ಪಟ್ಟಣದ ತಾಲೂಕು ಆಡಳಿತಸೌಧದ ಸಭಾಂಗಣದಲ್ಲಿ ಆಯೋಜಿಸಿದ್ದ ಬಗರ್ ಹುಕುಂ ಸಭೆಯಲ್ಲಿ ಮಾತನಾಡಿ, ನಿಮಗೆ ಎಷ್ಟುದಿನ ಬೇಕು ಪಟ್ಟಿ ಮಾಡಲು?. ತಾಲೂಕಿನ ಹುಳಿಯಾರು ಕಂದಿಕೆರೆ ಹೋಬಳಿಯಲ್ಲಿ ಈ ಬಗರ್ಹುಕುಂ ಜಮೀನುಗಳ ಕಡತಗಳು ಹೆಚ್ಚಾಗಿದ್ದು, ಈ ವ್ಯಾಪ್ತಿಯ ಉಪತಹಸೀಲ್ದಾರ್, ರಾಜಸ್ವನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಏನು ಮಾಡುತ್ತಿದ್ದೀರಿ. ಕನಿಷ್ಠ ದೊಡ್ಡರಾಂಪುರದ 47ರ ಕಡತ ಏನಾಯಿತು ತಿಳಿಸಿ. ಮೂರು ತಿಂಗಳಾದರು ಕಡತಗಳ ಬಗ್ಗೆ ಗಮನಹರಿಸಿಲ್ಲ. ನೀವು ಏನು ಕೆಲಸ ಮಾಡುತ್ತಿದ್ದೀರಿ..? ರೈತರು ಅಲೆದಾಡುವುದು ತಪ್ಪಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.