ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.27 ರಂದು ಬೆಳಗ್ಗೆ 10 ಗಂಟೆಯಿಂದ ತಾಲೂಕು ಕಚೇರಿ ಮುಂಭಾಗದಿಂದ ಜಾನಪದ ಕಲಾಮೇಳಗಳು, ಎತ್ತಿನಗಾಡಿ ಮೆರವಣಿಗೆ, ಸೋಮನ ಕುಣಿತ, ಕುದುರೆಯ ಮೇಲೆ ಕೆಂಪೇಗೌಡರ ವೇಷಧಾರಿ ಮೆರವಣಿಗೆ, ನಗಾರಿ ಸಮೇತ ಬಸವಣ್ಣನ ಮೆರವಣಿಗೆ, ಚಂಡೆವಾದ್ಯ, ಕೋಲಾಟ, ರಂಗನ ಕುಣಿತ, ಹಾಗೂ ಸಿಡಿಮದ್ದಿನ ಚಮತ್ಕಾರದೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ದಬ್ಬೇಘಟ್ಟ ರಸ್ತೆಯಲ್ಲಿರುವ ಬಿಜಿಎಸ್ ಸಮುದಾಯ ಭವನಕ್ಕೆ ಕರೆ ತರಲಾಗುವುದು. ಇದಕ್ಕೂ ಮೊದಲು ಬಿಜಿಎಸ್ ಒಕ್ಕಲಿಗರ ಸಮುದಾಯ ಭವನದ ಮುಂಭಾಗದಿಂದ ನೂರಾರು ಯುವಕರಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.