ವಿದೇಶದಿಂದ ವಾಪಸಾದ ಪರಮ್​ ಜಿಲ್ಲಾ ಬರ ಅಧ್ಯಯನ ಪ್ರವಾಸ

ತುಮಕೂರು ಜಿಲ್ಲೆಯಲ್ಲಿ ಬರ ವೀಕ್ಷಿಸಿದ ಕಂದಾಯ ಸಚಿವ ಡಾ.ಜಿ.ಪರಮೇಶ್ವರ
ತುಮಕೂರು ಜಿಲ್ಲೆಯಲ್ಲಿ ಬರ ವೀಕ್ಷಿಸಿದ ಕಂದಾಯ ಸಚಿವ ಡಾ.ಜಿ.ಪರಮೇಶ್ವರ
Published on

ಪ್ರಮುಖ ಮುಖ್ಯಾಂಶಗಳು

  • ಇಂದು, ನಾಳೆ ಮಿಂಚಿನ ಸಂಚಾರಕ್ಕೆ ರೂಟ್​ಮ್ಯಾಪ್​
  • ಮಧುಗಿರಿ, ತಿಪಟೂರು ಉಪವಿಭಾಗದ ಬರ ವೀಕ್ಷಣೆ

ತುಮಕೂರು: ರಾಜ್ಯದೆಲ್ಲೆಡೆ ತೀವ್ರ ಬರದ ನಡುವೆಯೂ ವಿದೇಶ ಪ್ರವಾಸಕ್ಕೆ ತೆರಳಿದ್ದ ಕಂದಾಯ ಸಚಿವರೂ ಆದ ಡಿಸಿಎಂ ಡಾ.ಜಿ.ಪರಮೇಶ್ವರ ಭಾನುವಾರ ರಾಜ್ಯಕ್ಕೆ ವಾಪಸಾಗಿದ್ದು ಸೋಮವಾರ ತುಮಕೂರು ಜಿಲ್ಲೆಯ ಶಿರಾ, ಪಾವಗಡ ಹಾಗೂ ಮಧುಗಿರಿ ತಾಲೂಕುಗಳಲ್ಲಿ ಬರದಿಂದ ಹಾನಿಗೊಳಗಾದ ಪ್ರದೇಶಗಳ ಕ್ಷೇತ್ರ ಭೇಟಿ ಮಾಡಿದರು.

