ನಮ್ಮ ಪೂರ್ವಿಕರು ಪ್ರತಿ ಹಳ್ಳಿಗಳಲ್ಲೂ ವರ್ಷಕೊಮ್ಮೆ ದೇವರ ಜಾತ್ರೆಯನ್ನು ನಡೆಸಿಕೊಂಡು ಬಂರುವ ಸಂಪ್ರದಾಯ ಹೊಂದಿದ್ದು, ಇದೇ ಸಂಸ್ಕೃತಿ ಇಂದಿಗೂ ಜೀವಂತವಾಗಿ ಹೆಚ್ಚಿನ ಶ್ರದ್ಧಾ ಭಕ್ತಿ, ವಿಜೃಂಬಣೆಯಿಂದ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ನಮ್ಮ ಧಾರ್ಮಿಕ ಹಬ್ಬ ಹರಿದಿನ ಜಾತ್ರೆಗಳು ಹಳ್ಳಿ ಜನರಲ್ಲಿ ಪರಸ್ಪರ ಅನ್ಯೋನ್ಯತೆ, ಒಳ್ಳೆಯ ಭಾಂಧವ್ಯವನ್ನು ಗಟ್ಟಿಗೊಳಿಸುವ ಸಂಕೇತಗಳಾಗಿವೆ. ಇಂದು ಜನರಲ್ಲಿ ನೈತಿಕತೆ ಕುಸಿಯುತ್ತಿದೆ. ತಂದೆ-ತಾಯಿ, ಗುರು-ಹಿರಿಯರು ಹಾಕಿಕೊಟ್ಟ ವಾರ್ಗದಲ್ಲಿ ನಡೆದಾಗ ವಾತ್ರ ಎಲ್ಲರ ಬದುಕು ಸಾರ್ಥಕವಾಗುತ್ತದೆ ಎಂದರು.