ಕನ್ಯಕಾಪರಮೇಶ್ವರಿಗೆ ಪಂಚಾಮೃತ ಅಭಿಷೇಕ

Panchamrit Abhishekam to Kanyakaparameshwari
Panchamrit Abhishekam to Kanyakaparameshwari
Published on
ಹುಳಿಯಾರ: ಹೋಬಳಿಯ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಆರ್ಯವೈಶ್ಯ ಮಂಡಲಿ, ಆರ್ಯವೈಶ್ಯ ಮಹಿಳಾ ಸಂ, ವಾಸವಿ ವಿದ್ಯಾ ಸಂಸ್ಥೆ, ವಾಸವಿ ಯುವಜನ ಸಂ, ಆರ್ಯವೈಶ್ಯ ಶ್ರೀ ಕನ್ಯಕಾಪರಮೇಶ್ವರಿ ಸಹಕಾರ ಸಂದ ಸಹಯೋಗದಲ್ಲಿ 34ನೇ ವರ್ಷದ ಶ್ರೀ ವಾಸವಿ ಜಯಂತಿ ಆಚರಿಸಲಾಯಿತು.
ಜಯಂತಿ ಅಂಗವಾಗಿ ದೇವರಿಗೆ 16 ಲೀಟರ್ ಹಾಲಿನಿಂದ ಪಂಚಾಮೃತ ಅಭಿಷೇಕ ಹಾಗೂ ರೇಷ್ಮೆ ಸೀರೆ ಸಮರ್ಪಿಸಲಾಯಿತು. ಸುಮಂಗಲೆಯರಿಂದ ‘ಆರತಿ ಸೇವೆ’ ಮತ್ತು ‘ಮಡಲಕ್ಕಿ ಸೇವೆ’ಯೊಂದಿಗೆ ವಿಶೇಷವಾಗಿ ಕನ್ಯಕಾ ಬಾಲನಗರು ಪೂಜೆ ನೆರವೇರಿತು. ಇದಲ್ಲದೆ ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ ಹಾಗೂ ವಾಸವಿ ಗಾಯತ್ರಿ ಮಂತ್ರ ಹವನ ನೆರವೇರಿಸಲಾಯಿತು.
ಗೋಲ್ಡನ್ ಸಾರೋಟ್ ರಥದಲ್ಲಿ ಶ್ರೀ ವಾಸವಿ ದೇವಿ ಹಾಗೂ ಸಿಲ್ವರ್ ಸಾರೋಟ್ ರಥದಲ್ಲಿ ಗ್ರಾಮದೇವತೆಗಳಾದ ಶ್ರೀ ದುರ್ಗಾಪರಮೇಶ್ವರಿ ಮತ್ತು ಶ್ರೀ ಹುಳಿಯಾರಮ್ಮ ಉತ್ಸವವು ಕೇರಳದ ಚಂಡೆವಾದ್ಯ, ಗೊಂಬೆನತ್ಯ ಮತ್ತು ವಿದ್ಯುತ್ ದೀಪಾಲಂಕಾರದೊಂದಿಗೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net