ನಾಪತ್ತೆಯಾಗಿದ್ದ ಪಿಎಸ್​ಐ ಸಂಬಂಧಿಕರ ಮನೆಯಲ್ಲಿ ಸುರಕ್ಷಿತ

ನಾಪತ್ತೆಯಾಗಿದ್ದ ಮಹಿಳಾ ಪಿಎಸ್​ಐ ಮಂಗಳಮ್ಮ
ನಾಪತ್ತೆಯಾಗಿದ್ದ ಮಹಿಳಾ ಪಿಎಸ್​ಐ ಮಂಗಳಮ್ಮ
Published on

ಪ್ರಮುಖ ಮುಖ್ಯಾಂಶಗಳು

  • ಕೌಟುಂಬಿಕ ಕಲಹದಿಂದ ಮನೆ ತೊರೆದಿದ್ದ ಮಂಗಳಮ್ಮ
  • ಹೊಸಬಡಾವಣೆ ಪೊಲೀಸ್​ಠಾಣೆ ಪಿಎಸ್​ಐ 2
  • ಚಿಕ್ಕಮಗಳೂರಿನ ಸಂಬಂಧಿಕರ ಮನೆಯಲ್ಲಿ ಆಶ್ರಯ
ತುಮಕೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ಮನೆಬಿಟ್ಟು ನಾಪತ್ತೆಯಾಗಿದ್ದ ನಗರದ ಹೊಸ ಬಡಾವಣೆ ಪೊಲೀಸ್​ ಠಾಣೆ ಪಿಎಸ್​ಐ-2 ಮಂಗಳಮ್ಮ ಚಿಕ್ಕಮಗಳೂರಿಗೆ ಸಂಬಂಧಿಕರ ಮನೆಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.
ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ-2 ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಗಳಮ್ಮ ಶುಕ್ರವಾರ ತುಮಕೂರಿನಲ್ಲಿ ಡಿವೈಎಸ್ ಪಿ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ನಡುವೆಯೇ ಪೋನ್​ ಕರೆ ಬಂದಿದೆ ಎಂದು ಎದ್ದು ಹೊರನಡೆದವರು ಮತ್ತೆ ಕಾಣಿಸಿರಲಿಲ್ಲ.
ಇಡೀ ದಿನ ಹುಡುಕಾಡಿದರೂ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಮಂಗಲಮ್ಮ ಪುತ್ರಿ ಹೊಸ ಬಡಾವಣೆ ಠಾಣೆಯಲ್ಲಿ ದೂರು ನೀಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net