ತುಮಕೂರಿನ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ನೀಟ್ ಕುರಿತ ಜಾಗೃತಿ ಕಾರ್ಯಾಗಾರ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಎಂ.ಎಸ್.ಪಾಟೀಲ್, ಅಂಬಿಕಾ ಹುಲಿನಾಯ್ಕರ್, ಡಾ.ಲಾವಣ್ಯ, ಡಾ.ನರೇಂದ್ರ ವಿಶ್ವನಾಥ್, ಡಾ.ಎನ್.ಚಂದ್ರಶೇಖರ್, ಡಾ.ಕೆ.ಎಸ್.ರಾಮಕೃಷ್ಣ, ಪ್ರೊ.ಸಿ.ಅಜಯ್, ಡಾ.ಎಂ.ಸಿ.ಕೃಷ್ಣ, ಡಾ.ಸಿ.ಪಿ.ಚಂದ್ರಪ್ಪ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶ್ರೀದೇವಿ ಶಿಕ್ಷಣ ಸಮೂಹ ಶಿಕ್ಷಣ ಸಂಸ್ಥೆ
ಪಿಯು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
ಡಾ.ಎಂ.ಆರ್.ಹುಲಿನಾಯ್ಕರ್ ಸುದ್ದಿಗೋಷ್ಠಿ
ತುಮಕೂರು: ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಪಿಯುಸಿ ವಿಭಾಗದ ಸಹಯೋಗದಲ್ಲಿ ನೀಟ್ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಕುರಿತ ಜಾಗೃತಿ ಕಾರ್ಯಾಗಾರವನ್ನು ಪಿಯು ವಿದ್ಯಾರ್ಥಿಗಳಿಗಾಗಿ ಫೆ.14 ರಂದು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಹೇಳಿದರು.
ದ್ವೀತಿಯ ಪಿಯು ಓದುತ್ತಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮೇ 3 ರಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ)ಯಿಂದ ನೀಟ್ ಪರೀಕ್ಷೆ ಆಯೋಜಿಸಿದ್ದು, ಪರೀಕ್ಷೆ ತೆಗದುಕೊಳ್ಳುವ ವಿಧಾನ, ಪರೀಕ್ಷೆ ತಯಾರಿ, ಪ್ರಶ್ನೆ ಪತ್ರಿಕೆಗಳ ಮಾದರಿ, ಉತ್ತನ ನೀಡುವ ವಿಧಾನ ಸೇರಿದಂತೆ ನೀಟ್ಗೆ ಸಂಬಂಧಿಸಿದ ಸಮಗ್ರ ವಿಚಾರಗಳ ಕುರಿತು ನುರಿತ ತಜ್ಞರಿಂದ ವಿಶೇಷ ಬೋಧನೆ, ಸಂವಾದ ಹಾಗೂ ಮಾರ್ಗದರ್ಶನ ಕಾರ್ಯಾಗಾರ ನಡೆಯಲಿದೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನೀಟ್ ಪರೀಕ್ಷೆ ತೆಗೆದುಕೊಳ್ಳುವುದು ಬಹುತೇಕ ಆನ್ಲೈನ್ ಪ್ರಕಿಯೆಯಾಗಿರುವ ಕಾರಣ, ಗ್ರಾಮೀಣ ವಿದ್ಯಾರ್ಥಿಗಳಿಗೆ ಬಹಳ ಕಷ್ಟ ಆಗುತ್ತಿದೆ. ಹಾಗಾಗಿ ಇದರ ಬಗ್ಗೆ ತಿಳುವಳಿಕೆ ನೀಡುವ ಸಲುವಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮಕ್ಕಳು ಯಾವ ಕೋರ್ಸು ಆಯ್ಕೆ ಮಾಡಿಕೊಳ್ಳಬೇಕು. ಜಾಗತಿಕ ಮಾರುಕಟ್ಟೆಯಲ್ಲಿ ಯಾವ ಕೋರ್ಸುಗಳಿಗೆ ಬೆಲೆ ಇದೆ ಎಂಬ ಮಾಹಿತಿಯ ಜತೆಗೆ ವೈದ್ಯಕಿಯ, ದಂತ ವೈದ್ಯಕಿಯ, ಆಯುಷ್ ಜತೆಗೆ, ಹೊಸದಾಗಿ ಬ್ಯಾಚುಲರ್ ಅಫ್ ಪಿಜಿಯೋಥೆರಪಿ, ಬ್ಯಾಚುಲರ್ ಅಫ್ ಅಕ್ಯುಪೇಷನ್ ಥೆರಪಿ ಎಂಬ ಎರಡು ಹೊಸ ವಿಷಯಗಳು ಸೇರ್ಪಡೆಗೊಂಡಿವೆ ಎಂದರು.
ನೀಟ್ ಜಾಗೃತಿ ಕಾರ್ಯಾಗಾರದಲ್ಲಿ ಸುಮಾರು 1500 ರಿಂದ 1800 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ಪಿಯು ಡಿಡಿಪಿಐ ಮೂಲಕ ಜಿಲ್ಲೆಯ ಎಲ್ಲಾ ಪಿಯು ಕಾಲೇಜುಗಳಿಗೆ ಮಾಹಿತಿ ನೀಡಲಾಗಿದೆ.2000 ವಿದ್ಯಾರ್ಥಿ ಗಳಿಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಶ್ರೀದೇವಿ ಶಿಕ್ಷಣ ಸಂಸ್ಥೆಯಿಂದ ಹೆಲ್ಪ್ ಲೈನ್ ತೆರೆದು, ಅವಶ್ಯ ಇರುವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವುದರಿಂದ ಹಿಡಿದು, ಕೋರ್ಸುಗಳ ಆಯ್ಕೆ ಸೇರಿದಂತೆ ಎಲ್ಲಾ ರೀತಿಯ ಮಾಹಿತಿಯನ್ನು ನೀಡಲಾಗುವುದು ಎಂದು ಡಾ.ಹುಲಿನಾಯ್ಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್, ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಟ್ರಸ್ಟಿಯಾದ ಅಂಬಿಕಾ ಹುಲಿನಾಯ್ಕರ್, ಡಾ.ಲಾವಣ್ಯ, ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ನರೇಂದ್ರ ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.
ನೀಟ್ ಮೂಲಕ ಶ್ರೀದೇವಿ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯಕ್ಕೆ ಸೇರ್ಪಡೆಗೊಳ್ಳುವ ಒಬಿಸಿ ಕ್ಯಾಟಗೆರಿಯ ವಿದ್ಯಾರ್ಥಿಗಳಿಗೆ ಕನಕ ಮತ್ತು ಅಹಲ್ಯಾಬಾಯಿ ಸ್ಕಾಲರ್ಶಿಪ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು.11 ಇಂಜಿನಿಯರಿಂಗ್ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗೆ ಮುಂದಿನ 4ವರ್ಷಗಳ ಕಾಲ ಉಚಿತ ಶಿಕ್ಷಣ ನೀಡಲಾಗುವುದು. ಪ್ರತಿ ವರ್ಷ ಕನಕ ಮತ್ತು ಅಹಲ್ಯಾಬಾಯಿ ವಿದ್ಯಾರ್ಥಿ ವೇತನಕ್ಕೆ 2 ಕೋಟಿ ರೂ., ವ್ಯಯಿಸಲಾಗುವುದು.