19 ರಂದು ಕಪ್ಪು ಬಾವುಟ ಪ್ರದರ್ಶನಕ್ಕೆ ನಿರ್ಧಾರ

ತುಮಕೂರಿನಲ್ಲಿ ಕೆಎಸ್​ಆರ್​ಟಿಸಿ ಸ್ಟಾಫ್ ಆ್ಯಂಡ್​ ವರ್ಕರ್ಸ್​ ಫೆಡರೇಷನ್​ ಅಧ್ಯಕ್ಷ ಜ್ಯೋತಿಅನಂತಸುಬ್ಬರಾವ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಿ.ಎ.ವಿಜಯಭಾಸ್ಕರ್​, ಬಿ.ಜಯದೇವರಾಜೇ ಅರಸು, ಎನ್​.ಆರ್​.ದೇವರಾಜೇ ಅರಸು, ಎಚ್​.ಡಿ.ರೇವಪ್ಪ, ಎಚ್​.ಎಸ್​.ಮಂಜುನಾಥ್​, ಗಿರೀಶ್​ ಮತ್ತಿತರರು ಇದ್ದರು.
ತುಮಕೂರಿನಲ್ಲಿ ಕೆಎಸ್​ಆರ್​ಟಿಸಿ ಸ್ಟಾಫ್ ಆ್ಯಂಡ್​ ವರ್ಕರ್ಸ್​ ಫೆಡರೇಷನ್​ ಅಧ್ಯಕ್ಷ ಜ್ಯೋತಿಅನಂತಸುಬ್ಬರಾವ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಿ.ಎ.ವಿಜಯಭಾಸ್ಕರ್​, ಬಿ.ಜಯದೇವರಾಜೇ ಅರಸು, ಎನ್​.ಆರ್​.ದೇವರಾಜೇ ಅರಸು, ಎಚ್​.ಡಿ.ರೇವಪ್ಪ, ಎಚ್​.ಎಸ್​.ಮಂಜುನಾಥ್​, ಗಿರೀಶ್​ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 20 ರಂದು ಅರ್ನಿದಿಷ್ಟಾವಧಿ ಮುಷ್ಕರ
  • ಸರ್ಕಾರದ ಸಾಧನಾ ಸಮಾವೇಶದಲ್ಲಿ ಪ್ರತಿಭಟನೆ ಎಚ್ಚರಿಕೆ
  • ಕೆಎಸ್​ಆರ್​ಟಿಸಿ ಸ್ಟಾಫ್ ಆ್ಯಂಡ್​ ವರ್ಕರ್ಸ್​ ಫೆಡರೇಷನ್
ತುಮಕೂರು: ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಮೀನ ಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ತುಮಕೂರಿನಲ್ಲಿ ಮೇ 19ರಂದು ನಡೆಯಲಿರುವ ಸಾಧನಾ ಸಮಾವೇಶ ಸಂದರ್ಭದಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಕೆಎಸ್​ಆರ್​ಟಿಸಿ ಸ್ಟಾಫ್ ಆ್ಯಂಡ್​ ವರ್ಕರ್ಸ್​ ಫೆಡರೇಷನ್ಎಚ್ಚರಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೆಡರೇಷನ್ನ ಪ್ರಧಾನಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ್​ ಅವರು ಕಳೆದ ಮೂರು ವರ್ಷದಿಂದ ವೇತನ ಪರಿಷ್ಕರಣೆಗೆ ಸಮಪರ್ಕವಾದ ಒಪ್ಪಿಗೆ ನೀಡಿಲ್ಲದಿರುವುದನ್ನು ವಿರೋಧಿಸಿ ಮೇ 20 ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ಕರೆನೀಡಿರುವ ಅರ್ನಿದಿಷ್ಟಾವಧಿ ಮುಷ್ಕರವನ್ನು ಯಶಸ್ವಿಗೊಳಿಸಲು ಎಲ್ಲಾ ನಾಲ್ಕು ಸಾರಿಗೆ ನಿಗಮಗಳು ಬೆಂಬಲಿಸುವಂತೆ ಮನವಿ ಮಾಡಿದರು.
