ವಿಷಪೂರಿತ ಮೇವು ಸೇವಿಸಿ 35ಕ್ಕೂ ಹೆಚ್ಚು ಕುರಿ ಸಾವು

Over 35 sheep die after consuming poisonous fodder.
Over 35 sheep die after consuming poisonous fodder.
Published on
ಪಟ್ಟನಾಯಕನಹಳ್ಳಿ: ಶಿರಾ ತಾಲೂಕು ಗೌಡಗೆರೆ ಹೋಬಳಿಯ ಮಾರನಗೆರೆ ಗೊಲ್ಲರಹಟ್ಟಿಯಲ್ಲಿ ಸೋಮವಾರ ವಿಷಪೂರಿತ ಮೇವು ತಿಂದು 35ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ.
ಕುರಿಗಾಹಿ ಉಮೇಶ್​ 80ಕ್ಕೂ ಹೆಚ್ಚು ಕುರಿ ಸಾಕಿದ್ದು, ಎಂದಿನಂತೆ ಕುರಿಗಳನ್ನು ಮೇಯಿಸಲು ಜಮೀನಿಗೆ ಹೊಡೆದುಕೊಂಡು ಹೋಗಿದ್ದರು. ಈ ವೇಳೆ ಕೆಲವು ಕುರಿಗಳು ಕೆಮಿಕಲ್​ ಬಳಸಿದ್ದ ಕರ್ಬುಜ, ಕಲ್ಲಂಗಡಿ, ಸೌತೆಕಾಯಿ ಬೆಳೆಯುವ ಜಾಗಕ್ಕೆ ತೆರಳಿ ಮೇವು ತಿಂದಿವೆ. ಇದನ್ನು ಗಮನಿಸಿದ ಉಮೇಶ್​ ತಕ್ಷಣ ಬೇರಡೆ ಹೊಡೆದುಕೊಂಡು ಹೋಗಿದ್ದಾರೆ. ಆದರೂ ಆ ಸ್ಥಳದಲ್ಲಿ ಮೇವು ತಿಂದಿದ್ದ 35ಕ್ಕೂ ಹೆಚ್ಚು ಕುರಿಗಳು ಒಂದೊಂದಾಗೆ ಉಸಿರುಚೆಲ್ಲಿವೆ. ಉಮೇಶ್​ ನೀಡಿದ ಮಾಹಿತಿಯಿಂದ ಸ್ಥಳಕ್ಕೆ ಬಂದ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ ಸಂಪತ್​ ಕುಮಾರ್​ ಮೇವು ಪರಿಶೀಲಿಸಿ, ಲ್ಯಾಬ್​ಗೆ ಕೊಂಡೊಯ್ದು ಪರಿಶೀಲಿಸಿದಾಗ ವಿಷಪೂರಿತ ಮೇವು ಎಂಬುದು ತಿಳಿದು ಬಂದಿದೆ. ಉಳಿದ ಕುರಿಗಳಿಗೆ ಚಿಕಿತ್ಸೆ ನೀಡಿದ್ದು, ಆರೋಗ್ಯವಾಗಿವೆ.
ಕುರಿಗಳ ಸಾವಿನ ಕಾರಣ ಪತ್ತೆ ಹಚ್ಚಿ, ಉಳಿದ ಕುರಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಂಪತ್​ ಕುಮಾರ್​ ಮತ್ತು ಪಶು ವೈದ್ಯಾಧಿಕಾರಿ ಡಾ.ರಮೇಶ್​ ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಚಿದಾನಂದ ಎಂ.ಗೌಡ ತಿಳಿಸಿದರು.
ತಾವರೆಕೆರೆ ಗ್ರಾಪಂ ಮಾಜಿ ಸದಸ್ಯ ಮಾರನಗೆರೆ ಮಧುಸೂದನ್​, ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್​ ಬಾಬು, ಮಹಾಲಿಂಗಪ್ಪ, ಗ್ರಾಪಂ ಮಾಜಿ ಉಪಾಧ್ಯಕ್ಷ ಸ್ನೇಹಪ್ರಿಯ ಶಿವು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಭಾಸ್ಕರ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net