ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ ಕೆ.ಎನ್.ರಾಜಣ್ಣ, ಜಿಲ್ಲೆಯ ಹಿತಾಸಕ್ತಿಗೆ ನಡೆಯುವ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಘೋಷಿಸಿದ್ದಾರೆ. ಮೂಡಿಗೆರೆ, ಸಕಲೇಶಪುರ ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹೇಮಾವತಿ ನೀರಿಗೆ ತೊಂದರೆಯಾಗದು ಎಂಬ ವಿಶ್ವಾಸವಿದೆ. ಕಬಿನಿ, ಕೆಆರ್ಎಸ್ ಕೂಡ ತುಂಬುವ ಸಾಧ್ಯತೆಯಿದ್ದು, ತಮಿಳುನಾಡಿಗೂ ನೀರು ಹರಿಸಬಹುದು. ಜಿಲ್ಲೆಯ ಜನರು ಹೇಮಾವತಿ ನೀರು ಅವಲಂಬಿಸಿದ್ದು ನೀರಿಗೆ ತೊಂದರೆಯಾಗದು ಎಂದರು.