ತುಮಕೂರು ವಿವಿಗೆ ಪ್ರೊ.ನಾಗಭೂಷಣ ಪ್ರಭಾರ ಕುಲಪತಿ!

ಪ್ರೊ.ಎಚ್​.ನಾಗಭೂಷಣ್​
ಪ್ರೊ.ಎಚ್​.ನಾಗಭೂಷಣ್​
Published on

ಪ್ರಮುಖ ಮುಖ್ಯಾಂಶಗಳು

  • 20ಕ್ಕೆ ಪ್ರೊ.ವೆಂಕಟೇಶ್ವಲು ಅಧಿಕಾರ ಅಂತ್ಯ
  • ಇನ್ನೂ ರಚನೆಯಾಗದ ಶೋಧನಾ ಸಮಿತಿ
  • ನೂತನ ವಿಸಿ ನೇಮಕ ವಿಳಂಬ ಸಾಧ್ಯತೆ
ತುಮಕೂರು: ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು 4 ವರ್ಷದ ಅಧಿಕಾರವಧಿ ಜು.20ರಂದು ಸೋಮವಾರ ಮಧ್ಯಾಹ್ನ ಅಂತ್ಯವಾಗಿದ್ದು ನೂತನ ವಿಸಿ ನೇಮಕವಾಗದ ಹಿನ್ನೆಲೆಯಲ್ಲಿ ಪ್ರಭಾರ ಕುಲಪತಿಯಾಗಿ ವಿಜ್ಞಾನ ವಿಭಾಗದ ಸೀನಿಯರ್​ ಡೀನ್​ ಪ್ರೊ.ಎಚ್​.ನಾಗಭೂಷಣ್​ ನೇಮಕವಾಗಿದ್ದಾರೆ.
ನೂತನ ಕುಲಪತಿ ಆಯ್ಕೆಗೆ ರಚನೆಯಾಗಬೇಕಿರುವ ಶೋಧನಾ ಸಮಿತಿ ಇನ್ನೂ ಸೃಜನೆಯಾಗದಿರುವುದು ಖಾಯಂ ಉಪಕುಲಪತಿ ಆಯ್ಕೆಯನ್ನು ತಡವಾಗಿಸಲಿದೆ, ಸಮಿ ರಚನೆಯಾಗಿ ಅರ್ಜಿ ಸಲ್ಲಿಕೆಗೂ ಕಾಲಾವಕಾಶ ನೀಡಿ, ಶೋಧನಾ ಸಮಿತಿ ಸಭೆ ನಡೆದು ಮುಚ್ಚಿದ ಲಕೋಟೆಯಲ್ಲಿ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರಿಗೆ ಮೂವರು ಅರ್ಹರ ಪಟ್ಟಿ ಶಿಾರಸು ಮಾಡಬೇಕಾದ ಪ್ರಕ್ರಿಯೆಯಿದ್ದು ನೂತನ ಕುಲಪತಿ ಆಯ್ಕೆ ಮತ್ತಷ್ಟು ವಿಳಂಬವಾಗುವ ಆತಂಕ ಎದುರಾಗಿದೆ.
ಕಳೆದ ನಾಲ್ಕು ವರ್ಷದಿಂದ ತುಮಕೂರು ವಿವಿ ಕುಲಪತಿಯಾಗಿ ನೇಮಕವಾಗಿದ್ದ ಪ್ರೊ.ಎಂ.ವೆಂಕಟೇಶ್ವರಲು ನೂತನ ಕ್ಯಾಂಪಸ್​ "ಜ್ಞಾನಸಿರಿ' ನಿರ್ಮಿಸುವಲ್ಲಿ ಅತ್ಯಂತ ಹೆಚ್ಚು ಆಸಕ್ತಿ ವಹಿಸಿದ್ದರು. ವಿವಿ ಶೈಕ್ಷಣಿಕ ವಲಯದಲ್ಲಿ ಪರಿಣಾಮಕಾರಿ ಬದಲಾವಣೆಯಾಗದಿದ್ದರೂ ಮಕ್ಕಳಿಗೆ ಬಿಸಿಯೂಟ ಸೇರಿದಂತೆ ಸಿವಿಲ್​ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡಿರುವುದು ಇತಿಹಾಸದಲ್ಲಿ ದಾಖಲಾಗಿದೆ.
ಪ್ರೊ.ಎಚ್​.ನಾಗಭೂಷಣ ಪ್ರಭಾರ ಕುಲಪತಿ!
ತುಮಕೂರು ವಿವಿಗೆ ನೂತನ ಕುಲಪತಿ ನೇಮಕವಾಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ವಿವಿಯ ವಿಜ್ಞಾನ ವಿಭಾಗದ ಹಿರಿಯ ಡೀನ್​ ಪ್ರೊ.ಎಚ್​.ನಾಗಭೂಷಣ ಅವರನ್ನು ಪ್ರಭಾರ ಕುಲಪತಿಯನ್ನಾಗಿ ರಾಜ್ಯಪಾಲ ಥಾವರ್​ ಚಂದ್​ ಗೆಹಲೂತ್​ ನೇಮಿಸಿದ್ದು ಸೋಮವಾರ ಮಧ್ಯಾಹ್ನ ಅಧಿಕಾರ ಸ್ವೀಕರಿಸುವಂತೆ ಸೂಚನೆ ನೀಡಿದ್ದಾರೆ.
ಸೇವಾ ಹಿರಿತನದ ಹಿನ್ನೆಲೆಯಲ್ಲಿ 2027 ಏ.7ರ ವರೆಗೂ ಮಾತ್ರ ನಾಗಭೂಷಣ ಅವರು ಅಧಿಕಾರದಲ್ಲಿರಲು ಅವಕಾಶವಿದ್ದು ಅಲ್ಲಿಯವರೆಗೂ ಖಾಯಂ ವಿಸಿ ನೇಮಕವಾಗದಿದ್ದರೆ ಹಿರಿತನದ ಆಧಾರದ ಮೇಲೆ ಬೇರೊಬ್ಬರು ಅಧಿಕಾರ ವಹಿಸಿಕೊಳ್ಳಬೇಕಾಗಲಿದೆ. ಕುಲಪತಿ ನಿವೃತ್ತರಾಗುವ ಮೊದಲೇ ದಾವಣಗೆರೆ, ಬೆಂಗಳೂರು ವಿವಿಗೆ ಕುಲಪತಿ ನೇಮಕ ಮಾಡಲಾಗಿದ್ದು ತುಮಕೂರು ವಿವಿಯಲ್ಲಿ ಪ್ರಕ್ರಿಯೆ ಆರಂಭವಾಗದಿರುವುದು ಅಚ್ಚರಿ ಮೂಡಿಸಿದೆ.
ಆರ್ಥಿಕವಾಗಿ ಸಂಕಷ್ಟದಲ್ಲಿರುವ ತುಮಕೂರು ವಿವಿಯಲ್ಲಿ ಖಾಯಂ ವಿವಿ ನೇಮಕವಾಗದೆ ಪ್ರಭಾರ ಕುಲಪತಿಗಳು ಆಡಳಿತ ನಡೆಸುವುದರಿಂದ ಸೂಕ್ತ ಸಂದರ್ಭದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುವ ಕಾರಣಕ್ಕೆ ವಿವಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗಲಿದೆ. ಹಾಗಾಗಿ, ನೂತನ ವಿಸಿ ನೇಮಕ ಶ್ರೀವಾಗಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net