ಕಾಂಗ್ರೆಸ್ ಶಾಸಕರೇ ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದಿದ್ದರಿಂದ ಇರಿಸು, ಮುರಿಸುಗೆ ಒಳಗಾದ ಡಿಸಿಎಂ ಡಾ.ಜಿ.ಪರಮೇಶ್ವರ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ವರದಿ ನೀಡಲು ನಿಖರವಾದ ಡೇಟಾ ಇಲ್ಲ, ಜಿಲ್ಲಾಡಳಿತ ಹಳಿತಪ್ಪಿದೆ, ಪ್ರತಿಯೊಬ್ಬ ಅಧಿಕಾರಿಗಳು ಶಾಸಕರ ಜತೆ ಮಾತನಾಡಿ, ಪೋನ್ ನಂಬರ್ ಕೊಡಬೇಕು, ತಾಲೂಕು ಅಧಿಕಾರಿಗಳು ಭೇಟಿ ಮಾಡಬೇಕು, ಚುನಾಯಿತ ಪ್ರತಿನಿಧಿಗಳ ವಿಶ್ವಾಸಗಳಿಸದಿದ್ದರೆ ಕ್ರಮಕೈಗೊಳ್ಳುತ್ತೇವೆ ಎಂದು ಸೂಚನೆ ನಿಡಿದರು.