ಬರಗೂರು: ಸಮಾಜದ ಅಭಿವೃದ್ಧಿಗೆ ಆರ್ಥಿಕ ಪ್ರಗತಿಯಷ್ಟೇ ನೈತಿಕ ಮೌಲ್ಯ ಮತ್ತು ಆಧ್ಯಾತ್ಮಿಕ ಚಿಂತನೆ ಅತ್ಯಗತ್ಯ ಎಂದು ಮಾಜಿ ಶಾಸಕ ಡಾ.ರಾಜೇಶ್ಗೌಡ ಹೇಳಿದರು. ಶಿರಾ ತಾಲೂಕು ಮಾದನಾಯಕನಹಳ್ಳಿ ಶ್ರೀ ಪದ್ದಮ್ಮ ದೊಡ್ಡದೇವರ ಬ್ರಹ್ಮರಥೋತ್ಸವದಲ್ಲಿ ಮಾತನಾಡಿ, ಧರ್ಮವೆಂದರೆ ಕೇವಲ ಪೂಜೆ, -ಪುನಸ್ಕಾರವಲ್ಲ. ಸತ್ಯ, ಪ್ರಾಮಾಣಿಕತೆ, ಕರುಣೆ, ಸೇವೆ ಹಾಗೂ ಸಮಾಜದ ಒಳಿತಿಗಾಗಿ ಬದುಕುವುದೇ ನಿಜವಾದ ಧರ್ಮ ಎಂದರು.