ಮಧುಗಿರಿ ತಾಲೂಕು ಕಂದಾಯ ಇಲಾಖೆ ಕೆಲಸಕ್ಕೆ ಸಿಬ್ಬಂದಿ ಕೊರತೆ

ತುಮಕೂರು ಜಿಲ್ಲಾಧಿಕಾರಿ ಕಚೇರಿ
ತುಮಕೂರು ಜಿಲ್ಲಾಧಿಕಾರಿ ಕಚೇರಿ
Published on

ಪ್ರಮುಖ ಮುಖ್ಯಾಂಶಗಳು

  • 8 ನೌಕರರ ನಿಯೋಜನೆ ರದ್ದುಪಡಿಸಿದ ಜಿಲ್ಲಾಧಿಕಾರಿ
  • ವಿಧಾನಸೌಧ ಬಿಡಲು ಕೆಲವರ ಮೀನಾಮೇಷ
ತುಮಕೂರು: ಮಧುಗಿರಿ ತಾಲೂಕಿಗೆ ಸ್ಥಳ ನಿಯುಕ್ತಿಗೊಂಡು ನಿಯೋಜನೆಯ ಮೇಲೆ ಇತರೆ ಕಚೇರಿ, ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಂದಾಯ ಇಲಾಖೆಯ 8 ನೌಕರರ ನಿಯೋಜನೆಯನ್ನು ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್​ ರದ್ದುಗೊಳಿಸಿ ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸಬಂಧಪಟ್ಟ ಸಾಕಷ್ಟು ಸಮಸ್ಯೆಗಳಿಗೆ ಸಿಬ್ಬಂದಿ ಕೊರತೆ ಕಾರಣವಾಗಿದೆ. ಮಧುಗಿರಿ ತಾಲೂಕಿನಲ್ಲಿ ಕಂದಾಯ ಇಲಾಖೆ ವಿವಿಧ ವೃಂದಗಳಲ್ಲಿದ್ದ 12 ಸಿಬ್ಬಂದಿ ನಿಯೋಜನೆ, ಅನ್ಯಕರ್ತವ್ಯದ ಮೇಲೆ ಬೇರೆಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ತಾಲೂಕಿನ ಕಂದಾಯ ಇಲಾಖೆ ಕಾರ್ಯಕ್ಕೆ ತಡೆಯಾಗಿದೆ.
ಸಿಬ್ಬಂದಿಗೆ ಕೊರತೆಯಿಂದ ಸಾರ್ವಜನಿಕರಿಗೆ ಕಂದಾಯ ಇಲಾಖೆ ಸೇವಾ, ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸುವಲಿ ಅನಾನುಕೂಲವಾಗುತ್ತಿರುವ ಹಿನ್ನೆಲೆಯಲ್ಲಿ ಈ ಎಲ್ಲಾ ನೌಕರರನ್ನು ಅನ್ಯ ಕರ್ತವ್ಯದಿಂದ ಹಾಗೂ ನಿಯೋಜನೆಯಿಂದ ರದ್ದುಪಡಿಸಿ ಮಧುಗಿರಿ ತಾಲೂಕಿನಲ್ಲಿಯೇ ಕರ್ತವ್ಯ ನಿರ್ವಹಿಸುವಂತೆ ಕ್ರಮವಹಿಸಲು ಶಾಸಕ ಕೆ.ಎನ್​.ರಾಜಣ್ಣ ಆಗ್ರಹಿಸಿದ್ದರು.
ನೌಕರರು ಕೂಡಲೆ ಮೂಲ ಹುದ್ದೆಯಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಿಸಲಾಗಿದೆ, ರಾಜಾಜಿನಗರದ ಪಶ್ಚಿಮ ವಲಯ ಆಹಾರ ಇಲಾಖೆಯಲ್ಲಿರುವ ನವೀನ್​ಕುಮಾರ್​ಗೆ ಕೂಡಲೇ ಮೂಲಸ್ಥಾನಕ್ಕೆ ವರದಿ ಮಾಡಿಕೊಳ್ಳಲು ಸೂಚಿಸಿದೆ. ಆದರೆ, ಸಿಎಂ ಸಚಿವಾಲಯದಲ್ಲಿರುವ ಉಪತಹಸೀಲ್ದಾರ್​ ಟಿ.ಎಸ್​.ಗೌತಮ್​, ವಿಧಾನ ಪರಿಷತ್​ ಸಭಾಪತಿ ಆಪ್ತ ಶಾಖೆಯಲ್ಲಿರುವ ಎ್​ಡಿಎ ಪೂರ್ಣಂದ ಮೆಣಸಗಿ ಅವರ ನಿಯೋಜನೆಯನ್ನು ರದ್ದುಪಡಿಸಲು ಜಿಲ್ಲಾಡಳಿತ ತಡಮಾಡಿದೆ.
ಮಧುಗಿರಿ ತಾಲೂಕು ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸರಿಸುಮಾರು 12 ಜನ ನೌಕರರು ನಿಯೋಜನೆ, ಅನ್ಯಕರ್ತವ್ಯದ ಮೇಲೆ ಸೇವೆ ಸಲ್ಲಿಸುತ್ತಿರುವ ಕಾರಣದಿಂದ ಸಾರ್ವಜನಿಕರಿಗೆ ಕಂದಾಯ ಇಲಾಖೆ ಕೆಲಸಗಳಿಗೆ ಅಡ್ಡಿಯಾಗುತ್ತಿದೆ. ತಾಲೂಕಿಗೆ ನೇಮಕವಾಗಿರುವ ನೌಕರರ ಇಲ್ಲಿಯೇ ಕೆಲಸ ಮಾಡಲು ಕ್ರಮವಹಿಸಲಾಗಿದೆ.
ಕೆ.ಎನ್​.ರಾಜಣ್ಣ
ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net