ಅರಣ್ಯಭೂಮಿ ಒತ್ತುವರಿ ತೆರವಿಗೆ ಮೀನಾಮೇಷ

ಅರಣ್ಯ ಪ್ರದೇಶ
ಅರಣ್ಯ ಪ್ರದೇಶ
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ 4001ಪ್ರಕರಣ, 8021 ಎಕರೆ ತೆರವಿಗೆ ಬಾಕಿ
  • 12 ವರ್ಷದಲ್ಲಿ ತೆರವಾಗಿದ್ದು 931 ಎಕರೆ ಮಾತ್ರ
  • ಒತ್ತುವರಿಗೆ ಕಾರಣಕ್ಕೆ ಕಡಿಮೆಯಾಗಿರುವ ಕಾಡು
ತುಮಕೂರು: ಒತ್ತುವರಿಯಾಗಿರುವ ಅರಣ್ಯ ಭೂಮಿ ಉಳಿಸಲು ಅರಣ್ಯ ಇಲಾಖೆ ಮೀನಾಮೇ ಎಣಿಸುತ್ತಲೇ ಇದೆ. ರಾಜ್ಯದಲ್ಲಿ 1.20 ಲಕ್ಷ ಪ್ರಕರಣಗಳಲ್ಲಿ 2.21 ಲಕ್ಷ ಎಕರೆ ಅರಣ್ಯ ಪ್ರದೇಶದ ಒತ್ತುವರಿಯನ್ನು ತೆರವು ಮಾಡಲು ಬಾಕಿ ಇದ್ದು ದಶಕಗಳಿಂದಲೂ ಇದು ಹಾಗೆಯೇ ಉಳಿಸಿದೆ.
ತುಮಕೂರು ಜಿಲ್ಲೆಯಲ್ಲಿಯೂ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡವರ ವಿರುದ್ಧ ಕರ್ನಾಟಕ ಭೂ ಕಬಳಿಗೆ ವಿಶೇಷ ನ್ಯಾಯಾಲಯದಡಿ 4001 ಪ್ರಕರಣಗಳಿದ್ದು 8025 ಎಕರೆ ಒತ್ತುವರಿ ತೆರವು ಬಾಕಿ ಇದೆ, ಸಾವಿರಾರು ಎಕರೆ ಕೆರೆ ಭೂಮಿಯೂ ಈಗಾಗಲೇ ಒತ್ತುವರಿಯಾಗಿದ್ದು ಅರಣ್ಯ ಕೂಡ ವಿವಿಧ ಕಾರಣದಿಂದ ಒತ್ತುವರಿಯಾಗುತ್ತಲೇ ಇದೆ.
2014ರಿಂದಲೂ ಜಿಲ್ಲೆಯಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಚರಣೆ ನಡೆಯುತ್ತಿದೆ ಇದೆ ಆದರೆ, ಕಳೆದ 12 ವರ್ಷದಲ್ಲಿ ಜಿಲ್ಲೆಯಲ್ಲಿ 340 ಪ್ರಕರಣಗಳಲ್ಲಿ 931 ಎಕರೆ ಮಾತ್ರ ತೆರವುಗೊಳಿಸಲು ಅರಣ್ಯ ಇಲಾಖೆಗೆ ಸಾಧ್ಯವಾಗಿದೆ. ಕಾನೂನು ಬೆಂಬಲವಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ತೆರವು ಕಾರ್ಯ ಕುಂಟುತ್ತಾ ಸಾಗಿದೆ.
