ಭಕ್ತಿ ಭಾವನೆಗಳಿದ್ದರೆ ಬದುಕು ಸಾರ್ಥಕ

Life is worthwhile if you have devotional feelings.
Life is worthwhile if you have devotional feelings.
Published on
ಬರಗೂರು: ಆಧುನಿಕತೆ ಬದಲಾಗುತ್ತಿರುವ ಸನ್ನಿವೇಶದಲ್ಲಿ ಭಕ್ತಿ ಭಾವನೆಗಳನ್ನು ಮೈಗೂಡಿಸಿಕೊಂಡಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಶ್ರೀಕ್ಷೇತ್ರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಶಿರಾ ತಾಲೂಕಿನ ಬರಗೂರಿನಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ಆಶೀರ್ವಚನ ನೀಡಿ, ಅಮೆರಿಕ ದೇಶದ ಶ್ರೇಷ್ಠ ಅಧ್ಯಕ್ಷರಾಗಿದ್ದ ಬರಾಕ್​ ಒಬಾಮಾ ಹೇಳುವಂತೆ ನನ್ನ ಜೇಬಿನಲ್ಲಿ ಶ್ರೀ ಆಂಜನೇಯಸ್ವಾಮಿ ಯಂತ್ರವನ್ನು ಯಾವಾಗಲೂ ಇಟ್ಟುಕೊಂಡಿರುತ್ತೇನೆ. ನನಗೆ ಯಾವುದೇ ಕಷ್ಟಗಳು ಬಂದಾಗ ಆಂಜನೇಯ ಯಂತ್ರವನ್ನು ನೋಡಿ ಸ್ಮರಿಸಿಕೊಳ್ಳತ್ತೇನೆ ಎಂದರು.
ಆಂಜನೇಯನ ಭಕ್ತರಾಗಿ ನಿಸ್ವಾರ್ಥ ಸೇವೆ ಮತ್ತು ಭಕ್ತಿ ಭಾವನೆಗಳನ್ನು ಬೆಳೆಸಿಕೊಳ್ಳುವ ಮೂಲಕ ಮುಕ್ತಿ ಪಡೆಯಬಹುದು, ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ. ವಿದ್ಯಾವಂತ ಮಕ್ಕಳಿಗೆ ಕೌಶಲ ತರಬೇತಿ ನೀಡಿ. ಉದ್ಯೋಗ ಪಡೆದ ಮಕ್ಕಳು ತಂದೆ&ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದರು.
ತಾಲೂಕು ಕುಂಚಿಟಿಗರ ಸಂಘದ ನಿರ್ದೇಶಕ ಬಿ.ಹಾಲುಗುಂಡೇಗೌಡ ಮಾತನಾಡಿ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬರಗೂರಿನ ಮೂಲಕ ಬೇರೆ ಕಾರ್ಯಕ್ರಮ ನಿಮಿತ್ತ ತೆರಳುತ್ತಿದ್ದು, ಇದನ್ನು ಮನಗಂಡು ಸ್ವಾಮಿಗಳನ್ನು ಬರಗೂರಿನಲ್ಲಿ ಸ್ವಾಗತಿಸಿ ಸದ್ಭಕ್ತರಿಗೆ ಆಶೀರ್ವಚನ ನೀಡುವ ಕುರಿತಾಗಿ ಕೇಳಿಕೊಂಡಾಗ ಅವರು ಸಮ್ಮತಿಸಿ ಬರಗೂರಿನ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ ಎಂದರು.
ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶ್ರೀಮಠದ ಕಾರ್ಯದರ್ಶಿ ಮಂಗಣ್ಣಸ್ವಾಮಿ, ವಿಧಾನ ಪರಿಷತ್​ ಸದಸ್ಯ ಚಿದಾನಂದ ಎಂ.ಗೌಡ, ತುಮುಲ್​ ನಿರ್ದೇಶಕ ಎಸ್​.ಆರ್​.ಗೌಡ, * ಆದಿಚುಂಚನಗಿರಿ ಪೊಲೀಸ್​ ಎಸ್​ಪಿ ಪುರುಷೋತ್ತಮ್​, ಆಂಧ್ರಪ್ರದೇಶ ಮಾಜಿ ಸಚಿವ ನರಸೇಗೌಡ, ಮುಖಂಡರಾದ ಬಿ.ಬೊಪ್ಪಣ್ಣ, ಕೃಷ್ಣಗೌಡ, ಪುನೀತ್​ ಗೌಡ, ಉಮೇಶ್​ ಗೌಡ, ಸತೀಶ್​ ರಂಗಾಪುರ ತಿಪ್ಪೇಸ್ವಾಮಿ, ಕುಳ್ಳ ಶ್ರೀಧರ್​, ವಿಎಸ್​ ಎಸ್​ಎನ್​ ಕಾರ್ಯನಿರ್ವಾಹಕ ತಿಮ್ಮರಾಜು, ಬಿ.ಎಸ್​.ಸಿದ್ದೇಶ್​, ದಯಾನಂದಗೌಡ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net