ಹುಳಿಯಾರು ಠಾಣೆಯಲ್ಲಿ ಲಾಕಪ್ ಡೆತ್!?

ಹುಳಿಯಾರು ಠಾಣೆಗೆ ಮುತ್ತಿಗೆಹಾಕಿದ್ದ ಪ್ರತಿಭಟನಾ ನಿರತರನ್ನು ಜೆ.ಸಿ.ಮಾಧುಸ್ವಾಮಿ ಸಮಾಧಾನಿಸಿದರು.
ಹುಳಿಯಾರು ಠಾಣೆಗೆ ಮುತ್ತಿಗೆಹಾಕಿದ್ದ ಪ್ರತಿಭಟನಾ ನಿರತರನ್ನು ಜೆ.ಸಿ.ಮಾಧುಸ್ವಾಮಿ ಸಮಾಧಾನಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಠಾಣೆಗೆ ಕರೆತಂದಿದ್ದ ಕಾಂತರಾಜು ಸಾವು
  • ಲಾಕಪ್ ಡೆತ್ ಎಂದು ಕುಟುಂಬಸ್ಥರ ಆರೋಪ
  • ತನಿಖೆಗೆ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಆಗ್ರಹ
  • ಸ್ಥಳಕ್ಕೆ ಜಿಲ್ಲಾ‌ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ ದೌಡು
ತುಮಕೂರು: ಯುಗಾದಿ ಹಬ್ಬದಲ್ಲಿ ಜೂಜಾಡುತ್ತಿದ್ದ ಗುಂಪಿನ ಮೇಲೆ ದಾಳಿ ನಡೆಸಿದ ಪೊಲೀಸರು ವಶ ಪಡಿಸಿಕೊಂಡಿದ್ದ ವ್ಯಕ್ತಿ ಠಾಣೆಯಲ್ಲಿ ಸಾವನ್ನಪ್ಪಿರುವ ಘಟನೆ ಹುಳಿಯಾರಿನಲ್ಲಿ ನಡೆದಿದೆ.
ಪೊಲೀಸ್ ಠಾಣೆಯಲ್ಲಿ‌ ಪೊಲೀಸರು ಥಳಿಸಿದ್ದರಿಂದಲೇ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಆರೋಪಿಸಿದ ಕುಟುಂಬಸ್ಥರು, ಗ್ರಾಮಸ್ಥರು ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಯಳನಾಡು ಗ್ರಾಮದ ಗುಡಿಗೌಡ ಕಾಂತರಾಜು(45), ಮೃತ ದುರ್ದೈವಿ,‌ ಯುಗಾದಿ ಹಬ್ಬದ ದಿನ ಯಳನಡು ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುತ್ತಿದ್ದಾರೆ ಎಂದು ಗುರುವಾರ ಸಂಜೆ 6 ಜನರನ್ನ ವಶಕ್ಕೆ ಪಡೆದಿದ್ದ ಪೊಲೀಸರು ಪೊಲೀಸ್ ಠಾಣೆಗೆ ಕರೆತಂದಿದ್ದರು.
ಪೊಲೀಸರು ಬಂಧಿಸುವಾಗಲೇ ಆರೋಗ್ಯ ಸರಿ ಇಲ್ಲದೆ ವಾಂತಿ ಕೂಡ ಮಾಡಿಕೊಂಡಿದ್ದ ಕಾಂತರಾಜು ಠಾಣೆಯಲ್ಲಿ ಬಂದು ಮಲಗಿದ್ದರೂ ಸರಿಯಾದ ಸಮಯಕ್ಕೆ ಅವರನ್ನು ಆಸ್ಪತ್ರೆಗೆ ಕರೆದೊದ್ದು ಚಿಕಿತ್ಸೆ ಕೊಡಿಸುವಲ್ಲಿ ಉದಾಸೀನ ಮಾಡಿರುವುದು ಸಾವಿಗೆ ಕಾರಣ ಎಂದು ಸ್ಥಳೀಯರು ದೂರಿದರು.
ಕಾಂತರಾಜು ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿದ ಸ್ಥಳೀಯರು ಠಾಣೆಯ ಮುಂದೆ ಜಮಾಯಿಸಿ ಘೋಷಣೆಗಳನ್ನು ಕೂಗಿದ್ದರಿಂದ ರಾತ್ರಿ 11ರ ಸಮಯದಲ್ಲಿಯೇ ಸ್ಥಳಕ್ಕೆ ದೌಡಾಯಿಸೊದ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ತನಿಖೆ ನಡೆಸುವ ಭರವಸೆ ನೀಡಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಪೊಲೀಸ್ ಠಾಣೆಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ್ದ ವಿಷಯ ತಿಳಿದ ಮಾಜಿ‌‌ ಸಚಿವ ಜೆ.ಸಿ.ಮಾಧುಸ್ವಾಮಿ ಕೂಡ ಠಾಣೆಗೆ ಆಗಮಿಸಿ ತನಿಖೆಗೆ ಆಗ್ರಹಿಸಿದರು, ಕಾನೂನು ಸುವ್ಯವಸ್ಥೆ ಹಾಳಾಗಿರುವ ಬಗ್ಗೆ ಆಕ್ರೋಶ ಹೊರಹಾಕಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net