ರಾಜ್ಯ ಸರ್ಕಾರ ಮೇ 19 ರಂದು ತುಮಕೂರಿನಲ್ಲಿ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದು ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದದ್ದು ಶಕ್ತಿ ಯೋಜನೆ. ಈ ಯೋಜನೆ ಯಶಸ್ಸಿ ಹಿಂದೆ ಸಾರಿಗೆ ನೌಕರರ ಪರಿಶ್ರಮ ಇದೆ. ಮೆಕ್ಯಾನಿಕ್​ನಿಂದ ಬಸ್​ ಚಾಲಕ, ನಿರ್ವಾಹಕರು "ಶಕ್ತಿ' ಯೋಜನೆ ಯಶಸ್ಸಿನ ರೂವಾರಿಗಳೆನಿಸಿದ್ದಾರೆ. ಹಾಗಾಗಿ, ನಮ್ಮ ಬೇಡಿಕೆಗಳಿಗೆ ಸ್ಪಂದಿಸದ ಸರ್ಕಾರಕ್ಕೆ ಬಿಸಿ ಮುಟ್ಟಿಸಲು 19 ರಂದು ಸಿಎಂ ಸಿದ್ದರಾಮಯ್ಯ ಭಾಗವಹಿಸುವ ಸಮಾವೇಶದಲ್ಲಿ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ತಿಳಿಸಿದರು.
ರಾಜ್ಯ ಸರ್ಕಾರವು ಏಕಪಯವಾಗಿ ಸಾರಿಗೆ ನೌಕರರ ವೇತನ ಪರಿಷ್ಕರಣೆ ನಿರ್ಧಾರವನ್ನು 1-1-2025ರಂದು ಕೈಗೊಂಡಿದ್ದು ಶೇ.12.5 ವೇತನ ಪರಿಷ್ಕರಣೆಯಿಂದ ಈ ಹಿಂದೆ ನಿವೃತ್ತಿ ಹೊಂದಿದ ಸುಮಾರು 9 ಸಾವಿರ ನೌಕರರಿಗೆ ಅನ್ಯಾಯವಾಗಿದೆ. ಹಾಗಾಗಿ, ಸರ್ಕಾರದ ಈ ನಿರ್ಧಾರವನ್ನು ಜಂಟಿ ಕ್ರಿಯಾ ಸಮಿತಿ ಖಂಡಿಸಿದ್ದು ನಮಗೆ ಬಾಕಿ ಬರಬೇಕಿರುವ 600 ಕೋಟಿಯಷ್ಟು ವ್ಯತ್ಯಾಸದ ಹಣವನ್ನು ನೀಡಬೇಕು. ಜಂಟಿಕ್ರಿಯಾಸಮಿತಿ ಕರೆನೀಡಿರುವ ಅರ್ನಿದಿಷ್ಟಾವಧಿ ಮುಷ್ಕರವನ್ನು ಯಾವುದೇ ಕಾರಣಕ್ಕು ಹಿಂಪಡೆಯುವುದಿಲ್ಲ ಎಂದು ಕೆಎಸ್​ಆರ್​ಟಿಸಿ ಸ್ಟಾಫ್ ಆ್ಯಂಡ್​ ವರ್ಕರ್ಸ್​ ಫೆಡರೇಷನ್​ ಅಧ್ಯೆ ಜ್ಯೋತಿಅನಂತಸುಬ್ಬರಾವ್​ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿಯ ಬಿ.ಜಯದೇವರಾಜೇ ಅರಸು, ಎನ್​.ಆರ್​.ದೇವರಾಜೇ ಅರಸು, ರಾಜ್ಯ ಸಾರಿಗೆ ನೌಕರರ ಫೆಡರೇಷನ್​ (ಸಿಐಟಿಯು) ಎಚ್​.ಡಿ.ರೇವಪ್ಪ, ಎಚ್​.ಎಸ್.ಮಂಜುನಾಥ್​, ಸಿಐಟಿಯು ಮುಖಂಡ ಗಿರೀಶ್​ ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net