ಪಾವಗಡ ಮಟ್ಕಾ ಕಿಂಗ್ ಪಿನ್ ಅಶ್ವಥಪ್ಪ ಬಂಧನ

ಪಾವಗಡದ ಬೀದಿಯಲ್ಲಿ ಮಟ್ಕಾ ಕಿಂಗ್ ಪಿನ್​ ಅಶ್ವಥನನ್ನು ಕರೆದೊಯ್ದ ಪೊಲೀಸರು
ಪಾವಗಡದ ಬೀದಿಯಲ್ಲಿ ಮಟ್ಕಾ ಕಿಂಗ್ ಪಿನ್​ ಅಶ್ವಥನನ್ನು ಕರೆದೊಯ್ದ ಪೊಲೀಸರು
Published on

ಪ್ರಮುಖ ಮುಖ್ಯಾಂಶಗಳು

  • ಬೀಟರ್​ಗಳ ಮೇಲೆ ಪೊಲೀಸರ ಸರಣಿ ದಾಳಿಯದಲ್ಲಿ
  • ಪಟ್ಟಣದಲ್ಲಿ ವ್ಯಾಪರವಾಗಿ ಹಬ್ಬಿರುವ ಮಟ್ಕಾ ದಂಧೆ
  • ದಂಧೆಯ ಕಿಂಗ್​ ಪಿನ್​ ಅಶ್ವಥಪ್ಪ, ಶಿಲ್ಪ ಬಂಧನ
ಪಾವಗಡ: ತಾಲ್ಲೂಕಿನಾದ್ಯಂತ ಇತ್ತೀಚೆಗೆ ಪೊಲೀಸ್ ಇಲಾಖೆ ನಡೆದ ಸರಣಿ ದಾಳಿಗಳಲ್ಲಿ ಸಿಕ್ಕಿಬಿದ್ದಿದ್ದ ಬೀಟರ್‌ಗಳು‌ ನೀಡಿದ್ದ ಖಚಿತ ಮಾಹಿತಿ ಮೇರೆಗೆ ಮಟ್ಕಾ ಬುಕ್ಕಿ ಅಶ್ವಥ್‌ ಮತ್ತು ಆತನ ಸೊಸೆ ಶಿಲ್ಪಾ ಳನ್ನು ಪೊಲೀಸರು ಬಂಧಿಸಿದ್ದಾರೆ.
ಮಟ್ಕಾ ದಂಧೆಯ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿದ್ದು ಮಟ್ಕಾ ಜಾಲದ ಮೂಲಕ ಜನಸಾಮಾನ್ಯರ ನೆಮ್ಮದಿ ಕೆಡಿಸಿದ್ದ ಮಟ್ಕಾ ಕಿಂಗ್ ಪಿನ್ ನನ್ನು ಮತ್ತೊಮ್ಮೆ ಬಂಧಿಸಿ ಬೀದಿಯಲ್ಲಿ ಕರೆದೊಯ್ದಿರುವುದು ದಂಧೆಕೋರರಿಗೆ ಎಚ್ಚರಿಕೆ ಎನ್ನಿಸಿದೆ.
ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಸರಣಿ ದಾಳಿಗಳಲ್ಲಿ ಸಿಕ್ಕಿಬಿದ್ದಿದ್ದ 'ಬೀಟರ್‌ ಗಳು ನೀಡಿದ ಖಚಿತ ಮಾಹಿತಿಯ ಮೇರೆಗೆ ಅಶ್ವಥ್‌ನನ್ನು ಆತನ ಮನೆಯಿಂದಲೇ ಬಂಧಿಸಲಾಗಿದ್ದು ಪೊಲೀಸ್ ಠಾಣೆಯವರೆಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆಸಿಕೊಂಡು ಕರದೊಯ್ಯುವ ಮೂಲಕ ಸಂಚಲ ಮೂಡಿಸಿದ್ದಾರೆ.
ಬಂಧಿತ ಅಶ್ವಥ್ ನಿಂದ ನಗದು, ಮೊಬೈಲ್ ಫೋನ್‌ಗಳು ಮತ್ತು ಮಟ್ಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಅಶ್ವಥನ ವಿರುದ್ದ ಪಾವಗಡ ಪೊಲೀಸ್ ಠಾಣೆಯಲ್ಲಿ ಈಗಾಗಲೇ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ವಿಚಾರಣೆ ಹಂತದಲ್ಲಿದೆ. ಹಿಂದೆಯೂ ಪೊಲೀಸರು ಸಾಕಷ್ಟು ಸಲ ಬಂಧಿಸಿ ಎಷ್ಟೇ ಎಚ್ಚರಿಕೆ ನೀಡಿದ್ದರೂ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net