ಒತ್ತುವರಿಯಾದ ಅರಣ್ಯ ಭೂಮಿಯನ್ನು ಸರ್ಕಾರದ ಪರ ಹಿಂಪಡೆಯಲು ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 64(ಎ) ಅಡಿ ತೆರವುಗೊಳಿಸಬೆಕಿದ್ದರೂ ಪ್ರಗತಿ ಮಾತ್ರ ನಿಧಾನಗತಿಯಲ್ಲಿದೆ. ಪ್ರತಿ ತಿಂಗಳ 3 ಹಾಗೂ 18ರಂದು ಆಯಾ ಕ್ಷೇತ್ರಮಟ್ಟದ ಸಿಬ್ಬಂದಿ ಗಸ್ತು ತಿರುಗುವಿಕೆಯನ್ನು ತಂತ್ರಾಂಶದಲ್ಲಿಯೂ ದಾಖಲಿಸಲಾಗುತ್ತಿದೆ.
ಅರಣ್ಯ ಅತಿಕ್ರಮಣ ಪತ್ತೆಹಚ್ಚಲು ಕರ್ನಾಟಕ ಅರಣ್ಯ ಇಲಾಖೆ ಉಪಗ್ರಹ ಕಣ್ಗಾವಲು ವ್ಯವಸ್ಥೆ(ಾರಸ್ಟ್​ ಕವರ್​ ಚೇಂಜ್​ ಅರ್ಲಟ್​ ಸಿಸ್ಟಮ್​) ಎಂಬ ತಾಂತ್ರಿಕ ವ್ಯವಸ್ಥೆ ಕೂಡ ಜಾರಿಯಾಗಿದೆ. ಇದರಿಂದ ಉಪಗ್ರಹ ಆಧಾರಿತ ಚಿತ್ರಗಳ ವಿಶ್ಲೇಷಣೆಯ ಆಧಾರದ ಮೇಲೆ ಕ್ಷೇತ್ರ ಅಧಿಕಾರಿಗಳಿಗೆ ತಕ್ಷಣವೇ ಎಸ್​ಎಂಎಸ್​ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ ಆದರೆ, ಈಗಾಗಲೇ ಒತ್ತುವರಿಯಾಗಿರುವ ಜಮೀನು ತೆರವು ಮೂಲೆಗೆ ಬಿದ್ದಿದೆ.
ಅರಣ್ಯ ಮತ್ತು ಕಂದಾಯ ಇಲಾಖೆ ಜಮೀನು ಗಡಿ ಗುರುತಿಸಲು ಸಾರ್ವಜನಿಕರು ಸಾಕಷ್ಟು ಅರ್ಜಿ ಸಲ್ಲಿದ್ದು ಜಂಟಿ ಮೋಜಣಿ ಕೂಡ ನಡೆಯಬೇಕಿದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು ಕಂದಾಯ ಇಲಾಖೆಯೊಂದಿಗೆ ಜಂಟಿ ಮೋಜಣಿಗೆ ಹಾಜರಾಗಿ ನೆ ಮತ್ತು ಮಹಜರು ವರದಿಯನ್ನು ಸಲ್ಲಿಸುವ ಕಾರ್ಯವೂ ಜಿಲ್ಲೆಯಲ್ಲಿ ಮಂದಗತಿಯಲ್ಲಿದೆ.
ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳಲಾಗಿದೆ, ಒತ್ತುವರಿ ಮಾಡಿದ್ದು ಕಂಡು ಬಂದಿರುವ ಕಡೆಗಳಲ್ಲಿ ಈಗಾಗಲೇ ಪ್ರಕರಣ ಕೂಡ ದಾಖಲಿಸಲಾಗಿದೆ. ಅರಣ್ಯ ಅತಿಕ್ರಮಣ ತಡೆಗೆ ತಂತ್ರಾಂಶದ ನೆರವು ಕೂಡ ಪಡೆಯಲಾಗಿದ್ದು ಶ್ರೀದಲ್ಲಿಯೇ ಎಲ್ಲೆಡೆಯೂ ತೆರವು ಕಾರ್ಯ ಚುರುಗಕುಗೊಳಿಸಲಾಗುವುದು.
ಈಶ್ವರ ಖಂಡ್ರೆ
ಅರಣ್ಯ ಸಚಿವ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net