ತುಮಕೂರು ರೈಲ್ವೆ ನಿಲ್ದಾಣದಲ್ಲಿ ಪುಸ್ತಕದ ಗೂಡು

ಪುಸ್ತಕದ ಗೂಡು
ಪುಸ್ತಕದ ಗೂಡು
Published on

ಪ್ರಮುಖ ಮುಖ್ಯಾಂಶಗಳು

  • ಓದುವ ಅಭಿರುಚಿ ಬೆಳಸುವ
  • ಗ್ರಂಥಪಾಲಕಿ ಪರಿಮಳ ಆಶಯ
  • ಮೊಬೈಲ್​ ಮೋಹ ಬಿಡಿ, ಪುಸ್ತಕ ಓದಿ
ವಿಶೇಷ ವರದಿ
ತುಮಕೂರು: "ಒಂದು ಕ್ಷಣ ಮೊಬೈಲ್​ ಪಕಕ್ಕಿರಿಸಿ, ಕೈನಲ್ಲಿ ಪುಸ್ತಕ ಹಿಡಿದು ಓದಬೇಕೆಂಬುದು'& ಗ್ರಂಥಪಾಲಕಿ ಪರಿಮಳಸತೀಶ್​ ಅವರ "ಪುಸ್ತಕದ ಗೂಡು' ಸ್ಥಾಪನೆ ಹಿಂದಿನ ಉದ್ದೇಶ!
ಓದುವ ಅಭಿರುಚಿ ಬೆಳೆಸುವ, ಉಳಿಸುವ ಆಶಯ ಹೊಂದಿರುವ ಪರಿಮಳ ಅವರು "ಪುಸ್ತಕದ ಗೂಡು' ಸ್ಥಾಪನೆಗೆ ಆಯ್ದುಕೊಂಡ ಜಾಗ ತುಮಕೂರು ರೈಲ್ವೆ ನಿಲ್ದಾಣ. ಸದಾ ರೈಲು, ಜನಜಂಗುಳಿಯಿಂದ ಗಿಜಿಗಿಡುವ ರೈಲು ನಿಲ್ದಾಣದಲ್ಲಿ ಮೊಬೈಲ್​ಗೆ ಮೊರೆ ಹೋಗುವವರೆ ಎಲ್ಲೆಡೆ ತುಂಬಿರುತ್ತಾರೆ. ಅರೆಕ್ಷಣ ಮೊಬೈಲ್​ ಮೋಹದಿಂದ ದೂರವಿರಿಸಿ ಅವರಲ್ಲಿ ಪುಸ್ತಕ ಓದುವ ಅಭಿರುಚಿ ಬೆಳೆಸುವುದು "ಪುಸ್ತಕ ಗೂಡ' ಉದ್ದೇಶವಾಗಿದೆ.
ಲಿಟ್ಲ ಫ್ರೀ ಲೈಬ್ರೆರಿ: ಅಮೆರಿಕಾ ಸೇರಿದಂತೆ ಐರೋಪ್ಯ ರಾಷ್ಟ್ರಗಳಲ್ಲಿ ಬೀದಿಬದಿಯಲ್ಲಿ ಲಿಟ್ಲ ಫ್ರೀ ಲೈಬ್ರೆರಿಗಳನ್ನು ಕಾಣಬಹುದಾಗಿದ್ದು ಇಲ್ಲಿ ಯಾರು ಬೇಕಾದರು ಪುಸ್ತಕಗಳನ್ನು ಉಚಿತವಾಗಿ ತೆಗೆದುಕೊಂಡು ಓದಿ ಮತ್ತೆ ಅಲ್ಲೇ ಇಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಇಂತಹ ಒಂದು ವಿಶೇಷ ಆಸಕ್ತಿದಾಯಕ ವರದಿಯನ್ನು ವಾರಪತ್ರಿಕೆಯೊಂದರಲ್ಲಿ ಓದಿದ ಸಿದ್ದಗಂಗಾ ಕಾಲೇಜಿನ ಗ್ರಂಥಪಾಲಕಿ ಪರಿಮಳಸತೀಶ್​ ಇತಂಹದೊಂದು "ಪುಸ್ತಕ ಗೂಡು' ಸ್ಥಾಪನೆಗೆ ಮುಂದಾಗಿದ್ದಾರೆ. ಪುಸ್ತಕವನ್ನು ಈ ಪುಟ್ಟ ಗೂಡಿಗೆ ಉಚಿತವಾಗಿ ಕೊಡುಗೆ ಕೂಡ ಕೊಡಬಹುದಾಗಿದೆ. ರೈಲಿನಲ್ಲಿ ಪಯಣಿಸುವರ ತೆಗೆದುಕೊಂಡು ಹೋಗಿ ಮತ್ತೆ ಅಲ್ಲೇ ತಂದಿಡುವ ಅವಕಾಶ ಸಹ ಇದೆ. ಇದು ಪುಸ್ತಕ ಓದುವ ಅಭಿರುಚಿ ಬೆಳೆಸುವ ಅರಿವಿನ ಪುಟ್ಟ ಗೂಡಾಗಿದೆ.
ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಲ್ಲಿ ಓದುವ ಅಭಿರುಚಿ ಉಳಿಸುವ, ಬೆಳೆಸುವ ಉದ್ದೇಶದಿಂದ "ಪುಸ್ತಕದ ಗೂಡು' ಪುಟ್ಟ ಉಚಿತ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ. ವಾರಪತ್ರಿಕೆಯೊಂದರಲ್ಲಿ ಓದಿದ ವಿಶೇಷ ವರದಿ ಪ್ರೇರಣೆಯಿಂದ ಹಾಗೂ ಗ್ರಂಥಪಾಲಕಿಯಾಗಿ ಯುವ ಪೀಳಿಗೆಯಲ್ಲಿ ಓದಿನ ಅಭಿರುಚಿ ಬೆಳೆಸುವ ಆಶಯದೊಂದಿಗೆ ಪುಸ್ತಕದ ಗೂಡು ಸ್ಥಾಪಿಸಲಾಗಿದೆ.
ಪರಿಮಳ
ಗ್ರಂಥಪಾಲಕಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net