ನೊಳಂಬ ಲಿಂಗಾಯತ ಸಂಘದ ಚುನಾವಣೆ ಮುಕ್ತಾಯ

ನೊಳಂಬ ಲಿಂಗಾಯತ ಸಂಘದ ಕಾರ್ಯಕಾರಿಣಿ ಸಮಿತಿ ಚುನಾವಣೆಯಲ್ಲಿ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಚಿಕ್ಕನಾಯಕನಹಳ್ಳಿಯಲ್ಲಿ ಮತದಾನ ಮಾಡಿದರು.
ನೊಳಂಬ ಲಿಂಗಾಯತ ಸಂಘದ ಕಾರ್ಯಕಾರಿಣಿ ಸಮಿತಿ ಚುನಾವಣೆಯಲ್ಲಿ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಚಿಕ್ಕನಾಯಕನಹಳ್ಳಿಯಲ್ಲಿ ಮತದಾನ ಮಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ 8 ಸ್ಥಾನಗಳ ಆಯ್ಕೆಗೆ ನಡೆದ ಮತದಾನ
  • ಸೋಮವಾರ ಬೆಳಗ್ಗೆ ಫಲಿತಾಂಶ ಘೋಷಣೆ
  • ಭಾನುವಾರ ಸಂಜೆಯವರೆಗೂ ಶಾಂತಿಯುತ ಮತದಾನ

ತುಮಕೂರು: ಪ್ರತಿಷ್ಠಿತ ನೊಳಂಬ ಲಿಂಗಾಯತ ಸಂಘದ ಚುನಾವಣೆ ಭಾನುವಾರ ಮುಕ್ತಾಯವಾಗಿದ್ದು ಜಿಲ್ಲೆಯಿಂದ ಆಯ್ಕೆಯಾಗಬೇಕಿರುವ 8 ಸ್ಥಾನಗಳಿಗೆ ಸೋಮವಾರ ಬೆಳಗ್ಗೆ ಫಲಿತಾಂಶ ಪ್ರಕಟವಾಗುವ ನಿರೀೆಯಿದೆ.

