ಪ್ರೊ.ಎಸ್​ಜಿಎಸ್​ಗೆ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ ಪ್ರಶಸ್ತಿ

ಪ್ರೊ.ಎಸ್​.ಜಿ.ಸಿದ್ದರಾಮಯ್ಯ
ಪ್ರೊ.ಎಸ್​.ಜಿ.ಸಿದ್ದರಾಮಯ್ಯ
Published on
ತುಮಕೂರು: ಕವಿ, ವಿಮರ್ಶಕ ಮತ್ತು ಸಾಹಿತಿ ಪ್ರೊ.ಎಸ್​.ಜಿ.ಸಿದ್ದರಾಮಯ್ಯಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ ಪ್ರಶಸ್ತಿ ಸಂದಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಸಿಂಗಾಪುರದ ಸಿದ್ದರಾಮಯ್ಯ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದಾರೆ.
ಶ್ರೀ ಸಿದ್ದಗಂಗಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿ ನಂತರ ಸರ್ಕಾರಿ ಕಾಲೇಜು ಕನ್ನಡ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಎಸ್​ಜಿಎಸ್​ ಕನ್ನಡದ ಪ್ರಮುಖ ಸಾಹಿತಿ, ಕವಿ, ವಿಮರ್ಶಕರಲ್ಲೊಬ್ಬರು. ವಚನ ಸಾಹಿತ್ಯ ಹಾಗೂ ಜಾನಪದದಲ್ಲಿ ಆಳವಾದ ಜ್ಞಾನ ಹೊಂದಿರುವ ಸಿದ್ದರಾಮಯ್ಯ ಅವರು ಕಾವ್ಯ, ನಾಟಕ, ಸಾಹಿತ್ಯ ವಿಮರ್ಶೆ, ಅನುಭವಕಥನ ಹೀಗೆ ಎಲ್ಲಾ ವಿಭಾಗಗಳ ಸಾಹಿತ್ಯ ಕೃಷಿಯಲ್ಲಿ ಕೈಯಾಡಿಸಿದ್ದಾರೆ.
ಕನ್ನಡ ಸಾಹಿತ್ಯ ಅಕಾಡೆಮಿ, ಜಿ.ಎಸ್​.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಪು.ತಿ.ನ.ಕಾವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net