ಉಪ ಅರಣ್ಯ ಸಂರಕ್ಷಣಾಧಿಕಾರಿ ಚಿರತೆ ಟಾಸ್ಕ್ ಪೋರ್ಸ್ ಮುಖ್ಯಸ್ಥರಾಗಲಿದ್ದು ತಲಾ ಒಬ್ಬರು ಎಸಿಎಫ್ , ಪಶುವೈದ್ಯರು, ಒಬ್ಬ ವಲಯ ಅರಣ್ಯಾಧಿಕಾರಿ, ವಾಹನ ಚಾಲಕ ಇರಲಿದ್ದಾರೆ. ಈ ಟಾಸ್ಕ್ ಪೋರ್ಸ್ಗೆ ಬೋನು ಹೊಯ್ಯವು ಒಂದು ವಿಶೇಷ ವಿನ್ಯಾಸದ ವಾಹನ, ಟ್ರಾಂಕ್ವಲೈಸರ್ ಗನ್ (ಅರವಳಿಕೆ ನೀಡುವ ), ಅರವಳಿಕೆ ಕಿಟ್ ಹಾಗೂ ಟಾಸ್ಕ್ ಪೋರ್ಸ್ ಪಡೆ ಸಿಬ್ಬಂದಿಗೆ ಸುರಕ್ಷತಾ ಉಪಕರಣಗಳ (ಎಲ್ಬೋ ಗಾರ್ಡ್, ಗ್ಲೌಸ್, ಹೆಲ್ಮೆಟ್) ಅವಶ್ಯಕತೆ ಇದೆ. ಚಿರತೆ ಹಾವಳಿ ಹೆಚ್ಚಿರುವ ಕಡೆ ಈ ಟಾಸ್ಕ್ ಪೋರ್ಸ್ ಗಸ್ತು ತಿರುಗಲಿದೆ. ಚಿರತೆ ಸೆರೆಹಿಡಿಯುವ ಹೊಣೆ ಟಾಸ್ಕ್ ಪೋರ್ಸ್ನದ್ದಾಗಿರಲಿದೆ.