ಮ್ಯಾನ್ಯೂಯಲ್​ ಸ್ಕ್ಯಾವೆಂಜರ್ಸ್​ ಕುಟುಂಬಗಳ ಪುನರ್ವಸತಿಗೆ ಪಟ್ಟು

 ತುಮಕೂರಿನಲ್ಲಿ ಫಾಯಿ ಕರ್ಮಚಾರಿ ಕಾವಲು ಸಮಿತಿ-ಕರ್ನಾಟಕ ವತಿಯಿಂದ  ಮ್ಯಾನ್ಯೂಯಲ್​ ಸ್ಕ್ಯಾವೆಂರ್ಜಸ್​ಗಳ ಪುನರ್ವಸತಿ ಹಾಗೂ ಜಿಲ್ಲೆಯ ಸ್ವಚ್ಛತಾ ಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದು ಪಡಿಸಿ ನೇರಪಾವತಿ ಜಾರಿಮಾಡಲು ಒತ್ತಾಯಿಸಿ ಪ್ರತಿಭಟಿಸಿ ಜಿಲ್ಲಾಧಿಕಾರಿ ಶುಭಕಲ್ಯಾಣ್​ಗೆ ಮನವಿ ಸಲ್ಲಿಸಲಾಯಿತು. ಕೆ.ಬಿ.ಓಬಳೇಶ್​, ಚಂದ್ರಪ್ಪ, ಮಂಜುನಾಥ್​, ಮಮತಾ, ರಾಮಕೃಷ್ಣ, ವೆಂಕಟೇಶ್​ ಮತ್ತಿತರರು ಇದ್ದರು.
ತುಮಕೂರಿನಲ್ಲಿ ಫಾಯಿ ಕರ್ಮಚಾರಿ ಕಾವಲು ಸಮಿತಿ-ಕರ್ನಾಟಕ ವತಿಯಿಂದ ಮ್ಯಾನ್ಯೂಯಲ್​ ಸ್ಕ್ಯಾವೆಂರ್ಜಸ್​ಗಳ ಪುನರ್ವಸತಿ ಹಾಗೂ ಜಿಲ್ಲೆಯ ಸ್ವಚ್ಛತಾ ಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದು ಪಡಿಸಿ ನೇರಪಾವತಿ ಜಾರಿಮಾಡಲು ಒತ್ತಾಯಿಸಿ ಪ್ರತಿಭಟಿಸಿ ಜಿಲ್ಲಾಧಿಕಾರಿ ಶುಭಕಲ್ಯಾಣ್​ಗೆ ಮನವಿ ಸಲ್ಲಿಸಲಾಯಿತು. ಕೆ.ಬಿ.ಓಬಳೇಶ್​, ಚಂದ್ರಪ್ಪ, ಮಂಜುನಾಥ್​, ಮಮತಾ, ರಾಮಕೃಷ್ಣ, ವೆಂಕಟೇಶ್​ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಫಾಯಿ ಕರ್ಮಚಾರಿ ಕಾವಲು ಸಮಿತಿ ಕರ್ನಾಟಕ
  • ತುಮಕೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ
  • ಸಂಚಾಲಕ ಕೆ.ಬಿ.ಓಬಳೇಶ್​ ಆಗ್ರಹ
ತುಮಕೂರು: ಜಿಲ್ಲೆಯಲ್ಲಿ ಗುರುತಿಸಿರುವ 157 ಮ್ಯಾನ್ಯೂಯಲ್​ ಸ್ಕ್ಯಾವೆಂಜರ್ಸ್​ ಕುಟುಂಬಗಳಿಗೆ ವಸತಿ, ಆರೋಗ್ಯ ಕಾರ್ಡ್​, ಪರ್ಯಾಯ ಉದ್ಯೋಗ ಪ್ರಾರಂಭಿಸಲು ಆರ್ಥಿಕ ನೆರವು ಈ ಕೂಡಲೆ ನೀಡುವಂತೆ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಕರ್ನಾಟಕದ ಸಂಚಾಲಕ ಡಾ.ಕೆ.ಬಿ.ಓಬಳೇಶ್​ ಆಗ್ರಹಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಫಾಯಿ ಕರ್ಮಚಾರಿ ಕಾವಲು ಸಮಿತಿ-ಕರ್ನಾಟಕ ವತಿಯಿಂದ ಶುಕ್ರವಾರ ಸಮೀಕ್ಷೆಯ ಮೂಲಕ ಪತ್ತೆ ಹಚ್ಚಿರುವ ಮ್ಯಾನ್ಯೂಯಲ್​ ಸ್ಕ್ಯಾವೆಂಜರ್ಸ್ ಗಳ ಪುನರ್ವಸತಿ ಹಾಗೂ ಜಿಲ್ಲೆಯ ಸ್ವಚ್ಛತಾ ಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದು ಪಡಿಸಿ ನೇರಪಾವತಿ ಜಾರಿಮಾಡಲು ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದ ನಿಯಮಾವಳಿಗಳ ಅನ್ವಯ ನಮಗೆ ಸವಲತ್ತು ನೀಡಬೇಕೆಂದು ಆಗ್ರಹಿಸಿದರು.
