳು ಮಾತ್ರ ಅರ್ಹತೆ ಪಡೆದಿದ್ದರು, ಪ್ಯಾರಾ ಒಲಂಪಿಕ್ಸ್​ನಲ್ಲಿಯೂ ಮೂವರು ಮಾತ್ರ ದೇಶದವನ್ನು ಪ್ರತಿನಿಧಿಸಲು ಅವಕಾಶ ಪಡೆದಿದ್ದು ಭವಿಷ್ಯದಲ್ಲಿ ನಡೆಯುವ ಒಲಂಪಿಕ್ಸ್​, ಏಷ್ಯನ್​, ಕಾಮನ್​ವೆಲ್ತ್​, ಕಬ್ಬಡಿ, ಕ್ರಿಕೆಟ್​ ವಿಶ್ವಕಪ್​ಗಳಿಗೆ ಕ್ರೀಡಾಪಟುಗಳನ್ನು ಸೃಜಿಸಲು ವಿಶ್ವವಿದ್ಯಾಲಯ ನೆರವಾಗಬಹುದಾಗಿದೆ.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ವಿಶ್ವವಿದ್ಯಾಲಯ ಸ್ಥಾಪನೆಯ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಆದರೆ, ಕ್ರೀಡೆ ಮತ್ತು ಅಂಗಸಾಧನೆಗೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಖಾಸಗಿ ವಿವಿ ಸ್ಥಾಪಿಸುವ ಬಗ್ಗೆ ಉನ್ನತ ಶಿಕ್ಷಣ ಇಲಾಖೆ 2018&19ರಲ್ಲಿ ಎಕ್ಸ್​ಪ್ರೆಷನ್​ ಆ್​ ಇಂಟರೆಸ್ಟ್​ ಅರ್ಜಿಗಳನ್ನು ಆಹ್ವಾನಿಸಿದೆಯಾದರೂ ಈವರೆಗೂ ಯಾವುದೇ ಅರ್ಜಿ ಬಂದಿಲ್ಲ.
ಡಾ.ಜಿ.ಪರಮೇಶ್ವರ
ಡಿಸಿಎಂ, ಯುವಜನ ಮತ್ತು ಕ್ರೀಡಾ ಇಲಾಖೆ
2024ರ ಪ್ಯಾರಾ ಒಲಂಪಿಕ್ಸ್​ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳು
ಹೆಸರು ಭಾಗವಹಿಸಿದ ಕ್ರೀಡೆ
ರಕ್ಷಿತಾ ರಾಜು ಪ್ಯಾರಾ ಅಥ್ಲೆಟಿಕ್​
ಸಕೀನಾಖಾತುನ್​ ಪ್ಯಾರಾ ಪವರ್​ ಲಿಫ್ಟಿಂಗ್​
ಶ್ರೀಹರ್ಷ ದೇವರಡ್ಡಿ ಪ್ಯಾರಾ ಶ್ಯೂಟಿಂಗ್​
2024ರ ಒಲಂಪಿಕ್ಸ್​ನಲ್ಲಿ ಭಾಗವಹಿಸಿದ ರಾಜ್ಯದ ಕ್ರೀಡಾಪಟುಗಳು
ಹೆಸರು ಕ್ರೀಡೆ
ರೋಹನ್​ ಬೋಪಣ್ಣ ಟೆನ್ನಿಸ್​
ಅಶ್ವಿನಿ ಪೊನ್ನಪ್ಪ ಬ್ಯಾಡ್ಮಿಂಟನ್​
ಎಂ.ಆರ್​.ಪೂವಮ್ಮ ರಿಲೇ
ಅದಿತಿ ಅಶೋಕ್​ ಗಾಲ್ಪ್​
ಶ್ರೀಹರಿ ನಟರಾಜ್​ ಈಜು
ಮಿಜೋ ಚಾಕೋ ಕುರಿಯನ್​ ರಿಲೇ
ನಿಶಾಂತ್​ ದೇವ್​ ಬಾಕ್ಸಿಂಗ್​
ಅರ್ಚನಾ ಜಿ ಕಾಮತ್​ ಟೆಬಲ್​ಟೆನ್ನಿಸ್​
ಧಿನಿಧಿ ದೇಸಿಂಗೂ ಈಜು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net