ಬೆಳ್ಳಾವಿ ಹೋಬಳಿ ನೆಲಹಾಳ್ ಗ್ರಾಮದ ಸರ್ವೇ ನಂ. 63/1 ರ 2 ಎಕರೆ ಭೂಮಿ ಮತ್ತು ಗೌಡನಹಳ್ಳಿಯ ಸ.ನಂ. 44 ರ 2 ಎಕರೆ 31 ಗುಂಟೆ ಭೂಮಿಯನ್ನು ತಮ್ಮ ಪತಿ ರಮೇಶ್ ಈ ಹಿಂದೆ ಖರೀದಿಸಿದ್ದು, ಅದನ್ನು ಕೆಐಎಡಿಬಿಯು ಭೂಸ್ವಾಧಿನ ಪಡಿಸಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಭೂಮಾಲೀಕರಿಗೆ ಕೆಐಎಡಿಬಿ ನಿಯಮಾನುಸಾರ ಪರಿಹಾರ ಹಣವನ್ನು ಕೊಡಬೇಕು. ಇದಕ್ಕೆ ಅಗತ್ಯವಿರುವ ಎಲ್ಲ ಮೂಲ ದಾಖಲಾತಿಗಳನ್ನು ಸಕಾಲಕ್ಕೆ ಒದಗಿಸಿದ್ದರು ಕೆಐಎಡಿಬಿ ಭೂಸ್ವಾಧಿನಾಧಿಕಾರಿಗಳು ಕುಂಟುನೆಪಗಳನ್ನು ಹೇಳುತ್ತಾ ನಮಗೆ ನೀಡಬೇಕಾದ ಪರಿಹಾರ ಹಣವನ್ನು ನೀಡದೆ ದುರುದ್ದೇಶದಿಂದ ಅಲೆದಾಡಿಸುತ್ತಿದ್ದು ಮಾನಸಿಕವಾಗಿ ಕಿರುಕುಳ ಕೊಡುತ್ತಿರುವುದಾಗಿ ಪತ್ರದಲ್ಲಿ ದೂರಿದ್ದಾರೆ.