ಮಂಗಳವಾರ ಕೂಡ ಜಿಲ್ಲೆಯ ಗುಬ್ಬಿ, ತುರುವೇಕೆರೆ, ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ ಬರ ನಿರ್ವಹಣೆ ಪ್ರವಾಸಕ್ಕೆ ಮಿಂಚಿನ ಸಂಚಾರ ನಡೆಸಲಿದ್ದು ಸಚಿವರ ಭೇಟಿ ಸಂದರ್ಭದಲ್ಲಿ ತೋರಿಸುವ ಸ್ಥಳಗಳನ್ನು ಅಧಿಕಾರಿಗಳೇ ಗುರುತಿಸಿ, ಅಲ್ಲಿ ಅಗತ್ಯವಾದ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಬರದಿಂದ ಹಾನಿಗೊಳಗಾದ ಬೆಳೆ, ಕುಡಿಯುವ ನೀರು ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದರು.
ಇಂದು ಬೆಳಗ್ಗೆ ಶಿರಾ ತಾಲೂಕು ಕಾಗೇಲಿಂಗನಹಳ್ಳಿಯಲ್ಲಿ ಸಿಎಪಿ ಅನುದಾನದಲ್ಲಿ ನಿರ್ಮಿಸಿರುವ ಕೊಳವೆಬಾವಿ ವೀಸಿ ಪ್ರವಾಸ ಆರಂಭಿಸುವ ಡಾ.ಜಿ.ಪರಮೇಶ್ವರ ಮೇಲ್ಕುಂಟೆ ಗ್ರಾಮದಲ್ಲಿ ಮಳೆ ಇಲ್ಲದೆ ಸೊರಗಿರುವ ಶೇಂಗಾ ಬೆಳೆ ವೀಸುವರು. ತಡಕಲೂರು ಗ್ರಾಮದಲ್ಲಿ ಗೋಕಟ್ಟೆ ವೀಕ್ಷಣೆಯ ನಂತರ ಪಾವಗಡ ತಾಲೂಕಿಗೆ ಪ್ರವೇಶಿಸಿದರು.
ಕಿಲಾರ್ಲಹಳ್ಳಿ ಸಿದ್ಧಗಂಗಮ್ಮ ಅವರ ಹೊಲದಲ್ಲಿ ಶೇಂಗಾ ಹಾಗೂ ತೊಗರಿ ನೋಡಿಕೊಂಡು ಬಾಲಮ್ಮನಹಳ್ಳಿ ಕೃಷ್ಣಪ್ಪನ ಹೊಲದಲ್ಲಿ ತೊಗರಿ ಬೆಳೆ ವೀಸಿದ ನಂತರ ದಿಣ್ಣೆಬಾವಿ ಹಾಲಿನ ಡೇರಿ ಬಳಿ ಕೆಎಂಎ್​ ವತಿಯಿಂದ ಕೊಳವೆಬಾವಿ ಇರುವ ರೈತರಿಗೆ ನೀಡಲಾಗುತ್ತಿರುವ ಮೇವು ಜೋಳದ ಕಿಟ್​ ವಿತರಿಸುವ ಮೂಲಕ ಜಿಲ್ಲೆಯಲ್ಲಿ ಮೇವು ಕಿಟ್​ಗೆ ವಿತರಣೆಗೆ ಚಾಲನೆ ನೀಡಿದರು.
ರಾಜವಂತಿಯಲ್ಲಿ ಕೊಳವೆಬಾವಿ ವೀಸಿ ಮಧುಗಿರಿ ತಾಲೂಕು ಚಿನ್ನೇನಹಳ್ಳಿಯಲ್ಲಿ ರಾಮಕೃಷ್ಣಯ್ಯ ಹೊಲದಲ್ಲಿರುವ ಶೇಂಗಾ ಹಾಗೂ ತೊಗರಿ ವೀಸಿ ಮಧುಗಿರಿ ತಾಪಂ ಸಭಾಂಗಣದಲ್ಲಿ ಬರ ನಿರ್ವಹಣೆಯ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸುವರು, ಕೊರಟಗೆರೆ ತಾಲೂಕು ತುಂಬಾಡಿ&ಭೈರನಹಳ್ಳಿಯ ಮುದ್ದಮ್ಮ, ಲಕ್ಷ$್ಮಮ್ಮ, ನಾಗಭೂಷಣ ಅವರ ರಾಗಿ, ತೊಗರಿ ಹಾಗೂ ಅವರೆ ಬೆಳೆ ವೀಸಲು ಅಧಿಕಾರಿಗಳು ರೂಪಿಸಿರುವ ರೂಟ್​ಮ್ಯಾಪ್​ನಂತೆ ಪ್ರವಾಸ ಮುಗಿಸಲಿದ್ದಾರೆ.
ಮಂಗಳವಾರ ಬೆಳಗ್ಗೆ ತುರುವೇಕೆರೆ ತಾಲೂಕು ನೇರಲೇಕಟ್ಟೆಯಲ್ಲು ಕುಡಿಯುವ ನೀರು ಪೈಪ್​ಲೈನ್​ ಕಾಮಗಾರಿ ಮತ್ತು ರಾಗಿ, ನವಣೆ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಡಾ.ಪರಮೇಶ್ವರ ಭಾಗವಹಿಸುವರು. ಕಿಬ್ಬನಹಳ್ಳಿ ಕ್ರಾಸ್​ ಮೂಲಕ ಜೆ.ಸಿ.