ನೈತಿಕ ಪೊಲೀಸ್​ಗಿರಿ ಸಹಿಸೋಲ್ಲ

ತುಮಕೂರಿನಲ್ಲಿ ಬಕ್ರೀದ್​ ಹಬ್ಬದ ಹಿನ್ನೆಲೆ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಮಾತನಾಡಿದರು. ಕೆ.ವಿ.ಅಶೋಕ್​, ಬಿ.ಶೇಖರ್​, ಚಂದ್ರಶೇಖರ್​, ಡಾ.ರುದ್ರಪ್ರಸಾದ್​ ಮತ್ತಿತರರು ಇದ್ದರು.
ತುಮಕೂರಿನಲ್ಲಿ ಬಕ್ರೀದ್​ ಹಬ್ಬದ ಹಿನ್ನೆಲೆ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಮಾತನಾಡಿದರು. ಕೆ.ವಿ.ಅಶೋಕ್​, ಬಿ.ಶೇಖರ್​, ಚಂದ್ರಶೇಖರ್​, ಡಾ.ರುದ್ರಪ್ರಸಾದ್​ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಕ್ರೀದ್​ ಹಬ್ಬದ ಹಿನ್ನೆಲೆ ಶಾಂತಿ ಸಭೆ
  • ಜಿಲ್ಲಾಧಿಕಾರಿ, ಎಸ್ಪಿ ನೇತೃತ್ವ
  • ಎಚ್ಚರಿಕೆ ಕೊಟ್ಟ ಶುಭಕಲ್ಯಾಣ್​
ತುಮಕೂರು: ಬಕ್ರೀದ್​ ಹಬ್ಬದ ಸಮಯದಲ್ಲಿ ಸಂಭ್ರಮವಷ್ಟೇ ಇರಲಿ. ಯಾವುದೇ ಅಹಿತಕರ ಟನೆಗಳಿಗೆ ಆಸ್ಪದವಿಲ್ಲ. ಗೋ ರಕ್ಷಣೆ ಹೆಸರಲ್ಲಿ ನೈತಿಕ ಪೊಲೀಸ್​ಗಿರಿ ನಡೆಸಲು ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಎಚ್ಚರಿಕೆ ನೀಡಿದರು.
ನಗರದ ಕುಂಚಿಟಿಗರ ಸಮುದಾಯ ಭವನದಲ್ಲಿ ಸೋಮವಾರ ಜಿಲ್ಲಾಡಳಿತದ ವತಿಯಿಂದ ಬಕ್ರೀದ್​ ಹಬ್ಬದ ಹಿನ್ನೆಲೆ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್​ಗಳನ್ನು ಹಾಕುವುದು ಸರಿಯಲ್ಲ. ಮಕ್ಕಳ ಮೇಲೆ ಪೋಷಕರು ಸಹ ನಿಗಾವಹಿಸಬೇಕು. ಎಲ್ಲರೂ ಸೌಹಾರ್ದತೆಯಿಂದ ಹಬ್ಬ ಆಚರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿರುವಂತೆ ಮನವಿ ಮಾಡಿದರು.
