ನಾಮಿನಿ ಸದಸ್ಯರ ವಿರುದ್ಧ ಹಕ್ಕುಚ್ಯುತಿ ಮಂಡನೆ

ಬಿ.ಸುರೇಶಗೌಡ
ಬಿ.ಸುರೇಶಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಬಗರ್​ ಹುಕುಂ ಸಾಗುವಳಿ ಸಕ್ರಮೀಕರಣ
  • ಸದನದಲ್ಲಿ ಬಿಜೆಪಿ ಶಾಸಕ ಸುರೇಶಗೌಡ ಪ್ರಸ್ತಾಪ
  • ಹಕ್ಕುಚ್ಯುತಿ ಸಮಿತಿಗೆ ಪ್ರಸ್ತಾವನೆ ವರ್ಗಾವಣೆ
ತುಮಕೂರು: ತಾಲೂಕಿನ ಬಗರ್​ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ನಾಮಕರಣ ಸದಸ್ಯರು ತಮ್ಮ ವಿರುದ್ಧ ಗುರುತರವಾದ ಮಿಥ್ಯಾರೋಪಗಳನ್ನು ಮಾಡಿದ್ದು ಇದರಿಂದ ಶಾಸಕರಾಗಿ ತಾವು ಕಾರ್ಯನಿರ್ವಹಿಸಲು ಅಡ್ಡಿಯಾಗುತ್ತಿದ್ದು ಆ ಸದಸ್ಯರ ವಿರುದ್ಧ ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ್​ಗೌಡ ಸೋಮವಾರ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಸೂಚನೆ ಮಂಡಿಸಿದ ಪ್ರಸಂಗ ನಡೆಯಿತು.
ವಿಧಾನಸಭೆಯ ಶೂನ್ಯವೇಳೆಯಲ್ಲಿ ಸೋಮವಾರ ತಾವು ಮಾ.12 ರಂದು ಬಗರ್​ ಹುಕುಂ ಸಕ್ರಮೀಕರಣ ಸಮಿತಿಯ ನಾಮಕರಣ ಸದಸ್ಯರು ಸಭೆಗೆ ಬಂದರೂ ತಂತ್ರಾಂಶ ಬಳಸಿ ಬೆರಳಚ್ಚು ಗುರುತು ಕೊಡಲು ನಿರಾಕರಿಸುತ್ತಿರುವ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ಕಂದಾಯಸಚಿವರು ಸೂಕ್ತ ಉತ್ತರ ನೀಡಿದ್ದಾರೆ. ಆದರೆ, ಆ ಪ್ರಸ್ತಾಪಕ್ಕೆ ಸದನದ ಹೊರಗಡೆ ನಾಮಿನಿ ಸದಸ್ಯರು ತಮ್ಮ ವಿರುದ್ಧ ಖಾಸಗಿ ವಾಹಿನಿಗಳ ಜತೆಗೆ ಮಾತನಾಡಿ ಶಾಸಕರೇ ಸಭೆಗೆ ಬರುತ್ತಿಲ್ಲವೆಂದು ಆಪಾದಿಸಿದ್ದಾರೆ ಎಂದು ಅವರು ತಿಳಿಸಿದರು.
ಈ ನಾಮಿನಿ ಸದಸ್ಯರ ಅಸಹಕಾರದಿಂದಾಗಿ ಬಡವರಿಗೆ ಹಕ್ಕು ಪತ್ರ ಕೊಡಲು ಸಮಸ್ಯೆಯಾಗುತ್ತದೆ ಎಂಬ ವಿಚಾರವನ್ನು ಮಾತ್ರ ತಾವು ಆ ದಿನ ಪ್ರಸ್ತಾಪ ಮಾಡಿದ್ದಾಗಿಯೂ ಆ ಸದಸ್ಯರ ವಿರುದ್ಧ ಯಾವುದೇ ಭ್ರಷ್ಟಾಚಾರದ ಅಥವಾ ಇನ್ನಾವುದೇ ಆರೋಪ ಮಾಡಿರಲಿಲ್ಲ ಸ್ಪಷ್ಟನೆ ನೀಡಿದರು.
ಸದನದಲ್ಲಿ ತಾವು ಪ್ರಸ್ತಾಪ ಮಾಡಿದ ವಿಷಯವನ್ನು ಮುಂದಿಟ್ಟುಕೊಂಡು ನಾಮಿನಿ ಸದಸ್ಯರಾದ ಕರೆರಂಗಯ್ಯ, ಶಿವರಾಜ್​ ಎಂಬುವರು ಲುವಾಗಿ ಮಾತನಾಡಿದ್ದಾರೆ. ಈ ವಿಚಾರವನ್ನು ತಾವು ಹಕ್ಕು ಚ್ಯುತಿ ಸಮಿತಿಗೆ ಸಲ್ಲಿಸುತ್ತಿದ್ದು ಅವರ ವಿರುದ್ಧ ಕಾನೂನು ಪ್ರಕಾರ ಗಂಭೀರ ಕ್ರಮಜರುಗಿಸಬೇಕು. ಸಿಒಡಿಯಿಂದಲು ಇವರ ವಿರುದ್ಧ ತನಿಖೆ ಮಾಡಿಸಬೇಕೆಂದು ಸುರೇಶ್​ಗೌಡರು ಒತ್ತಾಯಿಸಿದರು.
ಈ ರೀತಿ ಸುಳ್ಳು ಆರೋಪ ಮಾಡಿದರೆ ತಾವು ಶಾಸಕರಾಗಿ ಹೇಗೆ ಕೆಲಸ ಮಾಡಲು ಸಾಧ್ಯ ಎಂದು ಸಭಾಧ್ಯಕ್ಷರನ್ನು ಪ್ರಶ್ನಿಸಿದರು. ಸುರೇಶಗೌಡ ಪ್ರಸ್ತಾವನೆಯನ್ನು ಆಲಿಸಿದ ಸಭಾಧ್ಯಕ್ಷ ಯು.ಟಿ.ಖಾದರ್​ ಹಕ್ಕುಚ್ಯುತಿ ಸಮಿತಿಗೆ ಕಳಿಹಿಸುವುದಾಗಿ ಪ್ರಕಟಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net