ಪುರ ಗ್ರಾಪಂ ತಿಗಳನಹಳ್ಳಿಯಲ್ಲಿ ವಿಬಿ ರಾಮ್​ ಜಿ ಕಾಮಗಾರಿ ವೀಕ್ಷಣೆ ಹಾಗೂ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ತಿಪಟೂರು ತಾಲೂಕು ಹುಲಿಕಟ್ಟೆ, ಚೌಡಾಪುರ, ಸಿಡ್ಲೇಹಳ್ಳಿಗೇಟ್​, ಮಲ್ಲಿಪಟ್ಟಣದಲ್ಲಿ ವಿವಿಧ ರೈತರ ಜಮೀನುಗಳಲ್ಲಿ ಬೆಳೆ ವೀಸಿ ತಿಪಟೂರು ತಾಲೂಕು ಕಚೇರಿ ಆವರಣದಲ್ಲಿ 500 ರೈತರಿಗೆ ಮೇವುಕಿಟ್​ ವಿತರಣೆ ಮಾಡಲಿದ್ದಾರೆ. ಮಧ್ಯಾಹ್ನ 3ರಿಂದ ಕಲ್ಪತರು ಸಭಾಂಗಭಣದಲ್ಲಿ ತಿಪಟೂರು ಉಪವಿಭಾಗದ ತಾಲೂಕುಗಳ ಬರ ನಿರ್ವಹಣೆ ಬಗ್ಗೆ ಪ್ರಗತಿ ಪರಿಶೀಲನೆ ನಡೆಸುವರು.
ಬರ ನಿರ್ವಹಣೆಗೆ ಜಿಲ್ಲಾಧಿಕಾರಿ ಎಸ್​ಪಿಎ್​ಎಂಎಸ್​ ಖಾತೆಯಲ್ಲಿ 13.56ಕೋಟಿ ರೂ. ಮತ್ತು ಜಿಲ್ಲೆಯಲ್ಲಿ ತಹಸೀಲ್ದಾರ್​ಗಳ ಪಿಡಿ ಖಾತೆಯಲ್ಲಿ 3.4ಕೋಟಿ ರೂ. ಮಾತ್ರ ಅನುದಾನ ಲಭ್ಯವಿದೆ. ಕೊಳವೆಬಾವಿ ಕೊರೆಸಲು ಅನುದಾನ ಬಳಸಿಕೊಳ್ಳಲು ಅವಕಾಶವಿದೆ. ಜಿಲ್ಲೆಯ 5335ಹಳ್ಳಿಗಳಲ್ಲಿ 400ಕ್ಕೂ ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿಗೆ ತಾತ್ವರ ಉಂಟಾಗಿದೆ. ಪ್ರತಿದಿನ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸುತಿದೆ.
ಜಿಲ್ಲೆಯಲ್ಲಿ 5.15ಲಕ್ಷ ಭೂ ಹಿಡುವಳಿದಾರರು ಇದ್ದರು ಅತೀ ಸಣ್ಣ ಭೂ ಹಿಡುವಳಿದಾರರು ಶೇ.20.56, ಸಣ್ಣ ಭೂ ಹಿಡುವಳಿದಾರರು ಶೇ.26.49, ಅರೆ ಮಧ್ಯಮ ಭೂ ಹಿಡುವಳಿದಾರರು ಶೇ.26.97, ಮಧ್ಯ ಭೂ ಹಿಡುವಳಿದಾರರು ಶೇ.19.72, ದೊಡ್ಡ ಭೂ ಹಿಡುವಳಿದಾರರು ಶೇ.6.26 ರಷ್ಟಿದ್ದು ಬರದಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.
ಕಳೆದ 7 ತಿಂಗಳಲ್ಲಿ ಜಿಲ್ಲಾ ಮಟ್ಟದಲ್ಲಿ 8. ಚಿ.ನಾ.ಹಳ್ಳಿ 13, ಗುಬ್ಬಿ 9, ಕೊರಟಗೆರೆ 3, ಕುಣಿಗಲ್​ 4, ಮಧುಗಿರಿ 6, ಪಾವಗಡ 7, ಸಿರಾ 5, ತಿಪಟೂರು 2, ತುಮಕೂರು 3 ಹಾಗೂ ತುರುವೇಕೆರೆ 8 ಸೇರಿದಂತೆ ಒಟ್ಟು 60 ಟಾಸ್ಕ್​ಪೋರ್ಸ್​ ಸಮಿತಿ ಸಭೆ ಮಾತ್ರ ನಡೆಸಲು ಸಾಧ್ಯವಾಗಿದ್ದು ಬರಗಾಲ ಘೋಷಣೆಯ ಮಾನದಂಡ ಆಧರಿಸಿ ರಾಜ್ಯದ ಕೆಎಸ್​ಎನ್​ಡಿಎಂಸಿ ಮತ್ತು ಕೆಎಸ್​ಎನ್​ಡಿಎಂಎ ವತಿಯಿಂದ ತಾಲುಕುವಾರು ಬರ ಪರಿಸ್ಥಿತಿಯನ್ನು ನಿರ್ಧರಿಸಬೇಕಿದೆ.
ಪ್ರವಾಸದ ತಾಲೂಕುಗಳಲ್ಲಿ ಲಭ್ಯ ಅನುದಾನ:
ತಾಲೂಕು ಪಿಡಿ ಖಾತೆಯಲ್ಲಿ ಲಭ್ಯ ಹಣ
ಸಿರಾ 46.64ಲಕ್ಷ ರೂ.
ಪಾವಗಡ 10.50
ಮಧುಗಿರಿ 41.99
ಕೊರಟಗೆರೆ 17.25
ತುರುವೇಕೆರೆ 44.33
ಚಿ.ನಾ.ಹಳ್ಳಿ 43.60
ತಿಪಟೂರು 26.46
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net