ಪರಮೇಶ್ವರ ರಾಜಕೀಯ ಪಯಣ

ರಾಜ್ಯ ನೂತನ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಡಾ.ಜಿ.ಪರಮೇಶ್ವರ.
ರಾಜ್ಯ ನೂತನ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಡಾ.ಜಿ.ಪರಮೇಶ್ವರ.
Published on

ಪ್ರಮುಖ ಮುಖ್ಯಾಂಶಗಳು

  • ಡಿಕೆಶಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ
  • 2 ಬಾರಿ ಡಿಸಿಎಂ ಪಟ್ಟ
  • ಸುಶಿಕ್ಷಿತ, ಸಜ್ಜನ ರಾಜಕಾರಣಿ
ತುಮಕೂರು: ಡಿ.ಕೆ.ಶಿವಕುಮಾರ್​ ನೇತೃತ್ವದ ಸರ್ಕಾರದಲ್ಲಿ ಡಿಸಿಎಂ ಪಟ್ಟ ಅಲಂಕರಿಸಿರುವ ಡಾ.ಜಿ.ಪರಮೇಶ್ವರ ಅವರದ್ದು ಗ್ರೇಟರ್​ ತುಮಕೂರು ಕನಸು. ನಮ್ಮ ಮೆಟ್ರೋ ರೈಲು ತುಮಕೂರಿನವರೆಗೆ ವಿಸ್ತರಣೆ ಮಾಡುವ ಮೂಲಕ ವಿಶ್ವಭೂಪಟದಲ್ಲಿ ಜಿಲ್ಲೆಯ ಹೆಸರನ್ನು ಮೂಡಿಸುವ ಸಂಕಲ್ಪ. 2 ಬಾರಿ ಡಿಸಿಎಂ ಹುದ್ದೆಗೇರಿರುವ ಪರಂ ರಾಜಕೀಯ ಪಯಣದ ಝಲಕ್​.
ಪರಮೇಶ್ವರ್​ ರಾಜಕೀಯ ಪಯಣ
* 1975 ಬೆಂಗಳೂರು ಕೃಷಿ ವಿಜ್ಞಾನ ವಿವಿಯಲ್ಲಿ ಬಿಎಸ್ಸಿ ಕೃಷಿ ಪದವಿ
* 1978ರಲ್ಲಿ ಯುಎಎಸ್​ ಬೆಂಗಳೂರು ಸ್ನಾತಕೋತ್ತರ ಕೃಷಿ ಪದವಿ
* 1984 ಆಸ್ಟ್ರೆಲಿಯಾ ಅಡಿಲೇಡ್​ ವಿವಿಯಲ್ಲಿ ಪಿಎಚ್​ಡಿ ಪದವಿ
*1989 ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ವೈದ್ಯಕಿಯ ಕಾಲೇಜಿನ ಉದ್ಘಾಟನೆಗೆ ಆಗಮಿಸಿದ್ದ ಅಂದಿನ ಪ್ರಧಾನಿ ರಾಜೀವ್​ಗಾಂಧಿ ಅವರಿಂದ ಸಂಸ್ಥೆಯ ಕಾರ್ಯದರ್ಶಿ ಜಿ.ಪರಮೇಶ್ವರ್​ಗೆ ರಾಜಕೀಯಕ್ಕೆ ಆಹ್ವಾನ
* 1989ರಲ್ಲಿ ಮಧುಗಿರಿ ಮೀಸಲು ಕ್ಷೇತ್ರದಿಂದ ರಾಜ್ಯ ವಿಧಾನಸಭೆ ಪ್ರವೇಶ
* 1989-92ರವರೆಗೆ ಕೆಪಿಸಿಸಿ ಜಂಟಿ ಕಾರ್ಯದರ್ಶಿ ಹುದ್ದೆ
* 1992ರಿಂದ ಪ್ರಧಾನ ಕಾರ್ಯದರ್ಶಿ
* 1993-94ರವರಗೆ ರೇಷ್ಮೆ ಸಚಿವ (ವೀರಪ್ಪ ಮೊಯ್ಲಿ ಸಂಪುಟ)
* 1999ರಿಂದ 2004ರವರೆಗೆ ಎಸ್​.ಎಂ.ಕೃಷ್ಣ ಸಚಿವ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವ
* ಅಖಿಲ ಭಾರತ ಕಾಂಗ್ರೆಸ್​ ಕಾರ್ಯಕಾರಿಣಿ ಸಮಿತಿ ವಿಶೇಷ ಆಹ್ವಾನಿತ ಸ್ಥಾನಮಾನ
* ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ
* 2010 ರಿಂದ 2018ರವರೆಗೆ ಕೆಪಿಸಿಸಿ ಸಾರಥ್ಯ
* 2013ರಲ್ಲಿ ವಿಧಾನಸಭೆ ಚುನಾವಣೆ ಸೋಲು, 2014ರಲ್ಲಿ ಎಂಎಲ್ಸಿ ಆದ ಬಳಿಕ ಗೃಹ ಸಚಿವ
* 2018ರಲ್ಲಿ ಜೆಡಿಎಸ್​-ಕಾಂಗ್ರೆಸ್​ ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ
* 2023ರಲ್ಲಿ ಕಾಂಗ್ರೆಸ್​ ಪಕ್ಷದ ಚುನಾವಣಾ ಪ್ರಣಾಳಿಕೆ ಅಧ್ಯಕ್ಷ
* 2023-2026ರವರೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಗೃಹ ಸಚಿವ
* ಡಿ.ಕೆ.ಶಿವಕುಮಾರ್​ ಸಂಪುಟದಲ್ಲಿ ಡಿಸಿಎಂ ಪಟ್ಟ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net