ಜಿಲ್ಲಾ ಕೇಂದ್ರ ತುಮಕೂರಿನ ಸರ್ಕಾರಿ ಪದವಿ ಕಾಲೇಜು, ಸರ್ಕಾರಿ ಮಹಿಳಾ ಪದವಿ ಕಾಲೇಜು, ಸರ್ಕಾರಿ ಸಂಜೆ ಕಾಲೇಜು ಹಾಗೂ ಸರ್ಕಾರಿ ಚಿತ್ರಕಲಾ ಶಾಲೆಗೂ ಸಮಿತಿ ರಚನೆಯಾಗಿಲ್ಲ. ಜತೆಗೆ ಬೆಳ್ಳಾವಿ, ಹೆಬ್ಬೂರು, ಕುಣಿಗಲ್, ಗುಬ್ಬಿ, ಕೊರಟಗೆರೆ, ತುರುವೇಕೆರೆ, ದಂಡಿನಶಿವರ, ತಿಪಟೂರು, ಹುಳಿಯಾರು, ಮಧುಗಿರಿ ಕಾಲೇಜುಗಳಲ್ಲಿ ಬಹುವರ್ಷದಿಂದಲೂ ಕಾಲೇಜು ಅಭಿವೃದ್ಧಿ ಸಮಿತಿ ಇಲ್ಲ.