ಈ ವೇಳೆ ದೇವಾಲಯ ಹಿಂಭಾಗದ ಬಂಡೆ ತುದಿಯಲ್ಲಿ ನಿಂತು ಬೆಂಗಳೂರಿನ ಕೆಲವು ಟೆಕ್ಕಿಗಳಿಗೆ ದೇವರಾಯದುರ್ಗದ ಸೊಬಗನ್ನು ಇಂಗ್ಲೀಷ್ನಲ್ಲಿ ವಿವರಿಸುತ್ತಾ ಮೊಬೈಲ್ನಲ್ಲಿ ಸೆಲ್ಫಿ ವಿಡಿಯೋ ಮಾಡಿಕೊಳ್ಳುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. 40 ಅಡಿಯಷ್ಟು ಆಳ ಇದ್ದು ಕೆಳಭಾಗದಲ್ಲಿ ಮರಗಳು, ಬೃಹತ್ ಪೊದೆ ಇದ್ದು ಅದೃಷ್ಟವಶಾತ್ ಯಾವುದೇ ತೀವ್ರತರವಾದ ಪೆಟ್ಟಾಗಲಿ, ಕೈಕಾಲು ಮುರಿದಿರಲಿಲ್ಲ.