ಪಾಲಕರು ಪಿಯುಸಿ ಹಂತಕ್ಕೆ ಬಂದಾಗ ಸಾವಿರಾರು ರೂ. ವೆಚ್ಚ ಮಾಡಿ ಪಠ್ಯಪುಸ್ತಕಗಳನ್ನು ಖರೀದಿಸಬೇಕಾಗಿತ್ತು. ಆದರೆ, ಈ ಬಾರಿ ಸರ್ಕಾರ ವಿದ್ಯಾರ್ಥಿ ಕಲ್ಯಾಣದತ್ತ ಮಹತ್ವದ ಹೆಜ್ಜೆಯಿಟ್ಟು, ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತ ಪುಸ್ತಕ ಭಾಗ್ಯ ಕಲ್ಪಿಸಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಮತ್ತು ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಸರ್ಕಾರದ ಈ ನಿರ್ಧಾರ ವರದಾನವಾಗಿ ಪರಿಣಮಿಸಿದೆ. ಸರ್ಕಾರ ನೀಡುತ್ತಿರುವ ಈ ಸೌಲಭ್ಯವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಬೇಕು ಎಂದು ತಿಳಿಸಿದರು.