ಬಕ್ರೀದ್​ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಎನಾದರು ಸುದ್ದಿಗಳು ಕಂಡುಬಂದರೆ ತಕ್ಷಣ112ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಗೋಹತ್ಯೆ, ಗೋ ಸಾಗಾಟದ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ಹತ್ತರದ ಠಾಣೆಗಳಿಗೆ ಇಲ್ಲವೇ ಗಸ್ತು ಪೊಲೀಸರಿಗೆ ಮಾಹಿತಿ ನೀಡಿ. ಅದು ಬಿಟ್ಟು ಹಬ್ಬದ ವೇಳೆ ಯಾರು ಕೂಡ ನೈತಿಕ ಪೊಲೀಸ್​ ಗಿರಿ ಮಾಡುವುದು, ಸೋಶಿಯಲ್​ ಮೀಡಿಯಾದಲ್ಲಿ ಪ್ರಚೋದನಕಾರಿ ಪೋಸ್ಟ್​ಗಳು, ಫ್ಲೆಕ್ಸ್​ ಗಳು, ಬ್ಯಾನರ್​ಗಳನ್ನು ಯುವಜನತೆ ಹಾಕುವುದು ಬೇಡ. ಸಮಾಜದ ಸ್ವಾಸ್ಥ್ಯ ಹಾಳುಗೆಡವುವ ಕೆಲಸ ಮಾಡಬೇಡಿ. ಹಬ್ಬದ ಸಂಭ್ರಮದಲ್ಲಿ ಕುಟುಂಬ ಸಮೇತ ಡ್ಯಾಂ, ಕೆರೆಕಟ್ಟೆ, ಕೆನಾಲ್​ಗಳ ಬಳಿ ತೆರಳುವರು ಜಾಗರುಕರಾಗಿರುವಂತೆ ಜಿಲ್ಲಾ ಪೊಲೀಸ್​ ಅಧೀಕ್ಷಕ ಕೆ.ವಿ.ಅಶೋಕ್​ ತಿಳಿಸಿದರು.
ಈ ಸಂದರ್ಭದಲ್ಲಿ ಎಎಸ್ಪಿ ಎಂ.ಎಲ್​.ಪುರುಷೋತ್ತಮ್​, ಪಶುಪಾಲನಾ ಮತ್ತು ಪಶು ವೈದ್ಯಕಿಯ ಇಲಾಖೆಯ ಡಾ.ರುದ್ರಪ್ರಸಾದ್​, ಪಾಲಿಕೆಯಅಧಿಕಾರಿಗಳು ಮತ್ತಿತರರು ಉಪಸ್ಥಿತಿತರಿದ್ದರು.
ಬಕ್ರೀದ್​ ಹಬ್ಬ ತ್ಯಾಗದ ಸಂಕೇತ. ತ್ಯಾಗದಿಂದ ಹುಟ್ಟುವುದು ವಿಶ್ವಾಸ. ವಿಶ್ವಾಸದಿಂದ ಬೆಳೆಯುವುದು ಪ್ರೀತಿ. ಪ್ರೀತಿಯಿಂದ ಅರಳುವುದು ಶಾಂತಿ. ಈ ಹಬ್ಬವನ್ನು ಎಲ್ಲರೂ ಶಾಂತಿಯಿಂದ ಆಚರಣೆ ಮಾಡಬೇಕು.
ಶುಭಕಲ್ಯಾಣ್​
ಜಿಲ್ಲಾಧಿಕಾರಿ
ರಸ್ತೆಯಲ್ಲಿ ಪ್ರಾರ್ಥನೆಗೆ ತಕರಾರು
ಮುಸಲ್ಮಾನರು ಹಬ್ಬಗಳ ಸಂಸದರ್ಭದಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಪ್ರಾರ್ಥನೆ ಮಾಡಲು ಪ್ರಾರಂಭಿಸಿದ್ದು ಪೊಲೀಸ್​ ಇಲಾಖೆಯೇ ಅನುವು ಮಾಡಿಕೊಡುತ್ತಿದೆ. ಈದ್ಗ ಮೈದಾನ, ವಕ್ಫ ಮಂಡಳಿ ಸೇರಿದ ಹತ್ತಾರು ಎಕರೆ ಖಾಲಿ ಜಾಗಗಳಿದ್ದರು ರಸ್ತೆಯಲ್ಲೇ ಕಾನೂನುಬಾಹಿರವಾಗಿ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಪ್ರಾರ್ಥನೆಗೆ ಮೀಸಲಿಟ್ಟ ಜಾಗದಲ್ಲಿ ಅವಕಾಶ ಮಾಡಿಕೊಟ್ಟು ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿ ಇಲಾಖೆ ಗೌರವವನ್ನು ಎತ್ತಿಹಿಡಿಯುವಂತೆ ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ ಅಧ್ಯಕ್ಷ ಜಿ.ಎಸ್​.ಬಸವರಾಜು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net