ಅಂತರ ರಾಜ್ಯ ಖದೀಮನ ಬಂಧನ, ಗಾಂಜಾ ಮಾರುತ್ತಿದ್ದವರಿಗೂ ಪೊಲೀಸರ ಬಲೆ

ಅಂತರಾಜ್ಯ ಖದೀಮರ ಬಂಧಿಸಿದ ತುಮಕೂರು ನಗರ ಠಾಣೆ ಪೊಲೀಸರು
ಅಂತರಾಜ್ಯ ಖದೀಮರ ಬಂಧಿಸಿದ ತುಮಕೂರು ನಗರ ಠಾಣೆ ಪೊಲೀಸರು
Published on

ಪ್ರಮುಖ ಮುಖ್ಯಾಂಶಗಳು

  • ಮನೆಗೆ ನುಗ್ಗಿ ಚಿನ್ನದ ಸರ ಕಳವು ಮಾಡಿದ್ದ ಖದೀಮರು
  • ತುಮಕೂರು ನಗರ ಪೊಲೀಸರ ಕಾರ್ಯಾಚರಣೆ
  • ಗಾಂಜಾ ಮಾರುತ್ತಿದ್ದ ಆರೋಪಿಗಳು ಅಂದರ್​
ತುಮಕೂರು: ಜಿಲ್ಲಾ ಪೊಲೀಸ್​ ಅಧೀಕ್ಷಕ ಕೆ.ವಿ.ಅಶೋಕ್​ ಬುಧವಾರ ನಗರದ ಜಿಲ್ಲಾ ಪೊಲೀಸ್​ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹೆಚ್ಚಿರುವುದನ್ನು ತಿಳಿಸಿದರು.
ತುಮಕೂರಿನ ಆದರ್ಶ ನಗರದ ಮೋಹನ್​ಕುಮಾರ್​ ಎಂಬುವವರ ಮನೆಯಲ್ಲಿ ಕಳೆದ ಏಪ್ರಿಲ್​ 27ರಂದು ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಅಂತರಾಜ್ಯ ಖದೀಮನನ್ನು ನಗರಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅರೋಪಿಯನ್ನು ತಮಿಳುನಾಡು ರಾಜ್ಯದಲ್ಲಿ ದಸ್ತಗಿರಿ ಮಾಡಿ ಆರೋಪಿ ಕಡೆಯಿಂದ ಕಳವು ಮಾಡಿದ್ದ 40 ಗ್ರಾಂ ಚಿನ್ನದ ಸರ
ವಶಪಡಿಸಿಕೊಂಡಿದ್ದಾರೆ.
ನಗರದ ಕೋತಿತೋಪು ಸರ್ಕಲ್​ ಬಳಿ ಇರುವ ಚೈತನ್ಯ ಟೆಕ್ನೋ ಶಾಲೆ ಹಿಂಭಾಗದ ಅಮಾನಿಕೆರೆ ಮಣ್ಣಿನ ರಸ್ತೆಯಲ್ಲಿ ಆರೋಪಿಗಳಾದ ಆರ್​.ಆದಿತ್ಯ(23) ಹಾಗೂ ಮತ್ತು ಜಿ.ಪ್ರತಾಪ(33) ಗಾಂಜಾ ಮಾರಾಟ ಮಾಡುವಾದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಗಳಿಂದ 4.20 ಲಕ್ಷ ರೂ. ಮೌಲ್ಯದ 8.385ಕೆಜಿ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net