ಸರ್ಕಾರ ಆಯೋಜಿಸಿದ ಪುನರ್ವಸತಿ ವಿತರಣ ಕಾರ್ಯಕ್ರಮದಲ್ಲಿ ನೊಂದಾಯಿಸಿದಂತೆ ಜಿಲ್ಲೆಯಲ್ಲಿ 157 ಮ್ಯಾನ್ಯೂಯಲ್​ ಸ್ಕ್ಯಾವೆಂಜರ್ಸ್​ ಕುಟುಂಬಗಳನ್ನು ಗುರುತಿಸಲಾಗಿದೆ. ಗುರುತಿನ ಚೀಟಿ ಹೊಂದಿರುವ ಈ ಕುಟುಂಬದ ಮಕ್ಕಳ ಶಿಕ್ಷಣದ ಶುಲ್ಕ ಮರುಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಲು ಆದೇಶಿಸಬೇಕು. ಮ್ಯಾನುವೆಲ್​ ಸ್ಕ್ಯಾವೆಂಜರ್​ ಕುಟುಂಬಗಳನ್ನು ಪುನರ್ವಸತಿ ಮಾಡುವಾಗ ಯಾವುದೇ ಕಾರಣಕ್ಕು ಸುಪ್ರಿಂಕೋರ್ಟ್​ ನೀಡಿರುವ 2014ರ ಆದೇಶವನ್ನು ಉಲ್ಲಂಘಿಸಬಾರದು, ಜಿಲ್ಲೆಯ ವಿವಿಧ ಸ್ಥಳಿಯ ಸಂಸ್ಥೆಗಳಲ್ಲಿ ಗುತ್ತಿಗೆ ಅದಾರದಲ್ಲಿ ಸಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಲೋಡರ್ಸ್​, ಕಸದ ವಾಹನ ಚಾಲಕರು, ಳಚರಂಡಿ, ಸ್ವಚ್ಚತಾ ಕಾರ್ಮಿಕರು ಮತ್ತು ಡಂಪಿಂಗ್​ ಯಾರ್ಡ್​ನಲ್ಲಿ ಕಸ ವಿಂಗಡಣೆ ಮಾಡುವ ಕಾರ್ಮಿಕರನ್ನು ನೇರ ಪಾವತಿ ಅಡಿಯಲ್ಲಿ ನೇಮಕಕ್ಕೆ ಸರ್ಕಾರಕ್ಕೆ ಸ್ಥಳಿಯ ಸಂಸ್ಥೆಗಳು ಪ್ರಸ್ತಾವನೆ ಸಲ್ಲಿಸಬೇಕೆಂದು ಓಬಳೇಶ್​ ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ವಿಜಿಲೆನ್ಸ್​ ಸಮಿತಿ ಸಭೆ ಪ್ರತಿ 3 ತಿಂಗಳಿಗೊಮ್ಮೆ ನಡೆಸಬೇಕು. ಅದರೆ ಕಳೆದ 4 ತಿಂಗಳಿಂದ ಸಭೆ ನಡೆಸಿಲ್ಲ. ಸಮಿತಿ ಸಭೆಯನ್ನು ಕೂಡಲೇ ನಡೆಸಿ, ಪೌರಕಾರ್ಮಿಕರ ಅಹವಾಲುಗಳನ್ನು ಆಲಿಸಬೇಕು. ಪೌರಕಾರ್ಮಿಕರು, ಕಸದ ವಾಹನ ಚಾಲಕರು,ಒಳಚರೆಂಡಿ ಸ್ವಚ್ಛತಾ ಕಾರ್ಮಿಕರು ಕೆಲಸ ನಿರ್ವಹಿಸುವಾಗ ಬೆಳಗಿನ ಉಪಹಾರ, ಶೌಚಾಗೃಹ ವ್ಯವಸ್ಥೆ ಸಮಗ್ರವಾಗಿ ಇಲ್ಲ.ಈ ವಿಷಯದಲ್ಲಿ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳು ಪ್ರಮಾಣಿಕವಾಗಿ ಸೇವೆ ನೀಡುವಲ್ಲಿ ವಿಫಲವಾಗುತ್ತಿದ್ದಾರೆ.ಈ ಕೂಡಲೇ ಪಾರದರ್ಶಕವಾಗಿ ವ್ಯವಸ್ಥೆ ಮಾಡಬೇಕು.ಎಲ್ಲಾ ಸ್ವಚ್ಛತಾ ಕಾರ್ಮಿಕರಿಗೆ ಸುರಕ್ಷಿತ ಸಲಕರಣೆಗಳು, ಆರೋಗ್ಯ ವಿಮೆ, ವೈದ್ಯಕಿಯ ಪರೀಕ್ಷೆಗಳನ್ನು ಕಾಲ ಕಾಲಕ್ಕೆ ನಡೆಸುತ್ತಿಲ್ಲ. ಈ ವಿಚಾರದಲ್ಲಿ ಸುಳ್ಳು ವರದಿಗಳನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುತ್ತಿದ್ದು ಇಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಚಂದ್ರಪ್ಪ, ಮಂಜುನಾಥ್​, ಸಿದ್ದಗಂಗಯ್ಯ, ರಾಮಕೃಷ್ಣ, ವೆಂಕಟೇಶ್​, ಮಂಜುನಾಥ್​, ಮಮತಾ ಮತ್ತಿತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net