ವಿಸ್ಸೆಸ್ಸೆನ್​ ಸದಸ್ಯರಿಗೆ ಸಾಲ ಸೌಲಭ್ಯ

Loan facility for Visessenn members
Loan facility for Visessenn members
Published on
ತುರುವೇಕೆರೆ: ತಾಲೂಕಿನಲ್ಲಿರುವ 25 ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳಲ್ಲಿರುವ ಸದಸ್ಯರಿಗೆ ಸುಮಾರು 8.90 ಕೋಟಿ ರೂ. ಸಾಲವನ್ನು ವಿತರಣೆ ಮಾಡಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್​ನ ಜಿಲ್ಲಾ ನಿರ್ದೇಶಕ ಕೊಡಗೀಹಳ್ಳಿ ಸಿದ್ದಲಿಂಗಪ್ಪ ತಿಳಿಸಿದರು.
ತಾಲೂಕಿನ ಡಿ.ಕಲ್ಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ನೀಡಲಾದ ಕೆಸಿಸಿ ಸಾಲ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಕೆ.ಎನ್​.ರಾಜಣ್ಣ ಅವರು ನಮ್ಮ ತಾಲೂಕಿನ ಮೇಲೆ ಸಾಕಷ್ಟು ಅಭಿಮಾನ ಇಟ್ಟುಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ವಿವಿಧ ಕಾರಣಗಳಿಂದಾಗಿ ಸಾಲ ವಿತರಣೆ ಮಾಡಿರಲಿಲ್ಲ. ಆದರೆ ಈ ಬಾರಿ ಕೆ ಎನ್​.ರಾಜಣ್ಣ ಅವರು ಮನಸ್ಸು ಮಾಡಿದ್ದರಿಂದ ತಾಲೂಕಿನ ಎಲ್ಲ 25 ಸಂಘಗಳಿಗೂ ಸಾಲ ನೀಡಲಾಗಿದೆ ಎಂದರು.
ಈಗಾಗಲೇ ತಾಲೂಕಿನ ದಂಡಿನಶಿವರ, ಮಾಯಸಂದ್ರ ಮತ್ತು ತುರುವೇಕೆರೆಯಲ್ಲಿ ಶಾಖೆ ತೆರೆಯಲಾಗಿದೆ. ದಬ್ಬೇಘಟ್ಟದಲ್ಲಿ ನೂತನವಾಗಿ ಡಿಸಿಸಿ ಬ್ಯಾಂಕ್​ ಶಾಖೆ ತೆರೆಯುವ ಪ್ರಯತ್ನ ಸಾಗಿದೆ. ಮಾಯಸಂದ್ರದಲ್ಲಿ ಬಾಡಿಗೆ ಕಟ್ಟಡದಲ್ಲಿ ಬ್ಯಾಂಕ್​ ನಡೆಯುತ್ತಿದೆ. ಅಲ್ಲಿ ಸ್ವಂತ ಕಟ್ಟಡ ಕಟ್ಟಲು ನಿವೇಶನ ಕೊಳ್ಳುವ ಪ್ರಕ್ರಿಯೆ ಸಾಗಿದೆ ಎಂದರು.
ಡಿ.ಕಲ್ಕೆರೆ ಸಂಘದ ಅಧ್ಯಕ್ಷ ಡಿ.ಪಿ.ರಾಜು ಮಾತನಾಡಿ, ತಮ್ಮ ಸಂಘದಲ್ಲಿ ಒಟ್ಟು 1275 ಮಂದಿ ಷೇರುದಾರರು ಇದ್ದಾರೆ. ಸದ್ಯ ಡಿಸಿಸಿ ಬ್ಯಾಂಕ್​ನಿಂದ ಸುಮಾರು 42.52 ಲಕ್ಷ ರೂ. ಸಾಲವನ್ನು ಬಿಡುಗಡೆ ಮಾಡಲಾಗಿದೆ. ಇವರಲ್ಲಿ 135 ಮಂದಿಗೆ ಸಾಲ ವಿತರಣೆ ಮಾಡಲಾಗುತ್ತಿದೆ. ಇದುವರೆಗೂ ಸುಮಾರು 3.33 ಕೋಟಿ ರೂ. ಕೆಸಿಸಿ ಸಾಲವನ್ನು ನಮ್ಮ ಸಂಘದಿಂದ ನೀಡಲಾಗಿದೆ ಎಂದರು.
ನಿರ್ದೇಶಕರಾದ ಜಿ.ಎಸ್​.ರಾಮಲಿಂಗೇಗೌಡ, ಎ.ಬಿ.ಉಮೇಶ್​, ಚಿಕ್ಕನಾಗಯ್ಯ, ಪಾಂಡುರಂಗನಾಥ್​, ನಂಜಪ್ಪ, ವನಜಾ, ಲಕ್ಷ್ಮಮ್ಮ, ವಿ.ಕೆ.ಪುಟ್ಟಸ್ವಾಮಿಗೌಡ, ಜಿ.ಎಸ್​.ಪ್ರಸನ್ನ, ಮೇಲ್ವಿಚಾರಕರಾದ ಭರತ್​, ಕೆ.ಎಚ್​.ಹರೀಶ್​, ಕಾರ್ಯನಿರ್ವಾಹಣಾಧಿಕಾರಿ ಕೆ.ವಿ.ನಾಗರಾಜು, ಮಾರಾಟ ಗುಮಾಸ್ತ ಪಂಚಾಕ್ಷರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net