ಭಾನುವಾರ ಸಂಜೆಯವರೆಗೂ ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ ಹಾಗೂ ತುಮಕೂರು ತಾಲೂಕಿನಲ್ಲಿ ಬಿರುಸಿನ ಮತದಾನ ನಡೆದಿದ್ದು ಮತದಾನ ಮುಗಿದ ನಂತರ ಆಯಾ ಮತದಾನ ಕೇಂದ್ರಗಳಲ್ಲಿಯೇ ಮತಗಳ ಎಣಿಕೆ ತಡರಾತ್ರಿಯ ವರೆಗೂ ನಡೆದಿದೆ. 24ರಂದು ಚುನಾವಣಾಧಿಕಾರಿ ಲಿತಾಂಶವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.
ರಾಜ್ಯದಲ್ಲಿಯೇ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ತುಮಕೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮೂರು ಪ್ರತ್ಯೇಕ ತಂಡಗಳು ಚುನಾವಣೆಗೆ ದುಮುಕಿದ್ದು ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ತಿಪಟೂರು ತಾಲೂಕಿನಿಂದ 10, ತುರುವೇಕೆರೆ 5. ಚಿಕ್ಕನಾಯಕನಹಳ್ಳಿ 5, ಗುಬ್ಬಿ 5 ಹಾಗೂ ತುಮಕೂರು ತಾಲೂಕಿನಿಂದ 6 ಜನರು ಸೇರಿದಂತೆ ಒಟ್ಟು 31 ಜನರು ಕಣದಲ್ಲಿದ್ದು ಹೆಚ್ಚು ಮತ ಪಡೆದ ಮೊದಲ 8 ಜನರಿಗೆ ಮಾತ್ರ ಆಯ್ಕೆಯಾಗಲು ಅವಕಾಶವಿದೆ.
ತುಮಕೂರು ಜಿಲ್ಲೆಯಲ್ಲಿ ಹಾಲಿ ಅಧ್ಯಕ್ಷ ಬಿ.ಕೆ.ಚಂದ್ರಶೇಖರ್​, ಕಾರ್ಯಕಾರಿ ಸಮಿತಿ ಸದಸ್ಯ ಸಾಗರನಹಳ್ಳಿ ನಟರಾಜು ಹಾಗೂ ಎಂ.ಬಿ.ನಂದೀಶ್​ ನೇತೃತ್ವದಲ್ಲಿ ಪ್ರತ್ಯೇಕವಾಗಿ ಮೂರು ತಂಡಗಳು ಜಿಲ್ಲೆಯೆಲ್ಲೆಡೆ ಬಿರುಸಿನ ಪ್ರಚಾರ ನಡೆಸಿದ್ದು ಇಂದು ಘೋಷಣೆಯಾಗಿರುವ ಲಿತಾಂಶ ಕುತೂಹಲ ಮೂಡಿಸಿದೆ.
ಭಾನುವಾರ ತಿಪಟೂರು ತಾಲೂಕಿನಲ್ಲಿ ಇದ್ದ 2407 ಮತಗಳ ಪೈಕಿ 1650 ಚಲಾವಣೆಯಾದವು, ತುರುವೇಕೆರೆಯಲ್ಲಿ 810ರಲ್ಲಿ 712, ಚಿಕ್ಕನಾಯಕನಹಳ್ಳಿ 1485ರ ಪೈಕಿ 1278, ತುಮಕೂರು 1040ರಲ್ಲಿ 737 ಹಾಗೂ ಗುಬ್ಬಿ ತಾಲೂಕಿನಲ್ಲಿ ಇದ್ದ 1465 ಮತದಾರರಲ್ಲಿ 1250 ಜನರು ಮಾತ್ರ ಮತದಾನ ಮಾಡಿದ್ದು ಎಣಿಕೆಯ ನಂತರ ಸ್ಪಷ್ಟಚಿತ್ರಣ ಹೊರಬೀಳಲಿದೆ.
ರಾಜ್ಯದಲ್ಲಿ 41, ತುಮಕೂರು ಜಿಲ್ಲೆಯಿಂದ 8 ಸ್ಥಾನ:
26793 ಅಜೀವ ಸದಸ್ಯ ಮತದಾರರು, ಒಬ್ಬರು ಮಹಾಪೋಷಕರು, 6 ಪೋಷಕರು, ಮಹಾದಾನಿಗಳು 20 ಹಾಗೂ ದಾನಿ ಮತದಾರರು 154

ನೊಳಂಬ ಲಿಂಗಾಯತ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹತೆ ಪಡೆದಿದ್ದು ನಾಮಕರಣ ಸದಸ್ಯರನ್ನು ಹೊರತು ಪಡಿಸಿ ಸಮಿತಿಗೆ ಚುನಾವಣೆ ಮೂಲಕ 44 ಜನರ ಆಯ್ಕೆಗೆ ಅವಕಾಶವಿದೆ.

ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯಿಂದ 8, ಹಾಸನ 5, ಚಿಕ್ಕಮಗಳೂರು 4, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ದಾವಣಗೆರೆ ಹಾಗೂ ಮೈಸೂರು ಜಿಲ್ಲೆಯಿಂದ ತಲಾ 2 ಮತ್ತು ಮಹಾಪೋಷಕ ವರ್ಗದಿಂದ ಒಬ್ಬರು, ಪೋಷಕರ ವರ್ಗದಿಂದ ಒಬ್ಬರು, ಮಹಾದಾನಿಗಳಿಂದ ಮತ್ತು ದಾನಿಗಳಿಂದ ತಲಾ ಇಬ್ಬರು ಒಟ್ಟು 41 ಸದಸ್ಯರು ಕಾರ್ಯಕಾರಿ ಸಮಿತಿಗೆ ಚುನಾವಣೆಯಿಂದ ಆಯ್ಕೆಯಾಗಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net