ವ್ಯಸನಮುಕ್ತ ಭಾರತ ನಿರ್ಮಿಸೋಣ

Let's build an addiction-free India.
Let's build an addiction-free India.
Published on
ತಿಪಟೂರು: ವ್ಯಸನದಿಂದ ಮುಕ್ತಿ, ಜೀವನಕ್ಕೆ ಶಕ್ತಿ, ಡ್ರಗ್ಸ್​ ಬೇಡ, ಜೀವನಬೇಕು ಎಂಬ ಪ್ರತಿಜ್ಞೆಯನ್ನು ಸ್ವೀಕರಿಸುವ ಮೂಲಕ ವ್ಯಸನಮುಕ್ತ ಭಾರತವನ್ನು ನಿರ್ಮಾಣ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಉಪವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ ಕರೆ ನೀಡಿದರು.
ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ತಿಪಟೂರು ಉಪವಿಭಾಗ, ತಿಪಟೂರು ನಗರ ಪೊಲೀಸ್​ ಠಾಣೆಯಿಂದ ಆಯೋಜಿಸಿದ್ದ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಡಿವೈಎಸ್​ಪಿ ಉಮೇಶ್​ ಮಾತನಾಡಿ, ದೈಹಿಕ, ಮಾನಸಿಕ ಸ್ವಾಸ್ಥ್ಯಕ್ಕೆ ಮಾದಕ ವಸ್ತುಗಳು ಹೇಗೆ ಹಾನಿಕಾರಕ ಎಂಬುದನ್ನು ವಿವರಿಸಿ, ಮಾದಕ ವಸ್ತುಗಳ ಉತ್ಪಾದನೆ, ಸೇವನೆ, ಹಾಗೂ ಸಾಗಾಣಿಕೆಯ ಮಾಹಿತಿ ತಿಳಿದಾಗ ತಕ್ಷಣ 1933ಕ್ಕೆ ಕರೆ ಮಾಡುವಂತೆ ತಿಳಿಸಿದರು.
ಪ್ರಾಂಶುಪಾಲ ಎಂ.ಡಿ.ಶಿವಕುಮಾರ್​ ಮಾತನಾಡಿ, ಮಾದಕ ದ್ರವ್ಯ ಸೇವನೆ ಸಾಮಾಜಿಕ ಪಿಡುಗಾಗಿದ್ದು, ಈ ಸಮಸ್ಯೆಯನ್ನು ಬೇರು ಸಮೇತ ಕೀಳಬೇಕು. ಮಾದಕ ವಸ್ತು ಸೇವನೆ ಇಂದು ಸಮಾಜದ ದೊಡ್ಡ ಪಿಡುಗಾಗಿದೆ. ಈ ಸಮಸ್ಯೆಯನ್ನು ಬೇರು ಸಮೇತ ಕೀಳಬೇಕಾಗಿದೆ. ಯುವಕರೇ ನಮ್ಮ ದೇಶದ ಬೆನ್ನೆಲುಬು, ಆದ್ದರಿಂದ ಯುವಕರು ಇಂತಹ ಕೆಟ್ಟ ಚಟಗಳಿಗೆ ಬಲಿಯಾಗದೇ ಉತ್ತಮ ಆರೋಗ್ಯಕರ ಬದುಕನ್ನು ರೂಪಿಸಿಕೊಂಡು ಸಮಾಜದ ಸತ್ಪ್ರಜೆಗಳಾಗಿ ಬಾಳಿ ಎಂದರು.
ನಗರಾಯುಕ್ತ ವಿಶ್ವೇಶ್ವರ ಬದರಗಡೆ ಅವರು ನಗರಸಭೆ ಕೈಗೊಂಡಿರುವ ಸ್ವಚ್ಚತಾ ಅಭಿಯಾನದ ಬಗ್ಗೆ ತಿಳಿಸಿದರು. ಉಪನ್ಯಾಸಕರಾದ ಹರೀಶ್​, ಮಾಲಾ, ಷಡಕ್ಷರಿ, ನಗರಠಾಣೆ, ಗ್ರಾಮಾಂತರ ಠಾಣೆ, ನೊಣವಿನಕೆರೆ ಹಾಗೂ ಕಿಬ್ಬನಹಳ್ಳಿ ಠಾಣೆಗಳ ಪೊಲೀಸ್​ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net