ಮತದಾನದ ವೇಳೆ ಅಧ್ಯಕ್ಷರ ಪರ ಕಾಂಗ್ರೆಸ್ನ 6, ಜೆಡಿಎಸ್ನ 2, ಬಿಜೆಪಿಯ 1 ಹಾಗೂ 4 ಪಕ್ಷೇತರ ಸದಸ್ಯರು ಮತ ಚಲಾಯಿಸಿದರು. ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ನ 8, ಬಿಜೆಪಿಯ 3, ಜೆಡಿಎಸ್ನ 1 ಹಾಗೂ 2 ಪಕ್ಷೇತರ ಸದಸ್ಯರು ಮತ ನೀಡಿದರು. ಕಾಂಗ್ರೆಸ್ನವರೇ ಆದ ಅಧ್ಯಕ್ಷ ಜಿಷನ್ ಅಹಮ್ಮದ್ ವಿರುದ್ಧ ಕಾಂಗ್ರೆಸ್ನ 8 ಸದಸ್ಯರು ಮತ ಚಲಾಯಿಸಿದ್ದು, ಪಕ್ಷದೊಳಗಿನ ಭಿನ್ನಾಭಿಪ್ರಾಯ ಬಹಿರಂಗಪಡಿಸಿತು. ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಮತಗಳೂ ವಿಭಜನೆಯಾಗಿರುವುದು ಸ್ಥಳಿಯ ರಾಜಕೀಯ ಸಮೀಕರಣಗಳಿಗೆ ಸಾಕ್ಷಿಯಾಯಿತು.